subrahmanya sannaghatta : ದಕ್ಷಿಣ ಕನ್ನಡದಲ್ಲಿ ನಿಲ್ಲದ ವರುಣನ ಅಬ್ಬರ : ಕುಕ್ಕೆ ಕ್ಷೇತ್ರದ ಸ್ನಾನಘಟ್ಟ ಮುಳುಗಡೆ

ಮಂಗಳೂರು : subrahmanya sannaghatta : ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ವರುಣನ ಅಬ್ಬರ ಯಾಕೋ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಲೇ ಇಲ್ಲ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ಜನತೆ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ಯೋಚಿಸುವಂತಾಗಿದೆ. ಮಳೆಯ ಅವಾಂತರವು ಜನ ಸಾಮಾನ್ಯರ ಜೊತೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನಕ್ಕೆ ಬರುವವರೆಗೂ ಕಾಟ ನೀಡಿದೆ. ಭಾರೀ ಮಳೆಯಿಂದಾಗಿ ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳಲ್ಲಿನ ಹರಿವು ಹೆಚ್ಚಾಗಿದೆ. ಎರಡೂ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿದ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನ ಘಟ್ಟವು ಜಲಾವೃತಗೊಂಡಿದೆ. ಸ್ನಾನಘಟ್ಟದ ಜೊತೆತಲ್ಲಿ ದೇವರಕಟ್ಟೆ ಕೂಡ ಮುಳಗುಡೆಯಾಗಿದ್ದು ಭಕ್ತಾದಿಗಳಿಗೆ ಅಡಚಣೆಯುಂಟಾಗಿದೆ.

ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆ ಬರುವವರು . ಸರ್ಪ ಸಂಸ್ಕಾರಗಳಂತಹ ಕಾರ್ಯಗಳಲ್ಲಿ ಭಾಗಿಯಾಗುವವರು ಕುಮಾರಧಾರಾ ಸ್ನಾನ ಘಟ್ಟದಲ್ಲಿ ಮಿಂದೇಳುವುದು ಸರ್ವೇ ಸಾಮಾನ್ಯ. ಆದರೆ ಇದೀಗ ಸ್ನಾನ ಘಟ್ಟವೇ ಮುಳುಗಡೆಯಾಗಿರುವುದು ಭಕ್ತರಿಗೆ ತೊಂದರೆಯನ್ನುಂಟು ಮಾಡಿದೆ. ಆದರೂ ಸಹ ಕೆಲ ಭಕ್ತರು ಅಪಾಯವನ್ನೂ ಲೆಕ್ಕಿಸದೇ ಪ್ರವಾಹದ ನೀರಿನಲ್ಲಿಯೇ ತೀರ್ಥ ಸ್ನಾನವನ್ನು ಕೈಗೊಳ್ಳುತ್ತಿದ್ದಾರೆ. ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ಮುಂಜಾಗ್ರತೆಯನ್ನು ವಹಿಸಿದೆ.

ಕುಮಾರಧಾರಾ ಸ್ನಾನ ಘಟ್ಟದಲ್ಲಿ ರಾತ್ರಿ ಹಗಲು ಎನ್ನದೇ ಪಾಳಿಯ ಅನುಸಾರ ಇಬ್ಬರು ರಕ್ಷಕರ ದಳವನ್ನು ಇರಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಭಕ್ತರು ಪ್ರವಾಹದಿಂದಾಗಿ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ನೆರವಾಗುವ ನಿಟ್ಟಿನಲ್ಲಿ ರಕ್ಷಕರನ್ನು ನಿಯೋಜಿಸಲಾಗಿದೆ. ಮಾತ್ರವಲ್ಲದೇ ಸ್ನಾನಘಟ್ಟದಲ್ಲಿ ಹಗ್ಗವನ್ನು ಕಟ್ಟಲಾಗಿದ್ದು ಭಕ್ತರು ಹಗ್ಗವನ್ನು ಹಿಡಿದು ಸುರಕ್ಷಿತವಾಗಿ ತೀರ್ಥಸ್ನಾನ ಕೈಗೊಳ್ಳಲಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ಲಾನ್​ ಮಾಡಿದೆ.

ಇದನ್ನು ಓದಿ : Sidhu Moosewala : ಸಿಧು ಮೂಸೆವಾಲಾ ಹತ್ಯೆ ಪ್ರಕರಣ : ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಅಂಕಿತ್​ ತೂರ್​ ಬಂಧನ

ಇದನ್ನೂ ಓದಿ : Eknath Shinde : ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಏಕನಾಥ್​ ಶಿಂಧೆ ನೇತೃತ್ವದ ‘ಮಹಾ’ ಸರ್ಕಾರ

ಇದನ್ನೂ ಓದಿ : Security breach: ಪ್ರಧಾನಿ ಮೋದಿ ಆಂಧ್ರ ಪ್ರವಾಸದ ಸಂದರ್ಭದಲ್ಲಿ ಭದ್ರತಾ ಲೋಪ : ಹೆಲಿಕಾಪ್ಟರ್​ ಸಮೀಪಿಸಿದ ಕಪ್ಪು ಬಲೂನು

ಇದನ್ನೂ ಓದಿ : PSI Recruitment Scam : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್​ ಪೌಲ್​ ಬಂಧನ

Karnataka rain forecast kukke Subrahmanya sannaghatta drowned by heavy rains

Comments are closed.