Don’t care about covid rules: ಕರಾವಳಿಯಲ್ಲಿ ಕೋವಿಡ್‌ ರೂಲ್ಸ್‌ ಗೆ ಡೋಂಟ್‌ ಕೇರ್‌: ಮಾಸ್ಕ್‌ ಮರೆತ ಜನ

ಮಂಗಳೂರು: (Don’t care about covid rules) ದೇಶದಲ್ಲಿ ಕೊರೊನಾ ಅಬ್ಬರ ಜೋರಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ಒಂದಷ್ಟು ಮಾರ್ಗಸೂಚಿಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಿಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ ಮಂಗಳೂರಿನ ಜನತೆ ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಕೋವಿಡ್‌ ನಿಯಮಗಳಿಗೆ ಡೋಂಟ್‌ ಕೇರ್‌ ಎನ್ನುತ್ತಿದ್ದಾರೆ. ಮಾಸ್ಕ್‌ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಬೇಕಾ ಬಿಟ್ಟಿ ಓಡಾಡುತ್ತಿದ್ದಾರೆ.

ಕೋವಿಡ್‌ ರೂಲ್ಸ್‌ ಗೆ ಕರಾವಳಿಯಲ್ಲಿ ಜನ ಡೋಂಟ್‌ ಕೇರ್‌ (Don’t care about covid rules) ಅಂತಿದ್ದಾರೆ. ಮಾಸ್ಕ್‌ ಇಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನ ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಭಯ ಬೇಡ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ ಅಂತ ಸರಕಾರ ಎಷ್ಟೇ ಹೇಳುತ್ತಿದ್ದರು ಕೂಡ ಜನ ಅದಕ್ಕೆ ಕ್ಯಾರೆ ಅನ್ನುತ್ತಿಲ್ಲ. ಹೋಟೆಲ್‌, ಬಾರ್‌, ಪಬ್‌, ಬಸ್‌ ನಿಲ್ದಾಣ ಹೀಗೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಿ ಮಾರ್ಗಸೂಚಿಗಳನ್ನು ಸರಕಾರ ಬಿಡುಗಡೆ ಮಾಡಿದೆ. ಆದರೆ ಬಹುತೇಕ ಮಂಗಳೂರು ಪ್ರದೇಶಗಳಲ್ಲಿ ಈ ನಿಯಮಗಳು ಪಾಲನೆ ಆಗುತ್ತಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಮಾಸ್ಕ್‌ ಗಳನ್ನು ಧರಿಸಿ ಓಡಾಡುತ್ತಿದ್ದಾರೆ.

ಮಾಸ್ಕ್‌ ಧರಿಸುವಂತೆ ಯಾವುದೇ ರೀತಿಯ ನಿರ್ಬಂಧನೆಗಳನ್ನು ಹೇರಿಲ್ಲವಾದರೂ ಕೂಡ ಕೊರೊನಾ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ಅದುವೇ ಉಡುಪಿ, ಮಂಗಳೂರಿನಲ್ಲಿ ಕೂಡ ಕೊರೊನಾ ಸೋಂಕು ಪತ್ತೆಯಾದರೂ ಕೂಡ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಮುಖ್ಯವಾಗಿ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಬಸ್‌ ಸಿಬ್ಬಂದಿಗಳಿಂದ ಹಿಡಿದು ಪ್ರಯಾಣಿಕರು, ಸಾರ್ವಜನಿಕರು ಕೂಡ ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬಸ್‌ ಸಿಬ್ಬಂದಿಗಳು ಹಾಗೂ ಚಾಲಕರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಎಲ್ಲೋ ಒಂದು ಕಡೆ ಅವರು ಕೂಡ ಕೊರೊನಾ ನಿಯಮಗಳ ಮೇಲೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಇದನ್ನೂ ಓದಿ : Mock drill: ಕೊರೋನಾ ಹಿನ್ನೆಲೆ ನಡೆಸಲಾಗುತ್ತಿರುವ ಮಾಕ್ ಡ್ರಿಲ್ ಎಂದರೇನು..? ಇದರ ಕಾರ್ಯಾಚರಣೆ ಹೇಗೆ ನಡೆಯುತ್ತೆ ಗೊತ್ತಾ..!

ಹೀಗೆ ಮುಂದುವರಿದರೆ ಕರಾವಳಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬ್ರೇಕ್‌ ಹಾಕಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಜನರು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ. ಇಲ್ಲವಾದಲ್ಲಿ ಚೀನಾದಂತೆ ರಾಜ್ಯ ಕೂಡ ಸ್ಮಶಾಣದಂತಾಗುತ್ತದೆ.

(Don’t care about covid rules) In the background of increasing corona in the country, some guidelines have been implemented to control corona in the state as well. The health department has suggested that masks should be worn in public places and social distancing should be maintained.

Comments are closed.