ಕನ್ನಡ ಶಾಲೆಗೆ ಕಿಚ್ಚನ್ ನೆರವಿನ ಹಸ್ತ….! ತವರಿನ ಶಾಲೆಯನ್ನು ದತ್ತು ಪಡೆದ ಸುದೀಪ…!!

ಒಂದಾದ ಮೇಲೊಂದು ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿರೋ ರಿಯಲ್ ಲೈಫ್ ನಲ್ಲೂ ಹೀರೋ ಎನ್ನಿಸಿದ್ದಾರೆ. ಕೊರೋನಾ ಸಂತ್ರಸ್ಥರಿಗೆ ನೆರವಾದ ಬಳಿಕ ಸುದೀಪ್ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಹಳೆಯ ಶಾಲೆಯೊಂದನ್ನು ದತ್ತು ಪಡೆಯುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.

ಸುದೀಪ್ ತವರು ಜಿಲ್ಲೆಯಾಗಿರುವ ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಕನ್ನಡ ಶಾಲೆಯನ್ನು  ಸುದೀಪ್ ಟ್ರಸ್ಟ್ ದತ್ತು ಪಡೆದಿದೆ. ಸರ್ಕಾರದ ರೂಲ್ಸ್ ಪ್ರಕಾರ ದತ್ತು ಪಡೆದಿರುವ ಸುದೀಪ್ ಗೆ ಕ್ಷೇತ್ರಶಿಕ್ಷಣಾಧಿಕಾರಿಗಳ  ಅನುಮತಿ ಪತ್ರ ಸಹ ನೀಡಿದ್ದಾರೆ.

ಸರ್ಕಾರ ರೂಪಿಸಿರುವ ಶಾಲೆಗಾಗಿ ನಾವು-ನೀವು  ಯೋಜನೆಯಡಿ ಈ ಶಾಲೆಯನ್ನು ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ದತ್ತು ಪಡೆದಿದ್ದು, ಸುದೀಪ್ ಟ್ರಸ್ಟ್ ರೂಪಿಸುವ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಶಿಕ್ಷಣ ಇಲಾಖೆ ಭರವಸೆ ನೀಡಿದೆ.

ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಹಲವು ವರ್ಷಗಳಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಕೊರೋನಾ ಸಂದರ್ಭದಲ್ಲಿ ಚಿತ್ರಕಲಾವಿದರು, ಕಾರ್ಮಿಕರು,ತಂತ್ರಜ್ಞರು,ಹಿರಿಯ ಕಲಾವಿದರಿಗೆ ನೆರವು ನೀಡಿದ್ದರು.

ಮಾತ್ರವಲ್ಲ ಚಾಮರಾಜನಗರದ ಗುಂಡ್ಲುಪೇಟೆಯ ಪ್ರಥ್ವಿ ಮಕ್ಕಳ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೂ ನೆರವು ನೀಡಿದ್ದರು. ಅಲ್ಲದೇ ಶಿಕ್ಷಕರಿಗೂ 2 ಸಾವಿರ ರೂಪಾಯಿ ಸಹಾಯಧನ ಪ್ರಕಟಿಸಿದ್ದರು.

Comments are closed.