Former CM HD Kumaraswamy : ಪ್ರವೀಣ್​, ಮಸೂದ್​ ನಿವಾಸಕ್ಕೆ ಹೆಚ್​​ಡಿಕೆ ಭೇಟಿ : ತಲಾ 5 ಲಕ್ಷ ರೂ. ಪರಿಹಾರ

ದಕ್ಷಿಣ ಕನ್ನಡ : Former CM HD Kumaraswamy visits : ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಮಸೂದ್​ ಹಾಗೂ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣಗಳು ರಾಜಕೀಯ ನಾಯಕರನ್ನು ಕಡಲನಗರಿಯತ್ತ ತಿರುಗಿ ನೋಡುವಂತೆ ಮಾಡಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್​ ನೆಟ್ಟಾರು ಮತ್ತು ಮಸೂದ್​ ಕುಟುಂಬಕ್ಕೆ ಇಂದು ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ಭೇಟಿ ನೀಡಿದ್ದು ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರು ಗ್ರಾಮದಲ್ಲಿರುವ ಹತ್ಯೆಯಾದ ಪ್ರವೀಣ್​ ಕುಟುಂಬಸ್ಥರನ್ನು ಮೊದಲು ಭೇಟಿಯಾದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪ್ರವೀಣ್​ ಪತ್ನಿ ಹಾಗೂ ಪೋಷಕರಿಗೆ ಸಾಂತ್ವನ ತಿಳಿಸಿದರು. ಹಾಗೂ ಪ್ರವೀಣ್​ ನೆಟ್ಟಾರು ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್​ ವಿತರಿಸಿದರು.

ಪ್ರವೀಣ್​ ನೆಟ್ಟಾರು ಕುಟುಂಬಸ್ಥರ ಭೇಟಿ ಬಳಿಕ ಬೆಳ್ಳಾರೆಯಲ್ಲಿ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ, ಪ್ರವೀಣ್​ ನೆಟ್ಟಾರು ಕುಟುಂಬಸ್ಥರನ್ನು ಇಂದು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದ್ದೇನೆ. ಪ್ರವೀಣ್​​ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿದ್ದೇನೆ. ಆ ಕುಟುಂಬಕ್ಕೆ ಕೆಲ ದಿನಗಳ ಅನುಕಂಪ ಬೇಡ, ತಪ್ಪಿತಸ್ಥರು ಯಾರೋ ಅವರಿಗೆ ಶಿಕ್ಷೆಯಾಗಲಿ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ಈ ಕೊಲೆ ಪ್ರಕರಣವನ್ನು ಎನ್​ಐಎಗೆ ವಹಿಸಿದೆ. ಎನ್​ಐಎಗೆ ವಹಿಸಿ ಕೈ ತೊಳೆದುಕೊಂಡಿದೆ . ಎನ್​ಐಎ ಇದುವರೆಗೆ ಎಷ್ಟು ಕೇಸ್ ಬಗೆಹರಿಸಿದೆ..? ಎನ್​ಐಎ ತನಿಖೆ ಮಾಡಲ್ಲ, ಇತ್ತ ಪೊಲೀಸರೂ ವಿಚಾರಣೆ ಮಾಡಲ್ಲ ಎಂದು ಸರ್ಕಾರ ಹಾಗೂ ಎನ್​ಐಎ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಪ್ರವೀಣ್​ ನೆಟ್ಟಾರು ಕುಟುಂಬಸ್ಥರ ಭೇಟಿ ಬಳಿಕ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ನೇರವಾಗಿ ಸುಳ್ಯ ತಾಲೂಕಿನ ಕಳಂಜೆಯಲ್ಲಿರುವ ಕೊಲೆಯಾದ ಮಸೂದ್​ ನಿವಾಸಕ್ಕೆ ಭೇಟಿ ನೀಡಿ ಆ ಕುಟುಂಬದ ಸಮಸ್ಯೆಯನ್ನೂ ಆಲಿಸಿದ್ದಾರೆ. ಅಲ್ಲದೇ ಮಸೂದ್​ ಪೋಷಕರಿಗೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್​ ವಿತರಣೆ ಮಾಡಿದರು.

ಇದನ್ನು ಓದಿ : Marnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ ಆಸೀಸ್ ಕ್ರಿಕೆಟರ್ ?

ಇದನ್ನೂ ಓದಿ : assault on kannada actor chandan kumar : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮೇಲೆ ಹಲ್ಲೆ: ತೆಲುಗಿನ ಶೂಟಿಂಗ್ ವೇಳೆ ಘಟನೆ

Former CM HD Kumaraswamy visits the residence of murdered Masood and Praveen Nettaru.

Comments are closed.