Udupi brand sarees :ಇಂದಿರಾ ಗಾಂಧಿ, ಮಮತಾ ಬ್ಯಾನರ್ಜಿ ಮನಗೆದ್ದಿರುವ ಸುಪ್ರಸಿದ್ಧ ಉಡುಪಿ ಬ್ರ್ಯಾಂಡ್​ ಸೀರೆಗಳ ಬಗ್ಗೆ ಕೇಳಿದ್ದೀರಾ

ಉಡುಪಿ : Udupi brand sarees : ಸೀರೆ ತೊಟ್ಟ ನಾರಿ ಸೌಂಧರ್ಯ ಪ್ರಜ್ಞೆಯ ಸಂಕೇತ. ಒಂದು ಕಾಲದಲ್ಲಿ ಸುಂದರ ಸೀರೆಗಳ ತಯಾರಿಗೆ ಉಡುಪಿ ಜಿಲ್ಲೆ ದೇಶದಲ್ಲೇ ಹೆಸರಾಗಿತ್ತು. ಉಡುಪಿ ಬ್ರಾಂಡ್ ಸೀರೆಗಳೆಂದರೆ ಮಹಿಳೆಯರು ಮುಗಿಬೀಳುತ್ತಿದ್ದರು. ಬೇಸಗೆಯ ಧಗೆಗೆ ಹೇಳಿ ಮಾಡಿಸಿದ ಉಡುಪಿ ಸೀರೆಗೆ ಇಂದಿರಾಗಾಂಧಿ, ಮಮತಾ ಬ್ಯಾನರ್ಜಿಯಂಥವರೇ ಮಾರುಹೋಗಿದ್ದರು. ಹಾಗಾದ್ರೆ ಆ ಸೀರೆ ಯಾವುದು ಅದರ ಹಿನ್ನಲೆಯೇನು ಎಂಬ ಸ್ಪೆಷಲ್ ಸ್ಟೋರಿ ನಿಮ್ಮ ಮುಂದಿದೆ ಒದಿ.

ಈ ದೇಶ ಕಂಡ ದಿಟ್ಟ ಮಹಿಳೆ ಇಂದಿರಾಗಾಂಧಿ ಅವರಿಗೆ ಕೈಮಗ್ಗದ ಸೀರೆಯೆಂದರೆ ಅತಿಯಾದ ಪ್ರೀತಿ. ಕರಾವಳಿ ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ ಎಂಬ ಕಲಾಪ್ರೇಮಿ ಉಡುಪಿ ಬ್ರಾಂಡ್ ಸೀರೆಯನ್ನು ಇಂಧಿರಾಗಾಂಧಿಗೆ ಕೊಟ್ಟಾಗ, ಅವರಲ್ಲೂ ಈ ಸೀರೆಯ ಬಗ್ಗೆ ಸ್ತ್ರೀ ಸಹಜ ಮೋಹ ಉಂಟಾಗಿತ್ತಂತೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಗೂ ಉಡುಪಿ ಸೀರೆ ನಿತ್ಯಬಳಕೆಗೆ ರವಾನೆಯಾಗುತ್ತಿತ್ತು. ಆದ್ರೆ ದೇಶದಲ್ಲೇ ಹೆಸರಾದ ಉಡುಪಿ ಸೀರೆ, ಈಗ ಕವಾಟಿನ ಮೂಲೆ ಸೇರಿದೆ. ಈ ಕೈಮಗ್ಗದ ಸೀರೆ ನೇಯುವ ನೇಕಾರರು ಇಳಿವಯಸ್ಸಿಗೆ ಜಾರಿದ್ದಾರೆ. ಒಂದು ಕಾಲದಲ್ಲಿ ಐದು ಸಾವಿರ ನೇಕಾರರು ಉಡುಪಿ ಸೀರೆ ನೇಯುತ್ತಿದ್ದರೆ, ಈಗ ಐವತ್ತು ನೂರು ಮಂದಿ ಮಾತ್ರ ಉಡುಪಿ ಸೀರೆಯ ನೇಯ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಯಕ್ಷಗಾನ ಹೇಗೆ ಕರಾವಳಿಯ ಲಾಂಛನವೋ ಹಾಗೆಯೇ ಒಂದು ಕಾಲದಲ್ಲಿ ಉಡುಪಿ ಸೀರೆಯನ್ನೂ ಕರಾವಳಿಯ ಸಿಂಬಲ್ ಅಂತ ಪರಿಗಣಿಸಲಾಗಿತ್ತು. ಯಕ್ಷಗಾನದಲ್ಲಿ ಬಳಸುವ ಕಲರ್ ಫುಲ್ ಬಟ್ಟೆಗಳು ಕರಾವಳಿಯ ಕೈಮಗ್ಗದ ಜಾಣ್ಮೆಗೆ ಸಾಕ್ಷಿ. ಶಿವರಾಮ ಕಾರಂತರಂತಹಾ ಹಿರಿಯ ಚೇತನಗಳು ಈ ಮಾದರಿ ಬಟ್ಟೆಯನ್ನು ಯಕ್ಷಗಾನದ ಮೂಲಕ ವಿದೇಶದಲ್ಲೂ ಜನಪ್ರಿಯಗೊಳಿಸಿದ್ದರು. ಆದರೆ ಈಗೀಗ ಸೀರೆ ತೊಡುವವರೇ ಕಡಿಮೆಯಾಗುತ್ತಿದ್ದಾರೆ. ಹಾಗಂತ ಅಪರೂಪದ ಕೈಮಗ್ಗದಿಂದ ತಯಾರಾಗುವ ಉಡುಪಿ ಸೀರೆಗಳನ್ನು ಖರೀಧಿಸಲು ನಗರಪ್ರದೇಶದ ಶ್ರೀಮಂತ ಮಹಿಳೆಯರು ಇವತ್ತಿಗೂ ಆಸಕ್ತಿವಹಿಸಿದ್ದಾರೆ. ಮದುವೆಯಂತಹಾ ಶುಭ ಕಾರ್ಯಗಳಿಗೆ ಕರಾವಳಿ ಭಾಗದಲ್ಲಿ ಖಡ್ಡಾಯವಾಗಿ ಉಡುಪಿ ಸೀರೆ ಬಳಸುವಂತಾದರೆ ಕೈಮಗ್ಗದ ಈ ಕಲಾಕೃತಿಗೆ ಮರುಜೀವ ಬರಲಿದೆ.

ಕಡುಬೇಸಗೆಯಲ್ಲಿ ಹತ್ತಿಯಷ್ಟು ಹಗುರದ ಅನುಭವ ನೀಡುವ ಉಡುಪಿ ಸೀರೆ ಉಟ್ಟವರಿಗೇ ಗೊತ್ತು ಅದರ ಸುಖ, ಇನ್ನು ಸೀರೆ ಮಾಸಿದರೆ ಮಕ್ಕಳ ತೊಟ್ಟಿಲು, ಹೊದಿಕೆ ಯಾಗಿಯೂ ಬಳಸಬಹುದು. ಸಂಪೂರ್ಣ ಮಾಸಿದ ನಂತರ ನೆಲವಸ್ತ್ರವಾಗಿ ಬಳಸಿದರೂ ಈ ಕೈಮಗ್ಗ ಕಿತ್ತುಹೋಗಲ್ಲ. ಒಟ್ಟಿನಲ್ಲಿ ಸಾವಿರಾರು ನೇಕಾರರ ಬದುಕು ಅರಳಲು, ಉಡುಪಿ ಸೀರೆಯೆ ವೈಭವ ಮತ್ತೆ ಮರಳಬೇಕಾಗಿದೆ.

ಇದನ್ನು ಓದಿ : fell into the water :ಕಲಬುರಗಿಯಲ್ಲಿ ಮಿತಿ ಮೀರಿದ ವರುಣನ ಅಬ್ಬರ : ಬಟ್ಟೆ ತೊಳೆಯಲು ಹೋದ ಯುವತಿ ನೀರುಪಾಲು

ಇದನ್ನೂ ಓದಿ : Intergange plant : ಕರಾವಳಿಯಲ್ಲಿ ಹೆಚ್ಚಾಯ್ತು ‘ಅಂತರಗಂಗೆ’ ಅವಾಂತರ : ಪಾಳು ಬಿದ್ದ ರೈತರ ಜಮೀನುಗಳು

Have you heard about Udupi brand sarees

Comments are closed.