ನ್ಯಾಯಾಲಯದ ಮೆಟ್ಟಿಲೇರಿದ ಗೆಜ್ಜೆಗಿರಿ ವಿವಾದ….! ಕೋಟಿ – ಚೆನ್ನಯ್ಯರ ಕ್ಷೇತ್ರದಲ್ಲಿ ಆಡಳಿತಕ್ಕಾಗಿ ಕಿತ್ತಾಟ

ಪುತ್ತೂರು : ತುಳುನಾಡ ವೀರಪುರುಷರೆಂದು ಖ್ಯಾತಿ ಪಡೆದಿರುವ ಕೋಟಿ ಚೆನ್ನಯ್ಯರ ಮೂಲಕ್ಷೇತ್ರ ಗೆಜ್ಜೆಗಿರಿ ಕೆಲ ತಿಂಗಳ ಹಿಂದೆಯಷ್ಟೇ ಜೀರ್ಣೋದ್ದಾರ ಕಂಡಿತ್ತು. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಗೆಜ್ಜೆಗಿರಿಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ವರ್ಷ ಕಳೆಯುವ ಮೊದಲೇ ಆಡಳಿತಕ್ಕಾಗಿ ಕಿತ್ತಾಟ ಶುರುವಾಗಿದ್ದು, ವಿವಾದ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕುರಿತ EXCLUSIVE ಸ್ಟೋರಿ ಇಲ್ಲಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಗೆಜ್ಜೆಗಿರಿ ಪ್ರಮುಖ ಯಾತ್ರಾಸ್ಥಳ. ತುಳುನಾಡ ವೀರಪುರುಷರು ಎನಿಸಿಕೊಂಡಿರುವ ಕೋಟಿ ಚೆನ್ನಯ್ಯಯರು ನಡೆದಾಡಿ ಪುಣ್ಯಭೂಮಿ. ಕರಾವಳಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿಯೂ ಗೆಜ್ಜೆಗಿರಿಯಲ್ಲಿ ಲಕ್ಷಾಂತರ ಮಂದಿ ಭಕ್ತರು ಆರಾಧಿಸುತ್ತಲೇ ಇದ್ದಾರೆ.

ಕಳೆದ 6 ತಿಂಗಳ ಹಿಂದೆಯಷ್ಟೇ ಗೆಜ್ಜೆಗಿರಿಯನ್ನು ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ನವೀಕರಿಸಲಾಗಿದೆ. ಮಾತ್ರವಲ್ಲ 10 ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿಯೇ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು. ಕರಾವಳಿ ಭಾಗದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ರೂಪುಗೊಳ್ಳಲಿದೆ ಅನ್ನುವಷ್ಟರಲ್ಲೇ ಗೆಜ್ಜೆಗಿರಿ ವಿವಾದದ ಕೇಂದ್ರವಾಗಿ ರೂಪುಗೊಂಡಿದೆ.

ಗೆಜ್ಜೆಗಿರಿಯಲ್ಲೀಗ ಆಡಳಿತ ಹಾಗೂ ಜಾಗದ ಮಾಲೀಕತ್ವದ ಕುರಿತು ವಿವಾದವೊಂದು ಹುಟ್ಟಿಕೊಂಡಿದೆ. ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಅವರು ಪುತ್ತೂರು ನ್ಯಾಯಾಲಯದಲ್ಲಿ ಈ ಕುರಿತು ದಾವೆಯೊಂದನ್ನು ಸಲ್ಲಿಸಿದ್ದು, ( ದಾವೆ ನಂ 0S NO 08 2021) ಆ ಮೂಲಕ ಗೆಜ್ಜೆಗರಿ ದೇವಸ್ಥಾನಕ್ಕೂ ಹಾಗೂ ಆಡಳಿತದಲ್ಲಿರುವ ದೇಯಿ ಬೈದಿತಿ ಕೋಟಿ ಚೆನ್ನಯ್ಯ ಕ್ಷೇತ್ರಾಡಳಿತ ಸಮಿತಿಗೆ ಆಡಳಿತದಲ್ಲಿ ಯಾವುದೇ ಹಕ್ಕಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. ಕ್ಷೇತ್ರಾಡಳಿತದ ಸಮಿತಿಗೆ ಆಡಳಿತವನ್ನು ಪ್ರತಿಬಂಧಿಸಬೇಕೆಂದು ಅರ್ಜಿಯಲ್ಲಿ ಕೋರಿಕೆ ಸಲ್ಲಿಸಿದ್ದಾರೆ. ಈ ಕ್ಷೇತ್ರವು ತನ್ನ ಹಿರಿಯರಿಂದ ಆರಾಧಿಸಿಕೊಂಡು ಬರುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ತುಳುನಾಡಲ್ಲಿ ಕೋಟಿ ಚೆನ್ನಯ್ಯ ಇಂದಿಗೂ ಅಜರಾಮರ, ಅವರ ನೆನಪುಗಳು ಇಂದಿಗೂ ಶಾಶ್ವತವಾಗಿಯೇ ಉಳಿದುಕೊಂಡಿದೆ. ತುಳುನಾಡಿಗರು ಆರಾಧ್ಯ ದೇವರಂತೆ ಆರಾಧಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಇದೀಗ ಕ್ಷೇತ್ರಾಡಳಿತ ಸಮಿತಿ ಮತ್ತು ಶ್ರೀಧರ ಪೂಜಾರಿ ಅವರ ನಡುವಿನ ಆಡಳಿತ ಹಾಗೂ ಮಾಲೀಕತ್ವದ ಹಕ್ಕು ನ್ಯಾಯಾಲಯದ ಅಂಗಳಕ್ಕೆ ಮುಟ್ಟಿರುವುದು ಲಕ್ಷಾಂತರ ಭಕ್ತರಲ್ಲಿ ದಿಗ್ಬ್ರಮೆಯನ್ನು ಮೂಡಿಸಿದೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಗೆಜ್ಜೆಗಿರಿಯನ್ನು ಅದ್ದೂರಿಯಾಗಿ ನವೀಕರಿಸಲಾಗಿದೆ.ಬ್ರಹ್ಮಕಲಶೋತ್ಸವದಲ್ಲಿ ಸಂಭ್ರಮದಿಂದಲೇ ಪಾಲ್ಗೊಂಡಿದ್ದೇವು. ಆದ್ರೀಗ ಗೆಜ್ಜೆಗಿರಿ ಇದೀಗ ವಿವಾದ ಇದೀಗ ನ್ಯಾಯಾಲಯದ ಮೆಟ್ಟಿಲೇರಿರುವುದು ಅಪಾರ ನೋವು ತಂದಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ :

https://kannada.newsnext.live/gejjegiri-koti-chennayya-deyibaidithi-padumale-garodi/

ಗೆಜ್ಜೆಗಿರಿ ವಿವಾದಕ್ಕೆ ಸಂಬಂಧಿಸಿದಂತೆ ಜನವರಿ 13ರಂದು ಪ್ರಕರಣ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಯ ವಿಚಾರಣೆಯನ್ನು ಪುತ್ತೂರಿನ ಜೆಎಂಎಫ್ ಸಿ ನ್ಯಾಯಾಲ ಫೆಬ್ರವರಿ 12ಕ್ಕೆ ಮುಂದೂಡಿಕೆ ಮಾಡಿದೆ. ಒಟ್ಟಿನಲ್ಲಿ ಗೆಜ್ಜೆಗಿರಿ ವಿವಾದ ಪ್ರಕರಣ ಭಕ್ತರಿಗೆ ನೋವನ್ನುಂಟು ಮಾಡಿದ್ರೆ, ವಿವಾದ ಹೇಗೆ ಬಗೆ ಹರಿಯುತ್ತೆ ಅನ್ನೋ ಕೂತೂಹಲವೂ ಸೃಷ್ಟಿಯಾಗಿದೆ.

Comments are closed.