Dhaiva nartaka death : ದೈವ ನರ್ತನ ಸೇವೆ ಮಾಡುತ್ತಿರುವಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು

ಮಂಗಳೂರು : (Dhaiva nartaka death ) ಶಿರಾಡಿ-ಕಲ್ಕುಡ ದೈವದ ನೇಮೊತ್ಸವದಲ್ಲಿ ದೈವ ನರ್ತನ ಸೇವೆ ಮಾಡುತ್ತಿದ್ದು, ಈ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಳ ಗ್ರಾಮದಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ಮೂಲಂಗೀರಿಯ ಕಾಂತು ಅಜಿಲ (೫೯ ವರ್ಷ) ಮೃತ ದೈವ ನರ್ತಕ. ಇದೀಗ ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದೆ.

ಮಾರ್ಚ್‌ ೨೯ ರಂದು ರಾತ್ರಿ ಎಡಮಂಗಲ ಗ್ರಾಮದ ಇಡ್ಯಟ್ಕ ಎಂಬಲ್ಲಿ ನಡೆಯುತ್ತಿದ್ದ ಶಿರಾಡಿ-ಕಲ್ಕುಡ ದೈವದ ನೇಮೊತ್ಸವ ನಡೆಯುತ್ತಿದ್ದು, ಈ ವೇಳೆ ಕಾಂತು ಅಜಿಲ ಅವರು ಶಿರಾಡಿ ದೈವದ ನರ್ತಕರಾಗಿ ಕುಣಿಯುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯದಲ್ಲೇ ದೈವ ನರ್ತಕರು ಮೃತಪಟ್ಟಿದ್ದಾರೆ.

ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದ್ದು, ದೈವ ನರ್ತಕನ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ದೈವ ನರ್ತನದ ವೇಳೆಯೇ ಕುಸಿದು ಬೀಳುತ್ತಿರುವ ದೃಶ್ಯ ಅಲ್ಲಿಯೇ ಕೋಲದ ವಿಡಿಯೋ ಮಾಡುತ್ತಿದ್ದವರೊಬ್ಬರ ಮೊಬೈಲ್‌ ನಲ್ಲಿ ಸೆರೆಯಾಗಿದೆ. ಇವರು ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು

ಇದನ್ನೂ ಓದಿ : Dharmasthala New police station: ಧರ್ಮಸ್ಥಳ ಪೊಲೀಸ್‌ ಠಾಣೆಯ ನೂತನ ಕಟ್ಟಡದ ಉದ್ಘಾಟನೆ

ಇದನ್ನೂ ಓದಿ : Malini Mallya : ಕೋಟ ಶಿವರಾಮ ಕಾರಂತರ ಆಪ್ತ ಸಹಾಯಕಿ, ಕಾದಂಬರಿಗಾರ್ತಿ ಮಾಲಿನಿ ಮಲ್ಯ ವಿಧಿವಶ

ಇದನ್ನೂ ಓದಿ : Rama Navami: ಹಿಂಸಾತ್ಮಕ ರೂಪ ತಾಳಿದ ರಾಮನವಮಿ: ರಾಮಮಂದಿರದ ಹೊರಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

Dhaiva nartaka death : Dhaiva nartaka died after collapsing while serving.

Comments are closed.