ರಿಷಬ್​ ಶೆಟ್ಟಿಯಿಂದ ಮುಂದುವರಿದ ಡಿಜಿಟಲ್​ ಡಿಟಾಕ್ಸ್​ – ಪತ್ನಿ ಪ್ರಗತಿ ಹೊರತುಪಡಿಸಿ ಮಿಕ್ಕೆಲ್ಲರೂ ಅನ್​ಫಾಲೋ – ತನ್ನ ನಿರ್ಮಾಣ ಸಂಸ್ಥೆಗಳಿಗೆ ಮಾತ್ರ ಫಾಲೋವಿಂಗ್​ ಸ್ಥಾನ

ಯುಗಾದಿ ಹಬ್ಬದಂದು ಹೊಸ ಅಧ್ಯಾಯ ಶುರು ಎಂದು ಪೋಸ್ಟ್​ ಹಾಕಿದ್ದ ಡಿವೈನ್​ ಸ್ಟಾರ್​ ರಿಷಭ್​ ಶೆಟ್ಟಿ ( Rishab Shetty) ತಮ್ಮ ಇನ್​ ಸ್ಟಾಗ್ರಾಂ ಖಾತೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಡಿಜಿಟಲ್​ ಡಿಟಾಕ್ಸ್​ ಹಾದಿ ತುಳಿದಿರುವ ನಟ ರಿಷಭ್​ ಶೆಟ್ಟಿ ತಮ್ಮ ಅತ್ಯಾಪ್ತ ಬಳಗಳಿಗೆ ಫಾಲೋವಿಂಗ್​ ಸ್ಥಾನದಿಂದ ಕೊಕ್​ ನೀಡಿದ್ದು, ಕೇವಲ ಮೂರು ಖಾತೆಗಳನ್ನು ಮಾತ್ರ ಫಾಲೋವಿಂಗ್​ ಪಟ್ಟಿಯಲ್ಲಿ ಉಳಿಸಿಕೊಂಡಿದ್ದಾರೆ.ಅತ್ಯಾಪ್ತ ಬಳಗ, ದೈತ್ಯ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನೇ ಅನ್​ಫಾಲೋ ಮಾಡಿರುವ ರಿಷಭ್​ ನಿರ್ಧಾರ ಚಿತ್ರರಂಗಕ್ಕೆ ನಿಜಕ್ಕೂ ಅಚ್ಚರಿ ತಂದಿದೆ.

ಕಾಂತಾರ 1 ಸಿನಿಮಾ ಸಂದರ್ಭದಲ್ಲಿ ರಿಷಭ್​ರ ಮೇಲೆ ನಂಬಿಕೆಯಿಟ್ಟು ಕೋಟಿಗಟ್ಟಲೇ ಬಂಡವಾಳ ಹೂಡಿಕೆ ಮಾಡಿ ರಿಷಭ್​ ಶೆಟ್ಟಿ ಸಿನಿ ಜೀವನದ ಬಹುದೊಡ್ಡ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೊಂಬಾಳೆ ಫಿಲ್ಮ್ಸ್​ನ್ನು ಇನ್​ಸ್ಟಾದಿಂದ ರಿಮೂವ್​ ಮಾಡಿದ್ದಾರೆ ರಿಷಬ್​ ಶೆಟ್ಟಿ. ಇದು ಸಾಲದು ಎಂಬಂತೆ, ಇದೇ ಕಾಂತಾರ ಸಿನಿಮಾದಲ್ಲಿ ರಿಷಭ್​ ಶೆಟ್ಟಿಗೆ ನೆರಳಾಗಿ ನಿಂತು ಸಹಕರಿಸಿದ್ದ ನಟ ರಾಜ್​ ಬಿ ಶೆಟ್ಟಿಯವರನ್ನು ಫಾಲೋವಿಂಗ್​ ಲಿಸ್ಟ್​ನಿಂದ ಅಳಿಸಿ ಹಾಕಿದ್ದಾರೆ. ಇದಾದ ಬಳಿಕ ಸಹನಟಿ ರುಕ್ಮಿಣಿ ವಸಂತ್​ರನ್ನು ಫಾಲೋವಿಂಗ್​ ಪಟ್ಟಿಯಿಂದ ಹೊರಗಿಟ್ಟಿದ್ದರು. ಇದೀಗ ಕೊನೆಯದಾಗಿ ಪತ್ನಿ ಪ್ರಗತಿ ಶೆಟ್ಟಿ, ರಿಷಭ್​ ಶೆಟ್ಟಿ ಫಿಲ್ಮ್ಸ್​, ರಿಷಭ್​ ಶೆಟ್ಟಿ ಫೌಂಡೇಶನ್​ ಪೇಜ್​ಗಳನ್ನು ಮಾತ್ರ ನಟ ರಿಷಬ್​ ಶೆಟ್ಟಿ ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ: Sai Pallavi Marriage : ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಾ ನಟಿ ಸಾಯಿಪಲ್ಲವಿ..?

ನಟ ರಿಷಭ್​ ಶೆಟ್ಟಿ ಈ ನಿರ್ಧಾರ ಏಕೆ ತೆಗೆದುಕೊಂಡರು ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಮೂಲಗಳ ಪ್ರಕಾರ ಕಾಂತಾರ ಚಾಪ್ಟರ್​ 1 ಸಿನಿಮಾ ಯಶಸ್ಸಿನ ಬಳಿಕ ಹೊಂಬಾಳೆ ಹಾಗೂ ರಿಷಬ್​ ನಡುವೆ ವೈಮನಸ್ಯ ಮೂಡಿತ್ತು ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಆದರೆ ಯಾವುದಕ್ಕೂ ಯಾರಿಂದಲೂ ಈವರೆಗೆ ಉತ್ತರ ದೊರಕಿಲ್ಲ. ಅಲ್ಲದೇ ಸ್ಟಾರ್​ ನಟರು ಕೇವಲ ತಮ್ಮ ಪತ್ನಿಯನ್ನು ಮಾತ್ರ ಫಾಲೋ ಮಾಡೋದು ಹಳೆ ಟ್ರೆಂಡ್​. ಹೀಗಾಗಿ ರಿಷಭ್​ ಶೆಟ್ಟಿ ಕೂಡ ಇದೇ ಹಾದಿ ತುಳಿದ್ರಾ ಅನ್ನೋ ಪ್ರಶ್ನೆ ಕೂಡ ಎಲ್ಲೆಡೆ ಹುಟ್ಟಿಕೊಂಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories