ಹೆಣ್ಣಲ್ಲ,ಗಂಡಲ್ಲ, ತೃತೀಯ ಲಿಂಗಿಯೂ ಅಲ್ಲ….! ಜೈಲಾಧಿಕಾರಿಗಳನ್ನು ಹೈರಾಣಾಗಿಸಿದ ಆ್ಯಡಂ ಪಾಷಾ…!!

ಬೆಂಗಳೂರು: ಗಂಡು ಖೈದಿಗಳಿಗೊಂದು, ಹೆಣ್ಮಕ್ಕಳಿಗೊಂದು ಹಾಗೂ ತೃತೀಯ ಲಿಂಗಿಗಳಿಗೊಂದು ಸೆಲ್ ಇಟ್ಕೊಂಡಿರೋ ಪರಪ್ಪನ ಅಗ್ರಹಾರ ಪೊಲೀಸರು ನಿನ್ನೆ ಮಾತ್ರ ನಾಲ್ಕನೇ ಕೆಟಗರಿ ಕಂಡು ಕಂಗಾಲಾಗಿದ್ದು ನಿಜ.

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಬಂಧನಕ್ಕೊಳಗಾದ ಮಾಡೆಲ್ ಆ್ಯಡಂ ಪಾಷಾಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆತನನ್ನು ಜೈಲಿಗೆ ಕರೆತಂದ ಪೊಲೀಸರು ಜೈಲಾಧಿಕಾರಿಗಳಿಗೆ ಒಪ್ಪಿಸಿದರು.

ಆದರೇ ದೊಡ್ಡ ದೊಡ್ಡ ಕೇಸ್ ಗಳ ಆರೋಪಿ-ಅಪರಾಧಿಗಳಿಗೂ ಜೈಲು ಆತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಅಧಿಕಾರಿಗಳು ಈ ಅ್ಯಡಂ ನೋಡಿ ಕಂಗಾಲಾಗಿ ಹೋದರು. ಕಾರಣ ಇಷ್ಟೇ ಈತನನ್ನು ಯಾವ ಸೆಲ್ ನಲ್ಲಿ ಇಡಬೇಕು ಅನ್ನೋದೇ ಅವರ ತಲೆನೋವಿಗೆ ಕಾರಣವಾಗಿತ್ತು.

ಮೊದಲು ಈತನನ್ನು‌ ಮಹಿಳಾ ಆರೋಪಿಗಳ ಸೆಕ್ಷನ್ ಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ಆ್ಯಡಂ ನಾನು ಹುಡುಗಿಯಲ್ಲ. ಹುಡುಗಿಯರಂತೆ ಬಟ್ಟೆ ಧರಿಸುತ್ತೇನೆ ಅಷ್ಟೇ. ಹಾಗಂತ ನಾನು ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲ ಎಂದಿದ್ದಾನೆ.

ಈತನ ಮಾತು ಕೇಳಿದ ಅಧಿಕಾರಿಗಳು ಮತ್ತಷ್ಟು ಕಂಗಾಲಾಗಿದ್ದಾರೆ. ಆ್ಯಡಂ ನ ಅವತಾರ ನೋಡಿದ ಮೇಲೆ ಆತನನ್ನು ಗಂಡಸರ ಸೆಲ್ ಗೆ ಕಳುಹಿಸಲು ಪೊಲೀಸರಿಗೆ ಧೈರ್ಯವಾಗಿಲ್ಲ.

ಇನ್ನು ತೃತೀಯ ಲಿಂಗಿಗಳ ಸೆಲ್ ಗೆ ಕಳಿಸೋಣ ಅಂದ್ರೇ ನಾನು ತೃತೀಯ ಲಿಂಗಿ ಅಲ್ಲಾ ಸರ್ ಅಂತ ಆ್ಯಡಂ ಪಟ್ಟು ಹಿಡಿದಿದ್ದ.ನಾನು ಡ್ರ್ಯಾಗ್ ಕ್ವೀನ್. ನಾನು ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲ. ನನ್ನನ್ನು ಮಂಗಳಮುಖಿಯರ ಸೆಲ್ ಗೆ ಹಾಕಬೇಡಿ ಅಂತ ಆ್ಯಡಂ ದುಂಬಾಲು ಬಿದ್ದಿದ್ದ.

ಈ ಎಲ್ಲ ಕನ್ ಪ್ಯೂಶನ್ ನಿಂದ ಕಂಗೆಟ್ಟ ಜೈಲಾಧಿಕಾರಿಗಳು ಮೇಲಾಧಿಕಾರಿಗಳ ಮೊರೆ ಹೋಗಿದ್ದು ಅವರ ಸೂಚನೆಯಂತೆ ಕೊನೆಯಲ್ಲಿ ಆ್ಯಡಂನನ್ನು ಪ್ರತ್ಯೇಕವಾದ ಕೊಠಡಿಯಲ್ಲಿ ಇಡೋ ನಿರ್ಧಾರಕ್ಕೆ ಬಂದಿದ್ದಾರೆ.

ಒಟ್ಟಿನಲ್ಲಿ ಎಂತೆಂಥ ಕುಖ್ಯಾತರನ್ನು ಹ್ಯಾಂಡಲ್ ಮಾಡಿದ್ದ ಪರಪ್ಪರ ಅಗ್ರಹಾರದ ಜೈಲಾಧಿಕಾರಿಗಳು ಒಬ್ಬ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಮಾಡೆಲ್ ನಿಂದ ಕೆಲಕಾಲ ತಲೆಬಿಸಿ ಗೆ ಒಳಗಾಗಿದ್ದು ಮಾತ್ರ ಸುಳ್ಳಲ್ಲ.

Comments are closed.