Anxiety among Shellfish lovers: ಕುಂದಾಪುರದ ಹಲವೆಡೆ ಕಪ್ಪೆಚಿಪ್ಪು ತಿಂದ ಜನರು ಅಸ್ವಸ್ಥ: ಮೀನು ಪ್ರಿಯರಲ್ಲಿ ಹೆಚ್ಚಿದ ಆತಂಕ

ಕುಂದಾಪುರ: (Anxiety among Shellfish lovers) ಕಳೆದ ಕೆಲವು ದಿನಗಳಿಂದ ಬೇರೆ ರಾಜ್ಯಗಳಿಂದ ಮಾರುಕಟ್ಟೆಗೆ ಬರುತ್ತಿರುವ ಕಪ್ಪೆಚಿಪ್ಪನ್ನು ಸೇವಿಸಿದ ಜನರು ಅಸ್ವಸ್ಥರಾಗಿದ್ದು, ಮೀನು ಪ್ರಿಯರು ಆತಂಕಗೊಳಗಾಗುವಂತೆ ಆಗಿದೆ. ನದಿಗಳಲ್ಲಿ ಮೀನುಗಾರಿಕೆಯ ಮೂಲಕ ಮೊದಲು ಲಭ್ಯವಾಗುತ್ತಿದ್ದ ಕಪ್ಪೆಚಿಪ್ಪು ಅಂತಹ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ಸ್ಥಳೀಯರು ಭಾವಿಸುತ್ತಾರೆ. ಆದರೆ ಬೇರೆ ರಾಜ್ಯಗಳಿಂದ ಬರುವ ಕಪ್ಪೆಚಿಪ್ಪು ಸೇವಿಸುವ ಜನರು ಈಗ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಹೆಮ್ಮಾಡಿ, ರಾಜಾಡಿ, ತೊಪ್ಪಲು, ಹಕ್ಕಲಾಡಿ, ಆರಟೆ, ಆನಗಳ್ಳಿಯ ಕುಂದಾಪುರ ನದಿ ಪಾತ್ರಗಳಲ್ಲಿ ಕಪ್ಪೆಚಿಪ್ಪು (Anxiety among Shellfish lovers) ಹೇರಳವಾಗಿ ಸಿಗುತ್ತದೆ. ಈ ನದಿಗಳಿಂದ ಲಭ್ಯವಿರುವ ಕಪ್ಪು ಮತ್ತು ಬಿಳಿ ಕಪ್ಪೆಚಿಪ್ಪುಗಳಿಗೆ ಭಾರಿ ಬೇಡಿಕೆಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನದಿಗಳಲ್ಲಿ ಹೂಳು ತುಂಬಿರುವುದರಿಂದ ಆಳ ಸಮುದ್ರದ ಮೀನುಗಾರಿಕೆಯಿಂದ ಸಿಗುವ ಕಪ್ಪೆಚಿಪ್ಪುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರರು.

ಕಪ್ಪೆಚಿಪ್ಪು ಸೇವಿಸಲು ಆರೋಗ್ಯಕರ ಮತ್ತು ರುಚಿಕರವೂ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೇರಳದಿಂದ ಕಪ್ಪೆಚಿಪ್ಪು (Anxiety among Shellfish lovers) ಆಮದು ಮಾಡಿಕೊಳ್ಳಲಾಗುತ್ತಿದ್ದು, ಕಪ್ಪೆಚಿಪ್ಪು ತಿನಿಸುಗಳನ್ನು ಸೇವಿಸುವವರಿಗೆ ಆಹಾರ ವಿಷವಾಗುತ್ತಿದೆ. ಇದೀಗ ಬೇರೆ ರಾಜ್ಯಗಳಿಂದ ಆಮದು ಆಗುತ್ತಿರುವ ಕಪ್ಪೆಚಿಪ್ಪಿನ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ.

ಬೇರೆ ರಾಜ್ಯಗಳಿಂದ ಬರುತ್ತಿರುವ ಕಪ್ಪೆಚಿಪ್ಪುಗಳು ಹಳೆಯದಾಗಿರಬಹುದು. ದೀರ್ಘಾವದಿಯ ಶೇಖರಣೆಯಿಂದಾಗಿ ಅವುಗಳು ತಮ್ಮ ಅಂಶಗಳನ್ನು ಕಳೆದುಕೊಂಡು ರುಚಿಯನ್ನು ಕೂಡ ಕಳೆದುಕೊಂಡಿರಬಹುದು ಎಂದು ಸಾಮಾಜಿಕ ಕಾರ್ಯಕರ್ತ ರಾಜೇಶ್ ಕಾವೇರಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ರಾಸಾಯನಿಕ ಪದಾರ್ಥಗಳು ಕಪ್ಪೆಚಿಪ್ಪಿನ ರುಚಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಉತ್ತಮ ಎಂದಿದ್ದಾರೆ.

ಇದನ್ನೂ ಓದಿ : Kundapura fraud case: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಸಹಕಾರ ಸಂಘಕ್ಕೆ ವಂಚನೆ : ದೂರು ದಾಖಲು

ರಾಸಾಯನಿಕ ಪದಾರ್ಥಗಳನ್ನು ಸೇರಸಿದ ನಂತರದಲ್ಲಿ ಕಪ್ಪೆಚಿಪ್ಪುಗಳನ್ನು ತಿಂಗಳು ಗಟ್ಟಲೆ ಕೋಲ್ಡ್‌ ಸ್ಟೋರೇಜ್ ನಲ್ಲಿ ಇಡುವ ಸಾಧ್ಯತೆಗಳು ಇವೆ ಎಂದು ಕುಂದಾಪುರದ ಜನರಲ್ ಆಸ್ಪತ್ರೆಯ ವೈದ್ಯ ಡಾ.ನಾಗೇಶ್ ಹೇಳುತ್ತಾರೆ. ಈ ಹಿಂದೆ ಕಾರವಾರ ಕುಮುಟಾದಲ್ಲಿ ಕಪ್ಪೆಚಿಪ್ಪು ತಿಂದು ಅನೇಕರು ಅಸ್ವಸ್ತರಾಗಿ ಆಸ್ಪತ್ರೆ ಸೇರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಕಪ್ಪೆಚಿಪ್ಪು ಮಾರಾಟವನ್ನು ನಿಲ್ಲಿಸುವಂತರೆ ಆರೋಗ್ಯ ಇಲಾಖೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೇ ನಗರದಲ್ಲಿ ಕಪ್ಪೆಚಿಪ್ಪು ತಿನ್ನದಂತೆ ಸೂಚನೆ ನೀಡಲಾಗಿತ್ತು.

For the past few days, people have fallen ill after consuming frog shells coming from other states in the market, which has worried fish lovers.

Comments are closed.