India Cricket Team Next Coach : ದ್ರಾವಿಡ್ ನಂತರ ಇವರೇ ಟೀಮ್ ಇಂಡಿಯಾ ಕೋಚ್, ಬಿಸಿಸಿಐ ಸೂಪರ್ ಪ್ಲಾನ್

ಬೆಂಗಳೂರು: ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಖ್ಯಾತಿಯ ರಾಹುಲ್ ದ್ರಾವಿಡ್ (India Cricket team coach Rahul Dravid) ಭಾರತ ಸೀನಿಯರ್ ಕ್ರಿಕೆಟ್ ತಂಡದ ಹಾಲಿ ಕೋಚ್. 2021ರ ನವೆಂಬರ್’ನಲ್ಲಿ ದ್ರಾವಿಡ್ ಟೀಮ್ ಇಂಡಿಯಾ ಹೆಡ್ ಕೋಚ್ (India Cricket Team Next Coach) ಆಗಿ ನೇಮಕಗೊಂಡಿದ್ದರು.ಟೀಮ್ ಇಂಡಿಯಾ ಕೋಚ್ ಆಗಿ ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC Men’s World Cup 2023) ಬೆನ್ನಲ್ಲೇ ಮುಕ್ತಾಯಗೊಳ್ಳಲಿದೆ.

ನಂತರ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಗಳು ಕಡಿಮೆ. ಯಾಕಂದ್ರೆ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಈಗಾಗಲೇ ಸಾಲು ಸಾಲು ಸೋಲುಗಳನ್ನು ಕಂಡಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಸೋತಿದ್ದ ಟೀಮ್ ಇಂಡಿಯಾ, ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಸೋತಿದೆ. ಬಳಿಕ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಭಾರತ ತಂಡ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಸೆಮಿಫೈನಲ್’ನಲ್ಲಿ ಸೋಲು ಕಂಡಿತ್ತು.

ಕೋಚ್ ಆಗಿ ದ್ರಾವಿಡ್ ಸತತ ವೈಫಲ್ಯಗಳನ್ನು ಎದುರಿಸಿರುವ ಕಾರಣ ಮತ್ತೊಂದು ಅವಧಿಗೆ ಮುಂದುವರಿಯುವ ಸಾಧ್ಯತೆಗಳಿಲ್ಲ.ಹಾಗಾದ್ರೆ ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಯಾರು? ಈ ಪ್ರಶ್ನೆಗೆ ಬಿಸಿಸಿಐಗೆ ಈಗಾಗ್ಲೇ ಉತ್ತರ ಸಿಕ್ಕಿದೆ. ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಅವರ ದೀರ್ಘಕಾಲದ ಒಡನಾಡಿ, ಹಾಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಭಾರತ ತಂಡದ ಮುಂದಿನ ಕೋಚ್ ಆಗುವ ಸಾಧ್ಯತೆಗಳಿವೆ.

48 ವರ್ಷದ ವಿವಿಎಸ್ ಲಕ್ಷ್ಮಣ್ ಈಗಾಗ್ಲೇ ಭಾರತ ತಂಡದ ಪಾರ್ಟ್ ಟೈಮ್ ಕೋಚ್ ಆಗಿ ಯಶಸ್ಸು ಗಳಿಸಿದ್ದಾರೆ. ದ್ರಾವಿಡ್ ಅನುಪಸ್ಥಿತಿಯಲ್ಲಿ ಐರ್ಲೆಂಡ್ ಪ್ರವಾಸದ ಟಿ20 ಸರಣಿ, ಜಿಂಬಾಬ್ವೆ ಪ್ರವಾಸ ಮತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿ ಲಕ್ಷ್ಮಣ್ ಟೀಮ್ ಇಂಡಿಯಾ ಕೋಚ್ ಆಗಿದ್ದರು. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧದ ಟಿ20 ಸರಣಿ, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆದ್ದಿತ್ತು.

ಇದನ್ನೂ ಓದಿ : Abhimanyu Eswaran : ತಂದೆ ಕಟ್ಟಿಸಿದ ತನ್ನ ಸ್ವಂತ ಮೈದಾನದಲ್ಲೇ ರಣಜಿ ಪಂದ್ಯವಾಡುತ್ತಿದ್ದಾನೆ ಅಭಿಮನ್ಯು!

ಇದನ್ನೂ ಓದಿ : Dexa test : ಟೀಮ್ ಇಂಡಿಯಾ ಆಟಗಾರರಿಗೆ ಇನ್ನು ಡೆಕ್ಸಾ ಪರೀಕ್ಷೆ ಕಡ್ಡಾಯ, ಏನಿದು ಡೆಕ್ಸಾ ಟೆಸ್ಟ್?

ಇದನ್ನೂ ಓದಿ : Border-Gavaskar test series : ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಸ್ಥಾನ ತುಂಬುವವರು ಈ ತ್ರಿಮೂರ್ತಿಗಳಲ್ಲಿ ಯಾರು?

ಭಾರತ ಪರ 134 ಟೆಸ್ಟ್ ಪಂದ್ಯಗಳನ್ನಾಡಿರುವ ವಿವಿಎಸ್ ಲಕ್ಷ್ಮಣ್, ಟೀಮ್ ಇಂಡಿಯಾದ ಆಪದ್ಬಾಂಧವ ಎಂದೇ ಖ್ಯಾತಿ ಪಡೆದಿದ್ದರು. 2012ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುವ ಮುನ್ನ ಆಡಿದ 134 ಟೆಸ್ಟ್ ಪಂದ್ಯಗಳಿಂದ 17 ಶತಕಗಳ ನೆರವಿನೊಂದಿಗೆ 8781 ರನ್ ಗಳಿಸಿದ್ದರು. ರಾಹುಲ್ ದ್ರಾವಿಡ್ ಅವರೊಂದಿಗೆ ಹಲವಾರು ಸ್ಮರಣೀಯ ಜೊತೆಯಾಟಗಳನ್ನಾಡಿರುವ ಲಕ್ಷ್ಮಣ್, ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy – NCA) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

India Cricket Team Next Coach : Dravid to be replaced by VVS Laxman as head coach of Team India

Comments are closed.