Rajkaaluve debate :ಸದನದಲ್ಲಿ ರಾಜಕಾಲುವೆ ಚರ್ಚೆ ವೇಳೆ ಕಾಮಿಡಿ : ಆರ್​.ಅಶೋಕ್​ಗೆ ನೀನು ಕಬ್ಬಡಿ ಆಡ್ತಿದ್ದವನು ಅಲ್ವಾ ಎಂದ ಸಿದ್ದರಾಮಯ್ಯ

ಬೆಂಗಳೂರು : Rajkaaluve debate : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ಉಂಟಾದ ಹಾನಿಯು ವಿಪಕ್ಷಗಳಿಗೆ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ. ಸದನದುದ್ದಕ್ಕೂ ವಿಪಕ್ಷಗಳು ರಾಜಕಾಲುವೆ ಅಭಿವೃದ್ಧಿಯ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸುತ್ತಲೇ ಇವೆ. ರಾಜ್ಯ ಸರ್ಕಾರವು ರಾಜಕಾಲುವೆಯನ್ನು ಅಭಿವೃದ್ಧಿ ಮಾಡಲು ವಿಳಂಬ ಮಾಡಿದ್ದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ ಎಂದು ಪ್ರತಿಪಕ್ಷದ ನಾಯಕರು ವಾದಿಸುತ್ತಿದ್ದಾರೆ.

ಇಂದು ಇದೇ ವಿಚಾರವಾಗಿ ಸದನದಲ್ಲಿ ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಯನ್ನು ಇಟ್ಟಿದ್ದಾರೆ. ಆದರೆ ಈ ಗಂಭೀರ ಚರ್ಚೆಯ ನಡುವೆಯೇ ಸದನದಲ್ಲೊಂದು ತಮಾಷೆಯ ಘಟನೆ ಕೂಡ ನಡೀತು ಕಂದಾಯ ಸಚಿವ ಆರ್.ಅಶೋಕ್​​ಗೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿನಗೆ ಕಬ್ಬಡ್ಡಿ ಆಟ ಆಡ್ತಿದ್ದೆ ಅಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.

ವಿಧಾಸಭೆಯಲ್ಲಿ ಮಳೆ ಹಾನಿ ಕುರಿತಂತೆ 69 ನಿಯಮದ ಅಡಿಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆದ ಮಳೆ ಹಾನಿ ಕುರಿತಂತೆ ಸದನದಲ್ಲಿ ಮಾಹಿತಿ ನೀಡಿದರು, ಬೆಂಗಳೂರಿನಲ್ಲಿ ಸುರಿದ ಮಳೆಗೆ 24 ಸಾವಿರ ಮನೆಗಳು ಹಾನಿಗೊಳಗಾಗಿವೆ. 7647 ಕೋಟಿ 13 ಲಕ್ಷ ರೂಪಾಯಿ ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಎಸ್​ಡಿಆರ್​ಎಫ್​ ನಾರ್ಮ್ಸ್​​ ಪ್ರಕಾರ 1012 ಕೋಟಿ 50 ಲಕ್ಷ ರೂಪಾಯಿ ಪರಿಹಾರವನ್ನು ಕೇಂದ್ರದ ಬಳಿ ಕೇಳಿದ್ದೀರಾ. ಆದರೆ ಕೇಂದ್ರ ಸರ್ಕಾರ ಒಂದು ಪೈಸೆ ಪರಿಹಾರವನ್ನು ರಾಜ್ಯಕ್ಕೆ ನೀಡಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಂತೆಯೇ ಕಂದಾಯ ಸಚಿವ ಆರ್​.ಅಶೋಕ್​ ಎದ್ದು ನಿಂತಿದ್ದಾರೆ. ಕೂಡಲೇ ಅಶೋಕ್​ ಕಡೆಗೆ ನೋಡಿದ ಸಿದ್ದರಾಮಯ್ಯ, ಅಶೋಕ್​​ ನಿಲ್ಲಬೇಡಿ, ನೀವ್ಯಾಕೆ ವ್ಯಾಯಾಮ ಮಾಡ್ತೀಯಾ? ನಿನ್ನ ಎನರ್ಜಿ ಒಳ್ಳೆನೇ ಇದೆ. ಕಬ್ಬಡ್ಡಿ ಆಡ್ತಿದ್ದೆ ಅಲ್ವಾ..? ಎಂದು ಸಿದ್ದರಾಮಯ್ಯ ಹೇಳಿದರು.ಇದಕ್ಕೆ ತಮಾಷೆಯಾಗಿಯೇ ಉತ್ತರಿಸಿದ ಸಚಿವ ಆರ್​.ಅಶೋಕ್​, ನಾನು 20 ವರ್ಷ ಆಡಿದ್ದೇನೆ ಎಂದಿದ್ದಾರೆ. ಸಿದ್ದರಾಮಯ್ಯ ಕೂಡ ತಮ್ಮ ಹಳೆಯ ದಿನಗಳನ್ನು ನೆನೆದು ನಾನು ಹೈಸ್ಕೂಲ್​ ದಿನಗಳಲ್ಲಿ ಆಡುತ್ತಿದ್ದೆ. ಆಮೇಲೆ ಆಡೋಕೆ ಆಗಲಿಲ್ಲ. ಈಗ ಆಟ ಆಡೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನು ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

ಇದನ್ನೂ ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್

Comedy during Rajkaaluve debate in the House: Siddaramaiah said to R. Ashok that you were the one who played Kabbadi.

Comments are closed.