ಖ್ಯಾತ ಹಿರಿಯ ಹಾಸ್ಯ ನಟ ರಾಕ್‌ಲೈನ್‌ ಸುಧಾಕರ್ ನಿಧನ

0

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯನಟರುಗಳಲ್ಲಿ ಒಬ್ಬರಾದ ರಾಕ್‌ಲೈನ್ ಸುಧಾಕರ್ ನಿಧನರಾಗಿದ್ದಾರೆ. ಸಿನಿಮಾ ಶೂಟಿಂಗ್ ನಲ್ಲ ಭಾಗಿಯಾಗಿದ್ದ ವೇಳೆಯಲ್ಲಿ ಸಿನಿಮಾ ಸೆಟ್‌ನಲ್ಲಿಯೇ ಅವರು ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಇತ್ತೀಚೆಗಷ್ಟೆ ನಟ ರಾಕ್‍ಲೈನ್ ಸುಧಾಕರ್ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ನಂತರ ಸಿನಿಮಾ ಕೆಲಸಗಳಲ್ಲಿ ಸುಧಾಕರ್ ಸಕ್ರಿಯರಾಗಿದ್ದರು.

ಸುಧಾಕರ್ ಅವರು ಇಂದು ಚಿತ್ರೀಕರಣಕ್ಕೆ ಹಾಜರಾಗಿದ್ದರು. ಆದರೆ ಸುಧಾಕರ್ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತವಾಗಿ ಸುಧಾಕರ್ ವಿಧಿವಶರಾಗಿದ್ದಾರೆ.

Leave A Reply

Your email address will not be published.