Bank fraud : ಬ್ರಹ್ಮಾವರದಲ್ಲಿ ಸಾಲ ಪಡೆದು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚನೆ

ಬ್ರಹ್ಮಾವರ : ವ್ಯವಹಾರಕ್ಕಾಗಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು, ಭದ್ರತೆಗಾಗಿ ಇಟ್ಟಿದ್ದ ವಸ್ತುಗಳನ್ನು ಮಾರಾಟ ಮಾಡಿ ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚನೆ (Bank fraud) ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಇದೀಗ ಬ್ಯಾಂಕಿನ ಮ್ಯಾನೇಜರ್‌ ಪೊಲೀಸ್‌ ಠಾಣೆಗೆ ಸಾಲ ಪಡೆದವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಬ್ರಹ್ಮಾವರ ಬೈಕಾಡಿ ಗ್ರಾಮದಲ್ಲಿ ಸಂತೋಷ್‌ ಕೋಟ್ಯಾನ್‌ ಹಾಗೂ ಮಂಜುಳಾ ಕೋಟ್ಯಾನ್‌ ಎಂಬವರು ಭಾತರ್‌ ಕೋ ಅಪರೇಟಿವ್‌ ವ್ಯಾಂಕ್‌ (ಮುಂಬೈ) ಲಿಮಿಟೆಡ್‌ ಇದರ ಉಡುಪಿ ಶಾಖೆಯಲ್ಲಿ ವ್ಯವಹಾರದ ಉದ್ದೇಶದಿಂದ 2.89 ಕೋಟಿ ರೂಪಾಯಿ ಸಾಲ ಪಡೆದಿದ್ದು, ಸಾಲದ ಭದ್ರತೆಗಾಗಿ ಫ್ಯಾಕ್ಟರಿಯ ಚರ ಆಸ್ಥಿಯನ್ನು ಬ್ಯಾಂಕಿನವರಿಗೆ ಕರಾರು ಪತ್ರದ ಮೂಲಕ ಅಡಮಾನ ಇರಿಸಿ, ಫ್ಯಾಕ್ಟರಿಯ ಚರ ಆಸ್ಥಿಯ ಮೇಲೆ ಬ್ಯಾಂಕಿನವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಮಾಡಿಕೊಟ್ಟಿರುತ್ತಾರೆ. ನಂತರದ ದಿನಗಳಲ್ಲಿ ಆರೋಪಿತರು ಬ್ಯಾಂಕಿನಿಂದ ಪಡೆದ ಸಾಲದ ಮೊತ್ತಕ್ಕೆ ಸರಿಯಾಗಿ ಸಾಲದ ಕಂತಿನ ಹಣವನ್ನು ಪಾವತಿ ಮಾಡದೇ ಇದ್ದುದರಿಂದ ಸಾಲದ ಮರುಪಾವತಿಯು ಎನ್‌ಪಿಎ ಗೆ ವರ್ಗೀಕರಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ನೋಟೀಸ್‌ ಜಾರಿ ಮಾಡಿತ್ತು.

ಸಾಲದ ಕಂತಿನ ಹಣವನ್ನು ಸರಿಯಾಗಿ ಕಟ್ಟದೇ ಇದ್ದುದರಿಂದ ಆರೋಪಿತರು ಸಾಲದ ಅಡಮಾನ ಇರಿಸಿದ್ದ ಸ್ವತ್ತುಗಳನ್ನು ಭಾರತ್ ಕೋ ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್‌ ನ ಡೆಪ್ಯುಟಿ ಜನರಲ್ ಮೆನೇಜರ್ & ಆಥೋರೈಸಡ್ ಆಫಿಸರ್ ಬಾಲಕೃಷ್ಣ ಕರ್ಕೆರಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನಂತರದಲ್ಲಿ ಬ್ಯಾಂಕಿನಿಂದ ಪಡೆದ ಸಾಲದ ಮೊತ್ತಕ್ಕೆ ಅಡಮಾನ ಇರಿಸಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಪರಿಶೀಲನೆ ಮಾಡಿದಾಗ ಫ್ಯಾಕ್ಟರಿಯಲ್ಲಿದ್ದ ಮೆಷಿನರಿ ವಸ್ತುಗಳು ಮತ್ತು ಇತರೇ ವಸ್ತುಗಳನ್ನು ಫ್ಯಾಕ್ಟರಿಯಿಂದ ಸಾಗಾಟ ಮಾಡಲಾಗಿತ್ತು.

ಈ ಕುರಿತು ಆರೋಪಿಗಳಿಗೆ ಬ್ಯಾಂಕಿನಿಂದ ನೋಟೀಸ್‌ ಜಾರಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ: 406, 409, 415, 418, 420, 421, 422, 424, 425 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇದನ್ನೂ ಓದಿ : 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

ಇದನ್ನೂ ಓದಿ : ಪತಿಯೊಂದಿಗೆ ಮನೆಯಲ್ಲಿದ್ದ ವೇಳೆ ಪತ್ನಿ ಅನುಮಾನಾಸ್ಪದ ಸಾವು: ಪತಿ ಸ್ಥಿತಿ ಗಂಭೀರ

( fraud of 2.89 crore of rupees for a Bharath Co-operative bank Udupi)

Comments are closed.