ಟೈಟಾನಿಕ್ ಸಿನಿಮಾ : 25 ವರ್ಷಗಳ ಬಳಿಕ ನಾಯಕನ ಸಾವಿನ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ಜೇಮ್ಸ್ ಕ್ಯಾಮರನ್

ಸಿನಿಮಾ ಇತಿಹಾಸದಲ್ಲಿಯೇ ‘ಟೈಟ್ಯಾನಿಕ್’ ಸಿನಿಮಾಕ್ಕೆ (Titanic movie) ತನ್ನದೇ ಆದ ಪ್ರಮುಖ ಪಾತ್ರವಿದೆ. ವಿಶ್ವವೇ ಬೆರಗಾಗಿ ನೋಡಿದ್ದ ‘ಟೈಟ್ಯಾನಿಕ್’ ಸಿನಿಮಾ ಬಿಡುಗಡೆ ಆಗಿ 25 ವರ್ಷ ದಾಟಿದೆ. ಟೈಟ್ಯಾನಿಕ್ ಸಿನಿಮಾದ ಪ್ರತಿ ವಿಷಯವನ್ನೂ ಪ್ರೇಕ್ಷಕರು ಸೆಲೆಬ್ರೇಟ್ ಮಾಡಿದ್ದರು. ಭಾರಿ ದೊಡ್ಡ ಸ್ಕೇಲ್‌ನಲ್ಲಿ ಸಿನಿಮಾ ಮಾಡಿದ್ದರೂ ಸಹ ಸಿನಿಮಾದಲ್ಲಿ ತಪ್ಪಿಲ್ಲದಂತೆ ಕಟ್ಟಲಾಗಿತ್ತು. ಆದರೆ ಸಿನಿಮಾದ ಕ್ಲೈಮ್ಯಾಕ್ಸ್‌ ಬಗ್ಗೆ ಆಗಲೂ ಈಗಲೂ ಸಹ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಾಯಕಿ ರೋಸ್‌ಳನ್ನು ಕಾಪಾಡುವ ನಾಯಕ ಜಾಕ್ ಕೊನೆಯಲ್ಲಿ ರೋಸ್‌ಳನ್ನು ಒಂದು ಮರದ ಹಲಗೆಯ ಮೇಲೆ ಮಲಗಿಸುತ್ತಾನೆ. ಅವನೂ ಸಹ ಮರದ ಹಲಗೆಯ ಮೇಲೆ ಏರಲು ಹೋದಾಗ ಅದು ಸಾಧ್ಯವಾಗುವುದಿಲ್ಲ ಹಾಗಾಗಿ ಜಾಕ್ ಆ ಮರದ ಹಲಗೆ ಏರದೆ ನೀರಿನಲ್ಲಿಯೇ ಉಳಿದು ಜೀವ ಬಿಡುತ್ತಾನೆ. ರೋಸ್ ಬದುಕುತ್ತಾಳೆ. ನಾಯಕ ಜಾಕ್ ತುಸು ಪ್ರಯತ್ನ ಪಟ್ಟಿದ್ದಿದ್ದರೆ ಆ ಮರದ ಹಲಗೆಯ ಮೇಲೆ ಏರಬಹುದಿತ್ತು, ಸಿನಿಮಾದಲ್ಲಿ ಅಷ್ಟು ಬುದ್ಧಿವಂತನಾಗಿದ್ದ ಜಾಕ್‌ಗೆ ಸಣ್ಣ ಮರದ ಹಲಗೆಯ ಮೇಲೆ ಏರಲಾಗಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರೇಕ್ಷಕರು ಕೇಳುತ್ತಲೇ ಬಂದಿದ್ದರು. ಜಾಕ್ ಪಾತ್ರವನ್ನು ಕೊಂದು ಸಿನಿಮಾಕ್ಕೆ ಟ್ರ್ಯಾಜಿಕ್ ಅಂತ್ಯ ನೀಡಲೆಂದೇ ನಿರ್ದೇಶಕರು ಹೀಗೆ ಮಾಡಿದ್ದಾರೆ ಎಂದು ಹಲವರು ವಾದಿಸಿದ್ದರು.ಆದರೆ ಇದೀಗ ‘ಟೈಟ್ಯಾನಿಕ್’ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಎಲ್ಲ ಪ್ರಶ್ನೆಗಳಿಗೂ ಪ್ರಾತ್ಯಕ್ಷಿತೆಯ ಮೂಲಕ ಉತ್ತರ ನೀಡಿದ್ದಾರೆ.

ಸಿನಿಮಾದಲ್ಲಿ ತೋರಿಸಲಾಗಿರುವಂತೆಯೇ ಒಂದು ಮರದ ಹಲಗೆ ನಿರ್ಮಿಸಿ ಅದನ್ನು ನೀರಿನಲ್ಲಿ ತೇಲಿ ಬಿಟ್ಟು ಅದರ ಮೇಲೆ ಹುಡುಗ, ಹುಡುಗಿಯನ್ನು ಹತ್ತಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಹಲವು ಬೇರೆ ಬೇರೆ ಕೋನಗಳಲ್ಲಿ ಇಬ್ಬರೂ ಮರದ ಹಲಗೆ ಏರಲು ಯತ್ನಿಸಿದರೂ ಸಹ ಸಾಧ್ಯವಾಗಿಲ್ಲ. ಆದರೆ ಒಬ್ಬರು ಮಾತ್ರವೇ ಒಂದು ಸಮಯಕ್ಕೆ ಹಲಗೆ ಏರಿದ್ದಾರೆ. ಕೊನೆಗೆ ಪ್ರಯೋಗ ನಡೆಸಿದ ತಂಡ ಇಬ್ಬರನ್ನೂ ಮರದ ಹಲಗೆಯ ಮೇಲೆ ನಿಲ್ಲಿಸಿದಾಗ, ಇಬ್ಬರೂ ಮುಳುಗಿದ್ದಾರೆ.

ಈ ಪ್ರಯೋಗವನ್ನು ಸ್ವತಃ ‘ಟೈಟ್ಯಾನಿಕ್’ ನಿರ್ದೇಶಕ ಜೇಮ್ಸ್ ಕ್ಯಾಮರನ್ ಮುಂದಾಳತ್ನದಲ್ಲಿಯೇ ಮಾಡಲಾಗಿದೆ. ಟೈಟಾನಿಕ್ ಮುಳುಗಿದಾಗ ಇದ್ದ ಹವಾಮಾನವನ್ನೇ ಕೃತಕವಾಗಿ ಸೃಷ್ಟಿಸಿ ಅದರಲ್ಲಿ ಪ್ರಯೋಗ ಮಾಡಲಾಗಿದೆ. ಪ್ರಯೋಗಕ್ಕೆ ಬಳಸಿರುವ ಯುವಕ-ಯುವತಿಗೆ ಸಿನಿಮಾದಲ್ಲಿನಂತೆಯೇ ಬಟ್ಟೆಗಳನ್ನು ತೊಡಿಸಲಾಗಿದ್ದು, ಯುವತಿಗೆ ಲೈಫ್ ಜಾಕೆಟ್‌ ಹಾಕಲಾಗಿದೆ. ಆದರೆ ಯುವಕನಿಗೆ ಲೈಫ್ ಜಾಕೆಟ್ ಹಾಕಿಲ್ಲ. ಇದರಿಂದ ಪ್ರಯೋಗದಲ್ಲಿ ಯುವಕನು, ಸಿನಿಮಾದಲ್ಲಿ ಜಾಕ್‌ ಅನುಭವಿಸಿದ ಚಳಿಗಿಂತಲೂ ತೀವ್ರತರವಾದ ಚಳಿ ಅನುಭವಿಸಿದ್ದಾನೆ.

ಇದನ್ನೂ ಓದಿ : ವಾಣಿ ಜಯರಾಂ ಸಾವು ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ವಿಚಾರ ಬಹಿರಂಗ

ಇದನ್ನೂ ಓದಿ : B.K.S. Varma death: ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್‌. ವರ್ಮಾ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : “ಕನ್ನಡತಿ” ಮುಗೀತು : ಶೀಘ್ರದಲ್ಲಿ ನಿಮ್ಮನ್ನು ರಂಜಿಸಲು ಬರುತ್ತೇನೆ ಎಂದ ‘ಕನ್ನಡ ಟೀಚರ್’

ಜೇಮ್ಸ್ ಕ್ಯಾಮರನ್ ಬಹಳ ಯೋಚಿಸಿಯೇ ಆ ದೃಶ್ಯವನ್ನು ಸೃಷ್ಟಿಸಿದ್ದರು. ವಿಶ್ವದ ಶ್ರೇಷ್ಠ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು ‘ಟೈಟ್ಯಾನಿಕ್’ ಮಾತ್ರವೇ ಅಲ್ಲದೆ ವಿಶ್ವ ಪ್ರಸಿದ್ಧ ಸಿನಿಮಾಗಳಾಗಿರುವ ‘ಟರ್ಮಿನೇಟರ್’, ‘ಅವತಾರ್’ ‘ರ್ಯಾಂಬೊ’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಮಾಡುವ ಮುನ್ನ ದೊಡ್ಡ ಮಟ್ಟದ ಅಧ್ಯಯನವನ್ನು ಜೇಮ್ಸ್ ಮಾಡುತ್ತಾರೆ. ಸಿನಿಮಾದಲ್ಲಿ ತಪ್ಪುಗಳು ಆಗದಂತೆ ತಡೆಯಲು ತಂಡವೇ ಜೇಮ್ಸ್ ಬಳಿ ಇದೆ. ಜೇಮ್ಸ್‌ನ ‘ಅವತಾರ್ 2’ ಇತ್ತೀಚೆಗೆ ಬಿಡುಗಡೆ ಆಗಿ ಯಶಸ್ಸು ಗಳಿಸಿದ್ದು, ‘ಅವತಾರ್ 3’, ‘ಅವತಾರ್ 4’ ಸಿನಿಮಾಗಳನ್ನು ತೆರೆಗೆ ತರಲಿದ್ದಾರೆ.

Titanic movie: Director James Cameron revealed the secret of the death of the hero after 25 years

Comments are closed.