Omicron XXB.1.5 variant: ಭಾರತಕ್ಕೆ ಕಾಲಿಟ್ಟ ಮತ್ತೊಂದು ಕೊರೊನಾ ಹೊಸ ರೂಪಾಂತರ: ಗುಜರಾತ್‌ ನಲ್ಲಿ ಮೊದಲ ಪ್ರಕರಣ ಪತ್ತೆ

ಗುಜರಾತ್:‌ (Omicron XXB.1.5 variant) ವಿದೇಶದಲ್ಲಿ ಕೊರೊನಾ ಸೋಂಕು ಉಲ್ಭಣವಾದ ಹಿನ್ನಲೆಯಲ್ಲಿ ರಾಜ್ಯಾ ಹಾಗೇ ದೇಶದಲ್ಲೂ ಕೊರೊನಾ ಅತಂಕ ಹೆಚ್ಚಾಗಿದೆ. ಈ ಮಧ್ಯೆ ಕೊರೊನಾದ ಮತ್ತೊಂದು ಹೊಸ ರೂಪಾಂತರಿ ತಳಿ ಭಾರತಕ್ಕೆ ಕಾಲಿಟ್ಟಿದ್ದು. ಗುಜರಾತ್‌ ನಲ್ಲಿ ಮೊದಲ ಒಮಿಕ್ರಾನ್‌ XXB.1.5 ರೂಪಾಂತರದ ಪ್ರಕರಣ ದೃಢಪಟ್ಟಿದೆ.

ಅಮೇರಿಕಾದಲ್ಲಿ ವರದಿಯಾಗುತ್ತಿರುವ ಶೇಕಡಾ ನಲವತ್ತಕ್ಕಿಂಲೂ ಹೆಚ್ಚು ಪ್ರಕರಣಗಳಿಗೆ ಒಮಿಕ್ರಾನ್‌ XXB.1.5 ರೂಪಾಂತರಿ (Omicron XXB.1.5 variant) ತಳಿಯೇ ಕಾರಣ ಎಂದು ರೋಗ ನಿಯಂತ್ರ ಮತ್ತು ತಡೆ ಕಾಯ್ದೆ ಅಮೇರಿಕಾ ದೃಢಪಡಿಸಿದೆ. ಈ XXB.1.5 ರೂಪಾಂತರಿ ತಳಿ BQ ಮತ್ತು XBB ಗಿಂಗಲೂ ಅಪಾಯಕಾರಿ ಹಾಗೂ ಈ ರೂಪಾಂತರಿ ವೈರಸ್‌ ಪ್ರತಿರಕ್ಷಣಾ ವ್ಯವಸ್ಥೆಯಿಂದಲೂ ಕೂಡ ತಪ್ಪಿಸಿಕೊಂಡು ಸೋಂಕು ಉಂಟುಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಅಮೇರಿಕಾದಲ್ಲಿ ಅತಿಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಹೆಚ್ಚಿನ ಸೋಂಕಿತರಲ್ಲಿ XXB.1.5 ರೂಪಾಂತರಿ ಸೋಂಕು ದೃಢಪಟ್ಟಿದೆ. ಇದೀಗ ಅಮೇರಿಕಾದಲ್ಲಿ ತಾಂಡವವಾಡುತ್ತಿದ್ದ, ಹೊಸ ರೂಪಾಂತರಿ ತಳಿ ಭಾರತಕ್ಕೂ ಕಾಲಿಟ್ಟಿದ್ದು, ಗುಜರಾತ್‌ ನಲ್ಲಿ ಮೊದಲ ಕೇಸ್‌ ದೃಢಪಟ್ಟಿದೆ.

ಇದನ್ನೂ ಓದಿ : Udupi mask compulsory: ಉಡುಪಿಯ ಚಿತ್ರಮಂದಿರ, ಮಾಲ್‌ ಹೋಟೆಲ್‌ ಗಳಲ್ಲಿ ಮಾಸ್ಕ್‌ ಕಡ್ಡಾಯ

ಈ ಹಿನ್ನಲೆಯಲ್ಲಿ ದೇಶದಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದ್ದು, ಮುಂದೆ ಬರುವ ಹೊಸ ರೂಪಾಂತರಿ ತಳಿಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ.

ಇದನ್ನೂ ಓದಿ : Break for New year: ಹೊಸ ವರ್ಷಾಚರಣೆಗೆ ಬ್ರೇಕ್:‌ ನಂದಿಗಿರಿಧಾಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಇದನ್ನೂ ಓದಿ : Omicron BF.7 Health Tips: ಕೋವಿಡ್‌ ನಿಮ್ಮ ಹತ್ತಿರ ಸುಳಿಯದಿರಲು ಈ ಆಹಾರ ಕ್ರಮ ಪಾಲನೆ ಮಾಡಿ

ಇದನ್ನೂ ಓದಿ : Random corona test: ರಾಜ್ಯದಲ್ಲಿ ಕೊರೊನಾ ಭೀತಿ: ಯಾದೃಚ್ಛಿಕ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ತಜ್ಞರ ಮನವಿ

ಇದನ್ನೂ ಓದಿ : Corona tough rules: ಕೊರೊನಾ ಆತಂಕ: ಕೆಂಪೇಗೌಡ ಏರ್‌ ಪೋರ್ಟ್‌ ನಲ್ಲಿ ತೀವ್ರ ತಪಾಸಣೆ

Another new variant of Corona has entered India. First case of Omicron XXB.1.5 mutation confirmed in Gujarat.

Comments are closed.