Doctor K. jayaram shetty: ಮಂಗಳೂರಿನ ಖ್ಯಾತ ವೈದ್ಯ ಕೆ. ಜಯರಾಮ್‌ ಶೆಟ್ಟಿ ಹೃದಯಾಘಾತದಿಂದ ನಿಧನ

ಮಂಗಳೂರು: (Doctor K. jayaram shetty) ಮಂಗಳೂರು ದೇರಳಕಟ್ಟೆಯ ಜಸ್ಟೀಸ್‌ ಕೆ.ಎಸ್.ಹೆಗ್ಡೆ ಚಾರಿಟೇಬಲ್‌ ಆಸ್ಪತ್ರೆಯ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ಕ್ಯಾನ್ಸರ್‌ ವಿಭಾಗದ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುಪುರ ಪರಾರಿ ದೋಟ ಕೊಳಕ್ಕೆಬೈಲು ನಿವಾಸಿ ಡಾ. ಜಯರಾಮ್‌ ಶೆಟ್ಟಿ ( 53 ವರ್ಷ) ನಿಧನರಾಗಿದ್ದಾರೆ.

ಡಾ. ಜಯರಾಮ್‌ ಶೆಟ್ಟಿ ಮಂಗಳೂರಿನ ಕೆ.ಎಂ.ಸಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕ್ಕೋತ್ತರ ಉನ್ನತ ಶಿಕ್ಷಣ ಪಡೆದ ಬಳಿಕ ರೇಡಿಯೇಶನ್‌ ಆಂಕಾಲಜಿ ಚಿಕಿತ್ಸಾ ವಿಭಾಗದಲ್ಲಿ ಸುಮಾರು ಒಂದು ದಶಕಗಳಿಗಿಂತ ಹೆಚ್ಚು ಸಮಯ ಸೇವೆ ಸಲ್ಲಿಸಿ ಕಳೆದ ಹನ್ನೊಂದು ವರ್ಷಗಳಿಂದ ದೇರಳಕಟ್ಟೆಯ ಜಸ್ಟೀಸ್‌ ಕೆ.ಎಸ್.‌ ಹೆಗ್ಡೆ ಆಸ್ಪತ್ರೆಯ ರೇಡಿಯೇಷನ್‌ ಆಂಕಾಲಜಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಎಂದಿನಂತೆ ಅಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳಿದ್ದ ಇವರು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ತೆರಳುತ್ತಿದ್ದಾಗ ಹಠಾತ್‌ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Mangalore 10 People Arrested : ವೈದ್ಯರು, ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ : 10 ಮಂದಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಇದನ್ನೂ ಓದಿ : ಹೆಬ್ರಿ : ಭಕ್ತರಿಗೆ ಗನ್ ತೋರಿಸಿ ಜೀವಬೆದರಿಕೆ, ಮಾನಹಾನಿ : ಚರ್ಚ್ ಧರ್ಮಗುರು ವಿರುದ್ದ ದೂರು, ಪ್ರತಿದೂರು ದಾಖಲು

ಇದನ್ನೂ ಓದಿ : Sunil Kumar: ಉಡುಪಿಯಲ್ಲಿ ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ: ಸಚಿವ ಸುನಿಲ್‌ ಕುಮಾರ್‌

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಅನೇಕ ಬಡ ರೋಗಿಗಳ ಚಿಕಿತ್ಸೆಗೆ ಸಹಾಯಹಸ್ತ ನೀಡುತ್ತಿದ್ದರು.

ಸುರತ್ಕಲ್‌ ನಲ್ಲಿ ಅನಾಥ ಮಗು ಪತ್ತೆ

ಸುರತ್ಕಲ್:‌ ಬಸ್‌ ನಿಲ್ದಾಣದ ಬಳಿ ಮೂರು ವರ್ಷದ ಮಗುವೊಂದು ಸಾರ್ವಜನಿಕರಿಗೆ ಪತ್ತೆಯಾಗಿದ್ದು, ತಾಯಿಯಿಂದ ಬೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಮಗುವನ್ನು ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಸಾರ್ವಜನಿಕರು ಪೊಲೀಸರಿಗೆ ಕೋರಿಕೆ ನೀಡಿದ್ದು, ಮಗುವನ್ನು ಕಳೆದುಕೊಂಡ ಪೋಷಕರು ಸುರತ್ಕಲ್‌ ಠಾಣೆಯನ್ನು ಸಂಪರ್ಕಿಸಬಹುದು ಎಂಧು ಪೊಲೀಸರು ತಿಳಿಸಿದ್ದಾರೆ.

Doctor K. Jayaram Shetty: Mangalore’s famous doctor K. Jayaram Shetty died of heart attack

Comments are closed.