Minister Pramod Madhwaraj : ಮಡಿಕಲ್‌ನಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ : ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಆಗ್ರಹ

ಬೈಂದೂರು : ಮೀನುಗಾರಿಕಾ ದೋಣಿ ಮುಳುಗಡೆಗೆ ಒಳಗಾದ ಉಡುಪಿ ಜಿಲ್ಲೆಯ ಬೈಂದೂರಿನ ಉಪ್ಪುಂದದ ಮಡಿಕಲ್‌ ಪ್ರದೇಶದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆಸುವಂತೆ (Minister Pramod Madhwaraj) ಮಾಜಿ ಮೀನುಗಾರಿಕಾ ಸಚಿವರಾದ ಪ್ರಮೋದ್‌ ಮಧ್ವರಾಜ್‌ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಉಪ್ಪುಂದಕ್ಕೆ ಭೇಟಿ ನೀಡಿದ ಅವರು, ಮೀನುಗಾರರ ಸಮಸ್ಯೆಯನ್ನು ಆಲಿಸಿದ್ದಾರೆ. ದುರಂತಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆಸುವುದರಿಂದಾಗಿ ಮೀನುಗಾರರ ಅನುಕೂಲವಾಗಲಿದೆ. ಈ ಕುರಿತು ರಾಜ್ಯ ಸರಕಾರ ಯೋಜನೆ ರೂಪಿಸಬೇಕು. ಮೀನುಗಾರಿಕೆ ತೆರಳಿದ್ದ ವೇಳೆಯಲ್ಲಿ ಅಕಾಲಿಕ ಮರಣಕ್ಕೆ ಒಳಗಾಗಿರುವ ಸತೀಶ್‌ ಖಾರ್ವಿ ಹಾಗೂ ನಾಗೇಶ್‌ ಖಾರ್ವಿ ಅವರ ಆತ್ಮಕ್ಕೆ ಶಾಂತಿಯನ್ನು ಪ್ರಾರ್ಥಿಸಿದರು. ಅಲ್ಲದೇ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅವರಿಗೆ ಕರೆ ಮಾಡಿ ಮೃತರ ಕುಟುಂಬಕ್ಕೆ ಆರ್ಥಿಕ ಪರಿಹಾರವಾಗಿ ತಲಾ 6ಲಕ್ಷ ರೂಪಾಯಿ ಸಂಕಷ್ಟ ಪರಿಹಾರವನ್ನು ಕುಟುಂಬಕ್ಕೆ ಶೀಘ್ರದಲ್ಲಿ ವಿತರಿಸುವಂತೆ ಮನವಿ ಮಾಡಿದ್ದಾರೆ.

ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ :
ಉಪ್ಪುಂದದ ಕರ್ಕಿಕಳಿ ದೋಣಿ ದುರಂತದ ಸ್ಥಳಕ್ಕೆ ಹಾಗೂ ಮೀನುಗಾರರ ಮನೆಗಳಿಗೆ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಲಾ 6 ಲಕ್ಷ ರೂಪಾಯಿ ಪರಿಹಾರ ನಿಧಿ ಚೆಕ್‌ ವಿತರಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಉಪಸ್ಥಿತರಿದ್ದರು. ಕೊಡೇರಿ ಬಂದರಿನ ಎರಡೂ ಬದಿಯಲ್ಲಿ 250 ಮೀಟರ್‌ ಬ್ರೇಕ್‌ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : Karnataka Weather : ಕರಾವಳಿ ಜಿಲ್ಲೆಗಳಲ್ಲಿ ಇಳಿಕೆ ಕಂಡ ಮಳೆ : ಆದ್ರೂ ಸಮುದ್ರಕ್ಕೆ ಇಳಿಯದಿರಿ ಎಂದ ಹವಾಮಾನ ಇಲಾಖೆ

ಇದನ್ನೂ ಓದಿ : Dr. K Vidyakumari : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಇನ್ನು ಮರವಂತೆ ಬಂದರಿನ 28 ಕಾಮಗಾರಿಗಳನ್ನು ಸಿಆರ್‌ಝಡ್‌ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಸಸಮಸ್ಯೆಯನ್ನು ನಿವಾರಿಸಲು ಈಗಾಗಲೇ ತಂಡವನ್ನು ರಚಿಸಲಾಗದ್ದು, ಶೀಘ್ರದಲ್ಲಿಯೇ ಮರವಂತೆ ಬಂದರಿನ ಕಾಮಗಾರಿ ಆರಂಭಗೊಳ್ಳಲಿದೆ ಎಂದಿದ್ದಾರೆ.

Breakwater work in Madikal : Former Minister Pramod Madhwaraj demands

Comments are closed.