Mangalore : ಭಾರೀ ಪ್ರಮಾಣ ಸ್ಫೋಟಕ ಪತ್ತೆ : ಆರೋಪಿ ಬಂಧನ

ಮಂಗಳೂರು : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ. ಮಂಗಳೂರು ನಗರದ ಬಂದರು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಡಿಪು ನಿವಾಸಿ ಆನಂದ ಕಟ್ಟಿ ಎಂಬವರೇ ಬಂದಿತ ಆರೋಪಿಯಾಗಿದ್ದಾರೆ. ಮಂಗಳೂರು ನಗರದ ಬಂದರು ಠಾಣಾ ವ್ಯಾಪ್ತಿಯ ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದಲ್ಲಿ ಅಕ್ರಮವಾಗಿ ಸುಮಾರು 1,725 ಕೆ.ಜಿ ಗೂ ಹೆಚ್ಚು ಸ್ಟೋಟಕ ಪತ್ತೆಯಾಗಿದೆ. ಸಲ್ಫರ್ ಪೌಡರ್ 400 ಕೆ.ಜಿ ಪೊಟ್ಯಾಸಿಯಮ್ ನೈಟ್ರೇಟ್ 350 ಕೆ.ಜಿ ಬೇರಿಯಂ ನೈಟ್ರೇಟ್ 50 ಕೆ.ಜಿ ಪೊಟ್ಯಾಸಿಯಮ್ ಕ್ಲೋರೈಟ್ 395 ಕೆ.ಜಿ, ಅಲ್ಯೂಮಿನಿಯಂ ಪೌಡರ್ 260 ಕೆ.ಜಿ ಚಾರ್ ಕೋಲ್ 240 ಕೆ.ಜಿ ಲೀಡ್ ಬಾಲ್ಸ್ 30 ಕೆ.ಜಿ ಯರ್ ಪಿಸ್ತೂಲ್ ಪೆಲೆಟ್ಸ್ ವಶಕ್ಕೆ ಪಡೆಯಲಾಗಿದೆ.

ಆರೋಪಿ ಆನಂದ ಗಟ್ಟಿ ಬಂದರು ಪ್ರದೇಶದಲ್ಲಿಯೇ ಗನ್‌ ಶಾಪ್‌ ಹೊಂದಿದ್ದು, ಸ್ಥಳೀಯ ಕಲ್ಲುಕ್ವಾರಿ ಹಾಗೂ ಬಾವಿ ತೋಡುವವರಿಗೆ ಈ ಸ್ಪೋಟಗಳನ್ನು ಪೂರೈಕೆ ಮಾಡುತ್ತಿದ್ದ ಅನ್ನೋದು ತನಿಖೆಯಿಂದ ಬಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಬಂದರು ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಜನವಸತಿ ಇರೋ ಪ್ರದೇಶದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಆನಂದ ಕಟ್ಟಿಗೆ ಸ್ಪೋಟಕಗಳು ಎಲ್ಲಿಂದ ಸರಬರಾಜು ಆಗುತ್ತಿದ್ದವು. ಈ ಪ್ರಕರಣದಲ್ಲಿ ಬೇರೆ ಯಾರಾದ್ರೂ ಭಾಗಿಯಾಗಿದ್ದಾರಾ ಅನ್ನೋ ಕುರಿತು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Murder : ಬಾವನ ಕೊಂದು ಠಾಣೆಗೆ ಕೈಗಳನ್ನು ತಂದ ಬಾಮೈದ

ಇದನ್ನೂ ಓದಿ : ಪಕ್ಕದ ಮನೆಯ ಮುಂದೆ ಮೂತ್ರ ಮಾಡಿದ ಮಗು : ಮಗುವಿನ ತಾಯಿಯನ್ನು ಚಾಕುವಿನಿಂದ ಕೊಂದ ಬಾಲಕ

ಇದನ್ನೂ ಓದಿ : ಮಾಡದ ತಪ್ಪಿಗೆ 3 ವರ್ಷ ಶಿಕ್ಷೆ : ಸೌದಿ ಜೈಲಿನಿಂದ ಬಿಡುಗಡೆ, ಆ.18 ಕ್ಕೆ ಹುಟ್ಟೂರಿಗೆ ಹರೀಶ್‌ ಬಂಗೇರ

Comments are closed.