ಪತಿಯಿಂದ ಪತ್ನಿ ಹಾಗೂ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ : ಇಬ್ಬರ ಸ್ಥಿತಿ ಗಂಭೀರ

0

ಸುಳ್ಯ : ಕೌಟುಂಬಿಕ ಕಲಹದಿಂದಾಗಿ ಪತಿಯೋರ್ವ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಘಟನೆಯಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲಲ್ಎಯ ಸುಳ್ಯ ತಾಲೂಕಿನ ಕೊಣಾಲು ಗ್ರಾಮದ ಪಾಂಡಿಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ನೆಲ್ಯಾಡಿಯ ನಿವಾಸಿ ಬಿಜು ಎಂಬಾತ ತನ್ನ ಪತ್ನಿಯ ಶೈನಿ ಹಾಗೂ ಅವರ ಚಿಕ್ಕಮ್ಮ ಝಾನ್ಸಿ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ. ಘಟನೆಯಿಂದಾಗಿ ಪತ್ನಿಯ ಚಿಕ್ಕಮ್ಮ ಝಾನ್ಸಿಗೆ ಮುಖ, ಕಣ್ಣಿನ ಭಾಗಕ್ಕೆ ಸುಟ್ಟ ಗಾಯಗಳಾಗಿ ಗಂಭೀರಗೊಂಡಿದ್ದಾರೆ.

ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.