Leopard attack in uppunda: ಕರುವಿನ ಮೇಲೆ ಚಿರತೆ ದಾಳಿ: ಬಡಾಕೆರೆಯಲ್ಲಿ ಶುರುವಾಯ್ತು ಚಿರತೆ ಭೀತಿ

ಉಪ್ಪುಂದ: (Leopard attack in uppunda) ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿದ್ದ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದೆ. ಉಪ್ಪುಂದದಲ್ಲೂ ಇದೀಗ ಚಿರತೆ ಭೀತಿ ಎದುರಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವೊಂದನ್ನು ಚಿರತೆ ತಿಂದು ಹಾಕಿದ್ದು, ಗ್ರಾಮಸ್ಥರು ಚಿರತೆ ಸೆರೆಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಉಪ್ಪುಂದದ ಬಡಾಕೆರೆ ಗ್ರಾಮದ ಆಚಾರಬೆಟ್ಟು ಎಂಬಲ್ಲಿ ಜ. 11ರಂದು ರಾತ್ರಿ ಚಿರತೆ ರಸ್ತೆಯಲ್ಲಿ ಸಂಚಾರ (Leopard attack in uppunda) ನಡೆಸುತ್ತಿರುವುದನ್ನು ವಾಹನ ಸವಾರರು ಗಮನಿಸಿದ್ದು, ಅದರ ಚಲನವಲನಗಳನ್ನು ಸೆರೆಹಿಡಿದಿದ್ದಾರೆ. ಇನ್ನೂ ಗ್ರಾಮದಲ್ಲಿದ್ದ ಹಲವು ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಬುಧವಾರ ರಾತ್ರಿ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ತಿಂದು ಹಾಕಿದೆ.

ಕೆಲವು ದಿನಗಳಿಂದ ಆಚಾರಬೆಟ್ಟು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು, ನಿರಂತರವಾಗಿ ಬಡಾಕೆರೆ, ಆಚಾರಬೆಟ್ಟು ಭಾಗಗಳಲ್ಲಿ ಚಿರತೆ ನಿರ್ಭಯದಿಂದ ಸಂಚರಿಸುತ್ತಿದೆ. ಇದೀಗ ಈ ಗ್ರಾಮದ ಜನರಿಗೂ ಕೂಡ ಚಿರತೆಯ ಭೀತಿ ಎದುರಾಗಿದ್ದು, ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.

ಇನ್ನೂ ಬಡಾಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಗೊಳಿಯಂಗಡಿ ಅರಣ್ಯ ಪ್ರದೇಶದಿಂದ ಬಂದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಚಿರತೆ ಭೀತಿ ಉಂಟಾದ ಹಿನ್ನಲೆಯಲ್ಲಿ ಊರಿನ ಗ್ರಾಮಸ್ಥರು ಇದಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಅಗತ್ಯ ಕ್ರಮ ಕೈಗೊಂಡು ಗ್ರಾಮಸ್ಥರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ, ಚಿರತೆಯನ್ನು ಆದಷ್ಟು ಬೇಗನೇ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : Wikipedia QR Code: ಪ್ರವಾಸಿ ತಾಣಗಳ ಮಾಹಿತಿಗೆ ಇನ್ಮುಂದೆ ಕ್ಯೂ. ಆರ್.ಕೋಡ್‌: ಉಡುಪಿ ಡಿಸಿ ಕೂರ್ಮರಾವ್‌ ಎಂ

ಇದನ್ನೂ ಓದಿ : Muruga Mutt: ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನಿವೃತ್ತ IAS ಅಧಿಕಾರಿ ವಸ್ತ್ರದ್ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ

ಇದನ್ನೂ ಓದಿ : Mangaluru hindu worker death: ನೇತ್ರಾವತಿ ನದಿಯಲ್ಲಿ ಹಿಂದೂ ಕಾರ್ಯಕರ್ತನ ಶವ ಪತ್ತೆ: ಸಾವಿನ ಸುತ್ತ ಹಲವು ಶಂಕೆ

Leopard attack in uppunda: Leopard attack on calf: Leopard scare started in Badakere

Comments are closed.