Hejamadi toll rate: ಪ್ರಯಾಣಿಕರಿಗೆ ಟೋಲ್ ಶಾಕ್ :ಡಿ.1 ರಿಂದ ಹೆಜಮಾಡಿ ಟೋಲ್‌ ದರ ದುಪ್ಪಟ್ಟು

ಮಂಗಳೂರು: (Hejamadi toll rate) ಸುರತ್ಕಲ್‌ ಟೋಲ್ ಗೇಟ್‌ ರದ್ದು ಮಾಡುವ ಬದಲು ಅದನ್ನು ಹೆಜಮಾಡಿಯಲ್ಲಿರುವ ಟೋಲ್‌ ನಲ್ಲಿ ವಿಲೀನಗೊಳಿಸಲಾಗಿದೆ. ಜೊತೆಗೆ ಸುರತ್ಕಲ್‌ ಟೋಲ್‌ ನಲ್ಲಿ ಸಂಗ್ರಹಿಸುತ್ತಿದ್ದ ಪೂರ್ತಿ ಶುಲ್ಕವನ್ನು ಹೆಜಮಾಡಿ ಟೋಲ್‌ ನಲ್ಲಿ ಸಂಗ್ರಹಿಸಲಾಗುತ್ತದೆ.

ಟೋಲ್ ವಿಲೀನ ಕುರಿತು ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಿಳತಕ್ಕೆ ಪತ್ರ ಬರೆದಿದ್ದು, ಡಿಸೆಂಬರ್‌ ಒಂದರಿಂದ ಅನ್ವಯವಾಗುವಂತೆ ಸುರತ್ಕಲ್‌ ಟೋಲ್‌ ವಿಲೀನಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಸುರತ್ಕಲ್ ಟೋಲ್ ರದ್ದಾಯ್ತು ಅಂತಾ ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಮೊದಲೇ ಸರಕಾರ ಶಾಕ್ ಕೊಟ್ಟಿದೆ. ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್ ಜೊತೆಗೆ ವಿಲೀನಗೊಳಿಸಲಾಗಿದೆ. ಇದರಿಂದಾಗಿ ಹೆಜಮಾಡಿ ಟೋಲ್ (Hejamadi toll rate) ನಲ್ಲಿ ವಾಹನಗಳ ಮೊತ್ತ ದುಬಾರಿಯಾಗಲಿದ್ದು, ಡಿಸೆಂಬರ್‌ ಒಂದರ ಮಧ್ಯರಾತ್ರಿಯಿಂದಲೇ ಹೆಜಮಾಡಿ ಟೋಲ್‌ ಗೇಟ್‌ ನಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದ ಟೋಲ್‌ ಸಂಗ್ರಹಣೆಯ ಶುಲ್ಕದ ಪರಿಷ್ಕೃತ ದರ ಪಟ್ಟಿ ಈ ಕೇಳಗಿನಂತಿವೆ.

*ಕಾರು, ಜೀಪು ವ್ಯಾನ್‌ ಸಹಿತ ಲಘು ವಾಹನ : ಸುರತ್ಕಲ್‌ ನಲ್ಲಿ ಸಿಂಗಲ್‌ ಟ್ರಿಪ್‌ ಗೆ ಇದ್ದ ದರ 60 ರೂ. ಹೆಜಮಾಡಿ ದರ 40 ರೂ. ಸೇರಿಸಿ 100 ರೂ.
-ರಿಟರ್ನ್‌ ಟ್ರಿಪ್‌ ದರ : 90 ರೂ. ಮತ್ತು 65 ರೂ. ಸೇರಿ 155 ರೂ.

*ಲೈಟ್‌ ಕಮರ್ಷಿಯಲ್‌ ವಾಹನ, ಲೈಟ್‌ ಗೂಡ್ಸ್‌ ವಾಹನ/ಮಿನಿ ಬಸ್:‌ ಸುರತ್ಕಲ್‌ ನಲ್ಲಿ ಸಿಂಗಲ್‌ ಟ್ರಿಪ್‌ ಗೆ ಇದ್ದ ದರ 100 ರೂ. ಹೆಜಮಾಡಿಯಲ್ಲಿ 70 ರೂ. ಸೇರಿ 170 ರೂ.
-ರಿಟರ್ನ್‌ ಟ್ರಿಪ್‌ ದರ : 150 ರೂ. ಮತ್ತು 100 ರೂ. ಸೇರಿ 250 ರೂ.

*ಬಸ್‌ ಅಥವಾ ಟ್ರಕ್:‌ ಸುರತ್ಕಲ್‌ ನಲ್ಲಿ ಸಿಂಗಲ್‌ ಟ್ರಿಪ್‌ ಗೆ ಇದ್ದ ದರ 220 ರೂ. ಹೆಜಮಾಡಿ ದರ 145 ರೂ ಸೇರಿ 355 ರೂ.
-ರಿಟರ್ನ್‌ ಟ್ರಿಪ್‌ ದರ : 310 ರೂ. ಮತ್ತು 215 ರೂ. ಸೇರಿ 525 ರೂ.

*ಭಾರೀ ನಿರ್ಮಾಣ ಯಂತ್ರೋಪಕರಣ, ಬೃಹತ್‌ ಉಪಕರಣ ಮತ್ತು ಮಲ್ಟಿ ಆಕ್ಟಿವ್‌ ವಾಹನಗಳು: ಸುರತ್ಕಲ್‌ ನಲ್ಲಿ ಸಿಂಗಲ್‌ ಟ್ರಿಪ್‌ ಗೆ ಇದ್ದ ದರ 325 ರೂ. ಹೆಜಮಟಾಡಿ ದರ 225 ರೂ. ಸೇರಿಸಿ 550 ರೂ.
-ರಿಟರ್ನ್‌ ಟ್ರಿಪ್‌ ದರ : 490 ರೂ. ಮತ್ತು 335 ರೂ. ಸೇರಿಸಿ 825 ರೂ.

ಇದನ್ನೂ ಓದಿ : Champa Shashti 2022: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವ : ಭಕ್ತರಿಂದ ಸಂಭ್ರಮದ ಎಡೆಸ್ನಾನ

ಇದನ್ನೂ ಓದಿ : ಮಂದಾರ್ತಿಯ ಮೇಲೂ ಉಗ್ರರ ಕಣ್ಣು : ಕಾಡಿನಲ್ಲಿ ರಿಂಗಣಿಸಿದ ಸ್ಯಾಟಲೈಟ್ ಪೋನ್ ?

ಇದನ್ನೂ ಓದಿ : Collision between two vehicles: ಗಾವಳಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ: ಖಾಸಗಿ ಬಸ್‌ ಚಾಲಕ ಗಂಭೀರ

*ಅತಿ ಗಾತ್ರದ ವಾಹನಗಳು: ಸುರತ್ಕಲ್‌ ನಲ್ಲಿ ಸಿಂಗಲ್‌ ಟ್ರಿಪ್‌ ಗೆ ಇದ್ದ ದರ 400 ರೂ. ಹೆಜಮಾಡಿ ದರ 275 ರೂ. ಸೇರಿ 675 ರೂ.
-ರಿಟರ್ನ್‌ ಟ್ರಿಪ್‌ ದರ : 595 ರೂ. ಮತ್ತು 410 ರೂ. ಸೇರಿಸಿ 1005 ರೂ.

(Hejamadi toll rate) Instead of canceling the Suratkal toll gate, it has been merged with the toll at Hejamadi. Also, the entire toll collected at Suratkal toll will be collected at Hezmadi toll.

Comments are closed.