KGF 2 ಗಾಗಿ ಯಶ್‌, ಪ್ರಶಾಂತ್‌ ನೀಲ್‌, ಸಂಜಯ್‌ ದತ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವಿಶ್ವದ ಚಿತ್ರರಂಗವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್-2 (KGF 2). ಹಿಂದೆಂದೂ ನೋಡಿರದಂತಹ ಯಶಸ್ಸು ತಂದುಕೊಟ್ಟ ಈ ಸಿನಿಮಾ ಸದ್ಯದಲ್ಲೇ ಸಾವಿರ ಕೋಟಿ ಕ್ಲಬ್ ಸೇರಲಿದೆ. ಈ ಮಧ್ಯೆಯೇ ಇಷ್ಟೊಂದು ಹಣದಾಖಲೆ‌ಬರೆದ ಈ ಸಿನಿಮಾದಲ್ಲಿ ಯಾರ ಯಾರ ಸಂಭಾವನೆ ಎಷ್ಟು ? ಸಿನಿಮಾಕ್ಕೆ ನಾಯಕ ಯಶ್ ತೆಗೆದುಕೊಂಡ ಹಣವೆಷ್ಟು ಎಂಬೆಲ್ಲ ಸಂಗತಿಗಳು ಚರ್ಚೆಗೆ ಗ್ರಾಸವಾಗಿದೆ. ಪ್ರೇಕ್ಷಕರಾಗಿ ನಿಮಗೂ ಈ ಸಿನಿಮಾದ ನಟನೆಗೆ ನಟ-ನಟಿಯರು ಪಡೆದ ಗೌರವಧನ ಎಷ್ಟು ಎಂಬ ಕುತೂಹಲವಿದ್ದರೇ ಉತ್ತರ ಇಲ್ಲಿದೆ.

ಕೆಜಿಎಫ್ ಸಿನಿಮಾದ ಯಶಸ್ಸಿನ ಬಳಿಕ ಸಹಜವಾಗಿಯೇ ಕೆಜಿಎಫ್-2 ಮೇಲೆ ನೀರಿಕ್ಷೆ ಸಾಕಷ್ಟಿತ್ತು. ಆ ನೀರಿಕ್ಷೆಗಳಿಗೆ ಪೂರಕವಾಗಿಯೇ ಕೆಜಿಎಫ್-2 ಸಿನಿಮಾ ಕೂಡ ಮೂಡಿಬಂದಿದ್ದು ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಗಳಲ್ಲೂ ಗೆದ್ದಿದೆ. ಸಿನಿಮಾದ ಒಟ್ಟು ಗಳಿಕೆ ಈಗಲೇ 900 ಕೋಟಿ ಮೀರಿದ್ದು ಸದ್ಯದಲ್ಲೇ ಸಾವಿರ ಕೋಟಿ ಕ್ಲಬ್ ಸೇರಲಿದೆ. ಹಾಗಿದ್ದರೇ ಈ ಸಿನಿಮಾದ ನಟನೆಗೆ ಕೆಜಿಎಫ್ 3 ಕಲಾವಿದರು ಪಡೆದ ಹಣ ಎಷ್ಟು ಅನ್ನೋದನ್ನು ಗಮನಿಸೋದಾದರೇ ಇಲ್ಲಿದೆ ಡಿಟೇಲ್ಸ್.

  • ಚಿತ್ರಕ್ಕೆ ತಮ್ಮ ನಟನೆ ಹಾಗೂ ಲುಕ್ ಮೂಲಕವೇ ಜೀವ ತುಂಬಿದ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಾಗಿ ಬರೋಬ್ಬರಿ 30 ಕೋಟಿ ಗೌರವ ಧನ ಪಡೆದಿದ್ದಾರಂತೆ.
  • ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿರೋ ಅಧೀರಾ ಖ್ಯಾತಿಯ ನಟ ಸಂಜಯ್ ದತ್ ತಮ್ಮ ರೌದ್ರ ನಟನೆಗಾಗಿ 9 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.
  • ಪ್ರಧಾನಿ ರಮೀಕಾ ಸೇನ್ ಪಾತ್ರದಲ್ಲಿ ಸಿನಿಮಾವನ್ನು ಆವರಿಸಿಕೊಂಡ ಎವರ್ ಗ್ರೀನ್ ಚೆಲುವೆ ರವೀನಾ ಟಂಡನ್ 1.2 ಕೋಟಿ ರೂಪಾಯಿ ಗಳಿಸಿದ್ದಾರೆ.
  • ಇನ್ನೂ ಅನಂತ ನಾಗ್ ಪಾತ್ರದ ಮುಂದುವರಿದ ಭಾಗವಾಗಿ ಕಾಣಿಸಿಕೊಂಡ ಪಾತ್ರಕ್ಕೆ ನ್ಯಾಯ ಒದಗಿಸಿ ಮಿಂಚಿದ ಬಹುಭಾಷಾ ನಟ ಪ್ರಕಾಶ್‌ ರಾಜ್ ಈ ಸಿನಿಮಾಕ್ಕಾಗಿ ಐದು ಭಾಷೆಯಲ್ಲಿ ಡಬ್ ಮಾಡಿದ್ದಾರೆ. ಅವರು ಈ ಸಿನಿಮಾಕ್ಕೆ 85 ಲಕ್ಷ ರೂಪಾಯಿ ಪಡೆದಿದ್ದಾರೆ.
  • ಪತ್ರಕರ್ತೆ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿ ಗೆದ್ದ ನಟಿ ಮಾಳವಿಕಾ ಅವಿನಾಶ್ 65 ಲಕ್ಷ ರೂಪಾಯಿ ಗೌರವ ಧನವಾಗಿ ಪಡೆದುಕೊಂಡಿದ್ದಾರೆ.
  • ಸಿನಿಮಾದಲ್ಲಿ ಮಿಂಚಿದ ನಾಯಕಿ ಶ್ರೀನಿಧಿ ಶೆಟ್ಟಿಗೆ 3 ಕೋಟಿ ರೆಮಾಂಡ್ರೇಶನ್ ಸಿಕ್ಕಿದೆ.

ಕೊನೆಯದಾಗಿ ಕನ್ನಡಕ್ಕೆ ವಿಶ್ವಮಾನ್ಯತೆ ಸಿಗುವಂತ ಸಿನಿಮಾವೊಂದನ್ನು ನಿರ್ಮಿಸಿಕೊಟ್ಟ ನಿರ್ದೇಶಕ ಸಿನಿಮಾಕ್ಕಾಗಿ ಬರೋಬ್ಬರಿ 15 ಕೋಟಿ ರೂಪಾಯಿ ಆದಾಯ ಪಡೆದಿದ್ದು ಕನ್ನಡದಲ್ಲಿ ಇಷ್ಟು ಮೊತ್ತದ ಗೌರವಧನ ಪಡೆದ ಮೊದಲ ನಿರ್ದೇಶಕ ಎಂಬ ಖ್ಯಾತಿ ಗೂ ನಿರ್ದೇಶಕ ಪ್ರಶಾಂತ್ ನೀಲ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ : ಪುನೀತ್ ಬದಲು ಯುವರಾಜ್ : ಏಪ್ರಿಲ್ 27 ರಂದು ಹೊಸ ಸಿನಿಮಾ ಘೋಷಿಸಲಿದೆ ಹೊಂಬಾಳೆ

ಇದನ್ನೂ ಓದಿ : ರಜನಿಕಾಂತ್ ಅವರ ಸಾಧನೆ ಗೌರವಿಸೋಣ ಹಾಗೇನೇ, ಈಗ ನಮ್ಮಕೈಲಿ ಏನು ಮಾಡೋಕೆ ಸಾಧ್ಯ ಅನ್ನೋದನ್ನು ನೋಡೋಣ : ಯಶ್

Yash, Prashant Neel and Sanjay Dutt know how much Remuneration KGF 2 got. Here’s the Complete Details

Comments are closed.