Morning Dizziness:ಮುಂಜಾನೆ ಎದ್ದ ತಕ್ಷಣ ತಲೆ ಸುತ್ತು ಕಾಣಿಸುತ್ತಿದ್ಯಾ ? ಹಾಗಾದ್ರೆ ನಿರ್ಲಕ್ಣ್ಯ ಬೇಡಾ, ಈ ಸಮಸ್ಯೆಯ ಸಂಕೇತ ಆಗಿರಬಹುದು

(Morning Dizziness)ಬೆಳಿಗ್ಗೆ ಎದ್ದ ತಕ್ಷಣ ಫ್ರೆಶ್ ಅನಿಸಿದರೆ ದಿನವು ಚೆನ್ನಾಗಿರುತ್ತದೆ. ಆದರೆ ಕೆಲವರಿಗೆ ಬೆಳಿಗ್ಗೆ ಎದ್ದ ನಂತರವೇ ತಲೆಸುತ್ತು ಬರಲು ಶುರುವಾಗುತ್ತದೆ. ನೀವು ಸಹ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಬೇಡಿ . ತಕ್ಷಣ ವೈದ್ಯರನ್ನು ಸಂಪರ್ಕಿಸಿ ಈ ಸಮಸ್ಯೆ ಏಕೆ ನಿಮ್ಮನ್ನು ಕಾಡುತ್ತಿದೆ ಎಂಬ ವಿಷಯ ತಿಳಿದುಕೊಳ್ಳಿ ಮತ್ತು ವೈದ್ಯರ ಸಲಹೆಗಳನ್ನು ಪಾಲನೆ ಮಾಡಿ. ತಲೆ ಸುತ್ತುವ ಸಮಸ್ಯೆ ಯಾಕೆ ನಿಮ್ಮನ್ನು ಕಾಡುತ್ತದೆ ಎಂಬ ಮಾಹಿತಿಯ ಕುರಿತು ತಿಳಿಯಿರಿ.

(Morning Dizziness)ರಕ್ತಹೀನತೆ
ರಕ್ತಹೀನತೆಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು. ದೇಹದ ಕೆಂಪು ರಕ್ತ ಕಣಗಳು ದೇಹಕ್ಕೆ ಆಮ್ಲಜನಕವನ್ನು ಸರಿಯಾಗಿ ತಲುಪಿಸಲು ಸಾಧ್ಯವಾಗದಿದ್ದಾಗ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸರಿಯಾದ ಪ್ರಮಾಣದ ಆಮ್ಲಜನಕವು ನಿಮ್ಮ ಮೆದುಳಿಗೆ ತಲುಪದಿದ್ದಾಗ ತಲೆತಿರುಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವ ಜನರು ದೌರ್ಬಲ್ಯ, ಆಯಾಸ, ಚರ್ಮದ ಹಳದಿ, ತಲೆನೋವು, ಕೈ ಮತ್ತು ಕಾಲುಗಳ ಶೀತ ಮತ್ತು ಉಸಿರಾಟದ ತೊಂದರೆಗಳಂತಹ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಪೂರೈಸುವುದಕ್ಕಾಗಿ ಕಬ್ಬಿಣದ ಅಂಶವಿರುವ ಆಹಾರವನ್ನು ಸೇವನೆ ಮಾಡಿ.

ನೀರಿನ ಕೊರತೆ
ದೇಹದಲ್ಲಿ ನೀರಿನ ಕೊರತೆ ಉಂಟಾದರೆ ತಲೆತಿರುಗುವ ಸಮಸ್ಯೆ ಬರುತ್ತದೆ. ದೇಹದಲ್ಲಿ ನೀರಿನ ಕೊರತೆ ಇದ್ದಾಗ ನಮ್ಮ ಮೆದುಳಿಗೆ ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗುವುದಿಲ್ಲ ಇದರಿಂದಾಗಿ ತಲೆತಿರುಗುವ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಬಾಟಲ್‌ ನಲ್ಲಿ ನೀರು ತುಂಬಿ ಇಟ್ಟುಕೊಂಡು ಅದಕ್ಕೆ ತಂಪಿನ ಬೀಜ ಹಾಕಿ ಕುಡಿದರೆ ಆರೋಗ್ಯಕ್ಕೆ ಇನ್ನು ಉತ್ತಮ.

ಇದನ್ನೂ ಓದಿ:Neck Pain Reduce Tips:ಕಂಪ್ಯೂಟರ್‌ ಮುಂದೆ ಕುಳಿತು ಕುತ್ತಿಗೆ ನೋವು ಬರುತ್ತಿದೆಯೇ? ಈ ಸಲಹೆಗಳನ್ನು ಪಾಲಿಸಿ

ಇದನ್ನೂ ಓದಿ:Brown Sugar Health Tips:ಕಂದು ಸಕ್ಕರೆಯ ಟೀ ಎಂದಾದ್ರು ಕುಡಿದಿದ್ರಾ ?

ವಿಟಮಿನ್ ಬಿ 12 ಕೊರತೆ
ದೇಹದಲ್ಲಿ ವಿಟಮಿನ್ ಬಿ12 ಕೊರತೆ ಉಂಟಾದಾಗ ತಲೆತಿರುಗುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ . ಮೆದುಳು ಮತ್ತು ನರಮಂಡಲದ ಬೆಳವಣಿಗೆಯಲ್ಲಿ ವಿಟಮಿನ್ ಬಿ 12 ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಟಮಿನ್ ಬಿ12 ಕೊರತೆಯಿಂದ ಚರ್ಮ ಹಳದಿಯಾಗುವುದು, ನಾಲಿಗೆಯಲ್ಲಿ ದದ್ದುಗಳು, ನಾಲಿಗೆ ಕೆಂಪಾಗುವುದು, ಬಾಯಿಯಲ್ಲಿ ಹುಣ್ಣು, ದೃಷ್ಟಿಹೀನತೆ, ಖಿನ್ನತೆ, ದೌರ್ಬಲ್ಯ ಮತ್ತು ಆಲಸ್ಯ, ಉಸಿರಾಟದ ತೊಂದರೆ, ತಲೆನೋವು ,ಹಸಿವು ಮುಂತಾದ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಅದಕ್ಕಾಗಿಯೇ ನೀವು ವಿಟಮಿನ್ ಬಿ 12 ಸಮೃದ್ಧವಾಗಿರುವಂತಹ ಆಹಾರವನ್ನು ಸೇವನೆ ಮಾಡುವುದು ಉತ್ತಮ.

Morning Dizziness Do you feel dizzy as soon as you wake up in the morning? dont Neglect, this can be a sign of a problem

Comments are closed.