Kodachadri to Kollura Ropeway : ಕೊಡಚಾದ್ರಿಯಿಂದ ಕೊಲ್ಲೂರ ರೋಪ್ ವೇ : ಕಾಮಗಾರಿಗೆ ಟೆಂಡರ್ ಕರೆದ ಸರ್ಕಾರ, ಪರಿಸರವಾದಿಗಳ ಆಕ್ಷೇಪ

ಕೊಲ್ಲೂರು : ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೊರೆಂಟು ಯೋಜನೆ ರೂಪಿಸುತ್ತಿರೋ ಕೇಂದ್ರ ಸರ್ಕಾರ ಕೊನೆಗೂ ಬಹುದಿನಗಳಿಂದ ಪ್ರಸ್ತಾಪಿತ ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್ ವೇ (Kodachadri to Kollura Ropeway)ನಿರ್ಮಾಣಕ್ಕೆ ಅಸ್ತು ಎಂದಿದ್ದು ರಾಜ್ಯ ಸರ್ಕಾರ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ. ಸದ್ಯದಲ್ಲೇ ರೋಪ್ ವೇ ನಿರ್ಮಾಣಕ್ಕೆ ಟೆಂಡರ್ ಕರೆಯಲು ಸಿದ್ಧತೆ ಆರಂಭವಾಗಿದೆ.

ಅಂದಾಜು 6.68 ಕಿಲೋಮೀಟರ್ ವ್ಯಾಪ್ತಿಯ ಈ ರೋಪ್ ವೇ (Kodachadri to Kollura Ropeway)ಅಭಿವೃದ್ಧಿ ಪಡಿಸೋದರಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದ್ದು, ಇದರಿಂದ ಜನರಿಗೆ ಉದ್ಯೋಗಾವಕಾಶ ಹಾಗೂ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ ಅನ್ನೋದು ಕೇಂದ್ರದ ಲೆಕ್ಕಾಚಾರ. ಈ ಬಗ್ಗೆ ಸ್ಥಳೀಯ ಸಂಸದರಾದ ಬಿ.ವೈ.ರಾಘವೇಂದ್ರ್ ಹಾಗೂ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಈ ಯೋಜನೆಯ ರೂಪುರೇಷೆಯೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಖಾಸಗಿ ಸಂಸ್ಥೆಗೆ ರೋಪ್ ವೇ ನಿರ್ಮಾಣಕ್ಕೆ ಗುತ್ತಿಗೆ ನೀಡಲು ಸಿದ್ಧತೆ ನಡೆದಿದೆ. ಅಲ್ಲದೇ ಪ್ರಸ್ತಾಪಿಸಿದ ಯೋಜನೆಯ ಜಾರಿಗೆ ಎದುರಾಗುವ ಸಮಸ್ಯೆಗಳ ಕುರಿತ ಚರ್ಚೆಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಇದೇ ವರ್ಷದ ಅಂತ್ಯದ ವೇಳೆಗೆ ರೋಪ್ ವೇ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು ಜನವರಿ ವೇಳೆಗೆ ಕಾಮಗಾರಿ ಆರಂಭವಾಗುವ ನೀರಿಕ್ಷೆ ಇದೆ.

ಕೊಡಚಾದ್ರಿ ಸರ್ವಜ್ಞ ಪೀಠ,ತ್ರಿಶೂಲ,ಗರ್ಭಗುಡಿ ಹೊಂದಿದ್ದು ಭಕ್ತರ ಧ್ಯಾನ,ಚಾರಣ ಹಾಗೂ ಪ್ರವಾಸದ ಸ್ಥಾನವಾಗಿದೆ. ಆದರೆ ಇದುವರೆಗೂ ಕಾಲ್ನಡಿಗೆ ಹಾಗೂ ಚಾರಣದ ಮೂಲಕವೇ ಸ್ಥಳಕ್ಕೆ ತೆರಳುವ ಸ್ಥಿತಿ ಇರೋದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿತ್ತು. ಈಗ ರೋಪ್ ವೇ ನಿರ್ಮಾಣದಿಂದ ಕೊಡಚಾದ್ರಿ ಬೆಟ್ಟಕ್ಕೆ ಭೇಟಿ ನೀಡೋದು ಸುಲಭವಾಗಲಿದೆ ಅನ್ನೋದು ಸರ್ಕಾರದ ಚಿಂತನೆ.

ಆದರೆ ದಟ್ಟ ಕಾಡಿನಿಂದ ಕೂಡಿದ ಈ ಪ್ರದೇಶದಲ್ಲಿ ರೋಪ್ ವೇ ನಿರ್ಮಾಣದಿಂದ ಕಾಡು ನಾಶವಾಗಲಿದ್ದು, ಹಲವು ಅಪರೂಪದ ಪಕ್ಷಿ ,ಪ್ರಾಣಿ ಸಂಕುಲಕ್ಕೂ ಆತಂಕ ಎದುರಾಗಲಿದೆ. ಹೀಗಾಗಿ ಈ ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಬೇಡ ಎಂಬುದು ಪರಿಸರವಾದಿಗಳ ಬೇಡಿಕೆಯಾಗಿತ್ತು.

ಇದನ್ನೂ ಓದಿ : Bhanvar lal Died : ಕಾಂಗ್ರೆಸ್ ಹಿರಿಯ ನಾಯಕ ಭನ್ವರ್‌ ಲಾಲ್‌ ಶರ್ಮಾ ವಿಧಿವಶ

ಇದನ್ನೂ ಓದಿ : CM Basavaraj Bommai : CM ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಅಂತರಾಷ್ಟ್ರೀಯ ಬಿಸಿನೆಸ್‌ ಅವಾರ್ಡ್‌

ಇದನ್ನೂ ಓದಿ : Pramod Muthalik contest in Udupi : ಯುಪಿ‌ ಮಾದರಿ ಆಡಳಿತ; ಉಡುಪಿಯಿಂದ ಚುನಾವಣಾ ಕಣಕ್ಕೆ ಪ್ರಮೋದ್ ಮುತಾಲಿಕ್ ?

ಆದರೆ ಈಗ ಸರ್ಕಾರ ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ಯೋಜನೆ ಜಾರಿಗೆ ಸಿದ್ಧವಾಗಿದೆ. ಕೇಂದ್ರ ಸರಕಾರವೂ ಕರ್ನಾಟಕದ ಕೊಡಚಾದ್ರಿ ಸೇರಿದಂತೆ ಜಮ್ಮು ಕಾಶ್ಮೀರ,ತ್ರಿಪುರ,ಅರುಣಾಚಲ ಪ್ರದೇಶ, ತಮಿಳುನಾಡು,ಮಣಿಪುರದಲ್ಲೂ ರೋಪ್ ವೇ ನಿರ್ಮಾಣ ಕ್ಕೆ ಅಸ್ತು ಎಂದಿದೆ. ಆದರೆ ಕರ್ನಾಟಕದಲ್ಲಿ ಕಾಮಗಾರಿ ಆರಂಭದ ಬಳಿಕವೂ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

Kodachadri to Kollura Ropeway: Government calls tender for work, environmentalists object

Comments are closed.