ನಟ, ರೌಡಿಶೀಟರ್ ಸುರೇಂದ್ರ ಹತ್ಯೆ ಮಾಡಿದ್ದು ನಾನೇ ! ಆಡಿಯೋದಲ್ಲಿ ಕಾರಣವನ್ನೂ ಬಾಯ್ಬಿಟ್ಟ ಆರೋಪಿ ಸತೀಶ್

ಮಂಗಳೂರು : ಬಂಟ್ವಾಳದಲ್ಲಿ ನಡೆದಿದ್ದ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ ಇದೀಗ ಬಯಲಾಗಿದೆ. ಸುರೇಂದ್ರನ ಜೊತೆಗೆ ಕಳೆದ ಎರಡು ದಶಕಗಳ ಕಾಲ ಜೊತೆಗಿದ್ದ ಆಪ್ತ ಗೆಳೆಯನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲ ಆಡಿಯೋವನ್ನು ಹರಿಬಿಟ್ಟಿರುವ ಆರೋಪಿ ಸತೀಶ್ ಹತ್ಯೆಗೆ ಕಾರಣವನ್ನೂ ತಿಳಿಸಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿನ ಪ್ಲ್ಯಾಟ್ ನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ. ಕೊಲೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಒಟ್ಟು 3 ತಂಡಗಳನ್ನು ರಚಿಸಿದ್ದರು. ಇಬ್ಬರು ಹೆಲ್ಮೆಟ್ ಧರಿಸಿ ಸುರೇಂದ್ರ ವಾಸವಿದ್ದ ಪ್ಲ್ಯಾಟ್ ಗೆ ಬಂದು ಹೋಗಿರೋದು ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಅಲ್ಲದೇ ಇದೊಂದು ಹತ್ಯೆಗೆ ರಿವೇಂಜ್ ಅನ್ನೋ ಮಾತ ಕೇಳಿಬಂದಿದೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಆಡಿಯೋ ಕೇಳಲು ಈ ಕೆಳಗೆ ಕ್ಲಿಕ್ ಮಾಡಿ

ಹೌದು, ರೌಡಿಶೀಟರ್ ಸುರೇಂದ್ರ ಬಂಟ್ವಾಳ ತನ್ನ ಅತ್ಯಾಪ್ತನಿಂದಲೇ ಹತ್ಯೆಯಾಗಿ ಹೋಗಿದ್ದಾನೆ. ಸುರೇಂದ್ರನನ್ನ ಹತ್ಯೆ ಮಾಡಿದ್ದು ನಾನೇ ಅಂತಾ ಆಪ್ತ ಸತೀಶ್ ಹೇಳಿಕೊಂಡಿದ್ದಾನೆ. ಸುರೇಂದ್ರನ ಹತ್ಯೆ ಈ ಹಿಂದೆ ನಡೆದಿದ್ದ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ ಅಂತಾನೂ ಹೇಳಿದ್ದಾನೆ.

ಸುರೇಂದ್ರ ಬಡ್ಡಿ ವ್ಯವಹಾರವನ್ನು ಮಾಡಿ ಬಂದ ಪಾಪದ ಹಣವನ್ನು ಒಳ್ಳೆಯ ಜನರ ಸಾವಿಗೆ ಬಳಕೆ ಮಾಡುತ್ತಿದ್ದ. ನಾನು ಸುರೇಂದ್ರನ ಜೊತೆಗೆ 22 ವರ್ಷಗಳಿಂದಲೂ ಒಟ್ಟಿಗೆ ಇದ್ದೇನೆ. ಆತ ಎಲ್ಲಾ ವ್ಯವಹಾರವನ್ನೂ ನಾನೇ ನೋಡಿಕೊಳ್ಳುತ್ತಿದ್ದೇನೆ. ಆತ ಕಿಶನ್ ಹೆಗ್ಡೆಯನ್ನು ಹತ್ಯೆ ಮಾಡಿಸಿರೋದು ನಾನೇ ಅಂತಾ ಹೇಳಿದ್ದ. ಈ ವಿಚಾರವನ್ನು ಬಾಯ್ಬಿಟ್ರೆ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ.

ಅಲ್ಲದೇ ಕಿಶನ್ ಹೆಗ್ಡೆ ಹತ್ಯೆ ಮಾಡಿದ್ದ ಕೋಡಿಕೆರೆ ಮನೋಜ್ ಗ್ಯಾಂಗ್ ಗೆ ಹಣಕಾಸಿನ ನೆರವನ್ನೂ ನೀಡಿದ್ದ. ಈ ವಿಚಾರವನ್ನು ನಾನು ಕಿಶನ್ ಹೆಗ್ಡೆ ಸ್ನೇಹಿತನಿಗೆ ತಿಳಿಸಿದ್ದೇನೆ. ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಕೋಡಿಕೆರೆ ಮನೋಜ್ ಹಾಗೂ ಸುರೇಂದ್ರ ಅಮಾಯಕರನ್ನು ಕೊಲ್ಲುತ್ತಾರೆ ಅನ್ನೋ ಕಾರಣಕ್ಕೆ ನಾವೇ ಹತ್ಯೆ ಮಾಡಿದ್ದೇವೆ. ಈಗ ಕಾರವಾರದಲ್ಲಿದ್ದು, ಎರಡು ದಿನಗಳಲ್ಲಿ ನಾವೇ ಪೊಲೀಸರ ಮುಂದೆ ಶರಣಾಗುತ್ತೇವೆ ಅಂತಾ ಹೇಳುವ ಆಡಿಯೋವನ್ನು ಹರಿಬಿಟ್ಟಿದ್ದಾನೆ. ಈ ಆಡಿಯೋ ಇದೀಗ ವೈರಲ್ ಆಗಿದೆ.

ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಇದೀಗ ಸತೀಶ್ ಬೆನ್ನು ಬಿದ್ದಿದ್ದಾರೆ. ಸುರೇಂದ್ರ ಬಂಟ್ವಾಳ ಹತ್ಯೆಯ ಬೆನ್ನಲ್ಲೇ ಭೂಗತ ಲೋಕದ ನಂಟು ಇದೆ ಅನ್ನೋ ಮಾತು ಕೇಳಿಬಂದಿತ್ತು. ಕಿಶನ್ ಹೆಗ್ಡೆ ಹತ್ಯೆಗೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಮನೀಶ್ ಶೆಟ್ಟಿ ಹತ್ಯೆ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಸುರೇಂದ್ರ ಬಂಟ್ವಾಳ ಹತ್ಯೆಯಾಗಿದ್ರೆ, ಆರೋಪಿ ಕೋಡಿಕೆರೆ ಮನೋಜ್ ಗ್ಯಾಂಗ್ ಜೈಲು ಸೇರಿದೆ.

Comments are closed.