Dhoni and Yuvraj Singh: ಮತ್ತೆ ಒಂದಾದ ಭಲೇ ಜೋಡಿ.. ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಧೋನಿ-ಯುವಿ

ಬೆಂಗಳೂರು : ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಯುವರಾಜ್ ಸಿಂಗ್ (Yuvraj Singh) ಭಾರತೀಯ ಕ್ರಿಕೆಟ್’ನ ಇಬ್ಬರು ಅತೀ ದೊಡ್ಡ ಮ್ಯಾಚ್ ವಿನ್ನರ್’ಗಳು. ಒಬ್ಬ 2 ವಿಶ್ವಕಪ್’ಗಳನ್ನು ಗೆದ್ದುಕೊಟ್ಟ ನಾಯಕ, ಮತ್ತೊಬ್ಬ 2 ವಿಶ್ವಕಪ್ ಟ್ರೋಫಿಗಳನ್ನು ಗೆದ್ದುಕೊಟ್ಟ ಮ್ಯಾಚ್ ವಿನ್ನರ್.

ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಎಡಗೈ-ಬಲಗೈ ಜೋಡಿಯಾಗಿರುವ ಯುವರಾಜ್ ಸಿಂಗ್ ಮತ್ತು ಎಂ.ಎಸ್ ಧೋನಿ ಎಷ್ಟೋ ಪಂದ್ಯಗಳನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ. ಅದೆಷ್ಟೋ ಸ್ಮರಣೀಯ ಜೊತೆಯಾಟಗಳನ್ನು ಆಡಿದ್ದಾರೆ. ನಿವೃತ್ತಿಯ ನಂತರ ಇದೀಗ ಇಬ್ಬರೂ ಮತ್ತೆ ಜೊತೆಯಾಗಿದ್ದಾರೆ. ಈ ಸರ್ವಶ್ರೇಷ್ಠ ಎಡಗೈ-ಬಲಗೈ ಜೋಡಿ ಮತ್ತೊಂದು ಇನ್ನಿಂಗ್ಸ್ ಆಡಲು ರೆಡಿಯಾಗಿದೆ. ಹಾಗಂತ ಇಬ್ಬರೂ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಜಾಹೀರಾತು ಶೂಟಿಂಗ್’ಗಾಗಿ ಧೋನಿ ಮತ್ತು ಯುವಿ ಒಂದಾಗಿದ್ದಾರೆ.

ಹಾಗಾದ್ರೆ ಯುವರಾಜ್ ಸಿಂಗ್ ಮತ್ತು ಎಂ.ಎಸ್ ಧೋನಿ ಯಾವ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ? ಬಹುಶಃ ಇದು ಟಿ20 ವಿಶ್ವಕಪ್ ಜಾಹೀರಾತು ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಜಾಹೀರಾತು ಶೂಟಿಂಗ್’ನ ಚಿತ್ರಗಳಷ್ಟೇ ಲಭ್ಯವಾಗಿದ್ದು, ಯುವಿ ಕೈಯಲ್ಲಿ ಪಾಪ್ ಕಾರ್ನ್ ಹಾಗೂ ಧೋನಿ ಕೈಯಲ್ಲಿ ಟಿವಿ ರಿಮೋಟ್ ಇರುವುದನ್ನು ಗಮನಿಸಬಹುದಾಗಿದೆ.

ಯುವರಾಜ್ ಸಿಂಗ್ ಮತ್ತು ಎಂ.ಎಸ್ ಧೋನಿ ಸುಮಾರು 15 ವರ್ಷಗಳ ಕಾಲ ಭಾರತ ಪರ ಜೊತೆಯಾಗಿ ಆಡಿದ್ದರು. ನಾಲ್ಕು, ಐದು ಅಥವಾ ಆರನೇ ಕ್ರಮಾಂಕದ ಸರ್ವಶ್ರೇಷ್ಠ ಜೋಡಿ ಎಂದೇ ಯುವಿ ಮತ್ತು ಧೋನಿ ಖ್ಯಾತಿ ಪಡೆದಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ ಇವರಿಬ್ಬರು 52.63ರ ಅಮೋಘ ಸರಾಸರಿಯಲ್ಲಿ 3053 ರನ್ ಜೊತೆಯಾಟವಾಡಿದ್ದಾರೆ.
2007ರಲ್ಲಿ ಭಾರತ ತಂಡದ ಧೋನಿ ನಾಯಕತ್ವದಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯುವಾರಾಜ್ ಸಿಂಗ್ ಅವರ ಪಾತ್ರ ದೊಡ್ಡದು. ಇಂಗ್ಲೆಂಡ್ ವಿರುದ್ಧ ವೇಗಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಯುವಿ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಸಿಡಿಸಿದಾಗ ಅವರ ಜೊತೆ ಕ್ರೀಸ್’ನಲ್ಲಿದ್ದವು ಎಂ.ಎಸ್ ಧೋನಿ. ಅದೇ ರೀತಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಯುವಿ-ಧೋನಿ ಜೋಡಿ ಅತ್ಯಮೂಲ್ಯ ಜೊತೆಯಾಟವಾಡಿತ್ತು. ಇನ್ನು 2011ರ ವಿಶ್ವಕಪ್’ನಲ್ಲಿ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದ ಯುವರಾಜ್ ಸಿಂಗ್, ಧೋನಿ ನಾಯಕತ್ವದಲ್ಲಿ ಮತ್ತೊಂದು ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಇದನ್ನೂ ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್

ಇದನ್ನೂ ಓದಿ : India Vs Australia T20 : ಮೊಹಾಲಿಯಲ್ಲಿ ಮೊದಲ ಪಂದ್ಯ; ಹೀಗಿದೆ ಭಾರತದ ಪ್ಲೇಯಿಂಗ್ XI

MS Dhoni and Yuvraj Singh start a new innings

Comments are closed.