ಗದಂಗ್ ರಕ್ಕಮ್ಮನಾಗಿ ಸ್ಯಾಂಡಲ್ ವುಡ್ ಗೆ ಶ್ರೀಲಂಕಾಚೆಲುವೆ…! ಜಾಕ್ವಲಿನ್ ಹಾಟ್ ಲುಕ್ ಗೆ ಅಭಿಮಾನಿಗಳು ಖುಷ್…!!

ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಸುದೀಪ್ ಬಹುನೀರಿಕ್ಷಿತ ಚಿತ್ರ ವಿಕ್ರಾಂತ್ ರೋಣಾದಲ್ಲಿ ಶ್ರೀಲಂಕಾ ಚೆಲುವೆಯ ಫರ್ಸ್ಟ್ ಲುಕ್ ರಿವೀಲ್ ಆಗಿದೆ. ಜಾಕ್ವಲಿನ್ ಫರ್ನಾಂಡಿಸ್ ಗದಂಗ್ ರಕ್ಕಮ್ಮನ್ನಾಗಿ  ಸಖತ್ ಪೋಸ್ ನೀಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ವಿಕ್ರಾಂತ್ ರೋಣಾ ಸಿನಿಮಾ ತಂಡ ಘೋಷಿಸಿದಂತೆ ಜುಲೈ 31 ರಂದು ಜಾಕ್ವಲಿನ್ ಫರ್ನಾಂಡಿಸ್ ಹಾಡು ಹಾಗೂ ಪಾತ್ರದ ಫರ್ಸ್ಟ್ ಲುಕ್ ರಿವೀಲ್ ಮಾಡಿದೆ. ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಚಿತ್ರತಂಡ ಸೇರಿದ ಜಾಕ್ವಲಿನ್ ಕೊನೆಗೆ ವಿಶೇಷ ಪಾತ್ರದಲ್ಲೂ ನಟಿಸಿದ್ದಲ್ಲದೇ ಕನ್ನಡದಲ್ಲೇ ಡಬ್ಬಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಜಾಕ್ವಲಿನ್ ಫರ್ನಾಂಡಿಸ್ ಮೋಷನ್ ಪೋಸ್ಟರ್ ನಲ್ಲಿ ಹಾಟ್ ಪೋಸ್ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕನ್ನಡ,ಹಿಂದಿ,ತೆಲುಗು,ತಮಿಳು,ಮಲೆಯಾಳಂನಲ್ಲೂ ಪೋಸ್ಟರ್ ರಿಲೀಸ್ ಆಗಿದೆ.

ಜುಲೈ ಮೂರನೇ ವಾರದಲ್ಲಿ ಜಾಕ್ವಲಿನ್ ಫರ್ನಾಂಡಿಸ್ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವಿಕ್ರಾಂತ್ ರೋಣಾ ಮೇಕಿಂಗ್ ನೋಡಿ ಖುಷಿಯಾದ ಜಾಕ್ವಲಿನ್  ವಿಶೇಷ ಪಾತ್ರದಲ್ಲಿ ನಟಿಸಿದ್ದು, ಗದಂಗ್ ರಕ್ಕಮ್ಮ ಎಂದು ಜಾಕ್ವಲಿನ್ ಪಾತ್ರವನ್ನು ಚಿತ್ರತಂಡ ರಿವೀಲ್ ಮಾಡಿದೆ.

ಜಾಕ್ವಲಿನ್ ಜೊತೆ ಹೆಜ್ಜೆ ಹಾಕಿದ್ದನ್ನು ಸುದೀಪ್ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ನಿಮ್ಮ ಅದ್ಭುತ ನೃತ್ಯ ನನ್ನನ್ನೂ ಡ್ಯಾನ್ಸ್ ಮಾಡುವಂತೆ ಮಾಡಿತು ಎಂದಿದ್ದರು. ಸಾಕಷ್ಟು ಕುತೂಹಲ ಮೂಡಿಸಿರುವ ವಿಕ್ರಾಂತ್ ರೋಣಾ ಸಿನಿಮಾ ಐಎಂಡಿಬಿ ರೇಟಿಂಗ್ ನಲ್ಲಿ ಕೆಜಿಎಫ್-2 ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ.

Comments are closed.