ಮತ್ತೊಮ್ಮೆ ತೆರೆಗೆ ಬರ್ತಿದ್ದಾರೆ ವಿಷ್ಣುದಾದಾ-ರಜನಿ: ಇಂದಿನಿಂದ ಸಹೋದರರ ಸವಾಲ್ ಸಿನಿಶೋ ಆರಂಭ

ಸಪ್ಟೆಂಬರ್ 18  ಸ್ಯಾಂಡಲ್ ವುಡ್ ನ ದಾದಾ ವಿಷ್ಣುವರ್ಧನ್ ಹುಟ್ಟುಹಬ್ಬ. ದಾದಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಶಲ್ ಗಿಫ್ಟ್ ಸಿಗ್ತಿದ್ದು, ಇಂದಿನಿಂದಲೇ ರಾಜ್ಯದ ಹಲವು ಥೀಯೇಟರ್ ಗಳಲ್ಲಿ ವಿಷ್ಣು-ರಜನಿ ಅಭಿನಯದ ಹಿಟ್ ಚಿತ್ರ ಸಹೋದರರ ಸವಾಲ್ ರೀ ರಿಲೀಸ್ ಆಗಲಿದೆ.

ಡಾ.ವಿಷ್ಣುವರ್ಧನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಒಟ್ಟಿಗೆ ಮತ್ತೊಮ್ಮೆ ತೆರೆ ಮೇಲೆ ನೋಡೋ ಅವಕಾಶ ಕನ್ನಡಿಗರಿಗೆ ಸಿಗಲಿದ್ದು, ಸೆ.15 ರಿಂದಲೇ ಚಿತ್ರ ವೀಕ್ಷಣೆಗೆ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.

ಬೆಂಗಳೂರಿನ ಭೂಮಿಕಾ, ಅಭಿನಯ,ಸಿದ್ದೇಶ್ವರ, ಉಲ್ಲಾಸ್, ಲಕ್ಷ್ಮೀವಜ್ರೇಶ್ವರಿ ಚಿತ್ರಮಂದಿರದಲ್ಲಿ ಸಹೋದರರ ಸವಾಲ್ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಲಿದೆ. 1977 ರಲ್ಲಿ ಕೆ.ಎಸ್.ಆರ್.ದಾಸ್ ನಿರ್ದೇಶನದಲ್ಲಿ ಮೂಡಿಬಂದಿದ್ದ  ಈ ಸಿನಿಮಾದಲ್ಲಿ ಸಹೋದರರ ಪಾತ್ರದಲ್ಲಿ ವಿಷ್ಣು ಹಾಗೂ ರಜನಿಕಾಂತ್ ನಟಿಸಿದ್ದರು.

ಪದ್ಮಪ್ರಿಯಾ,ಕವಿತಾ,ಜಯಮಾಲಿನಿ ನಾಯಕಿಯರಾಗಿದ್ದ  ಈ ಸಿನಿಮಾ ಚಿತ್ರಕತೆ ಹಾಗೂ ನಟನೆಯ ಕಾರಣಕ್ಕೆ ಸಖತ್ ಹಿಟ್ ಎನ್ನಿಸಿತ್ತು. ಎಸ್.ಪಿ.ಬಿ ಎಲ್ಲ ಹಾಡುಗಳಿಗೆ ಧ್ವನಿಯಾಗಿದ್ದರು. ಚೆಲ್ಲಪಿಲ್ಲ ಸತ್ಯಂ ಸಂಗೀತ ನೀಡಿದ್ದ ಸಿನಿಮಾದ ಕತೆಯನ್ನು ಎಂಡಿಸುಂದರ್ ಬರೆದಿದ್ದರು.

ಡಾ.ವಿಷ್ಣುವರ್ಧನ್ 71 ನೇ ಹುಟ್ಟುಹಬ್ಬದ ಅಂಗವಾಗಿ ಸಿನಿಮಾ ರೀ ರೀಲಿಸ್ ಆಗಲಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

( sahodarara savaal kannada movie re-releasing on sept.17th )

Comments are closed.