KL Rahul : ಕನ್ನಡಿಗನ ಭರ್ಜರಿ ಕಂ ಬ್ಯಾಕ್‌ : ಪಂದ್ಯಶ್ರೇಷ್ಠ ಪ್ರಶಸ್ತಿ ಧಕ್ಕಿಸಿಕೊಂಡ ರಾಹುಲ್‌

ನವದೆಹಲಿ : ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಭಾರತ ಇದೀಗ ಎರಡನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಅದ್ರಲ್ಲೂ ಎರಡನೇ ಪಂದ್ಯದ ಗೆಲುವಿನ ರೂವಾರಿ ರಾಹುಲ್‌ಗೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಲಭಿಸಿದೆ.

ಕಳೆದ ಎರಡು ವರ್ಷಗಳಿಂದಲೂ ಟೆಸ್ಟ್‌ ಪಂದ್ಯಗಳಿಂದ ದೂರ ಉಳಿದಿದ್ದ ಕನ್ನಡಿಗ ಕೆ.ಎಲ್.ರಾಹುಲ್‌ ಆಯ್ಕೆಯ ಬಗ್ಗೆಯೂ ಸಾಕಷ್ಟು ಅಪಸ್ವರ ಕೇಳಿಬಂದಿತ್ತು. ಆದರೆ ಅದೃಷ್ಟ ಮಾತ್ರ ರಾಹುಲ್‌ ಕೈ ಬಿಡಲಿಲ್ಲ. ಕೊರೊನಾ ಕಾರಣದಿಂದಾಗಿ ಮೊದಲ ಟೆಸ್ಟ್‌ ಪಂದ್ಯಕ್ಕೆ ಅನಿವಾರ್ಯವಾಗಿ ಆಯ್ಕೆಯಾಗಿದ್ದ ರಾಹುಲ್‌ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಅರ್ಧ ಶತಕ ಬಾರಿಸಿದ್ದ ರಾಹುಲ್‌ ಎರಡನೇ ಪಂದ್ಯದಲ್ಲಿ ಲಾರ್ಡ್ಸ್‌ ಅಂಗಳದಲ್ಲಿ ಶತಕ ಬಾರಿಸೋ ಮೂಲಕ ದಿಗ್ಗಜ ಕ್ರಿಕೆಟಿಗರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದಲ್ಲಿ 250 ಎಸೆತಗಳನ್ನು ಎದುರಿಸಿದ್ದ ರಾಹುಲ್‌ 12 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 129ರನ್‌ ಗಳಿಸಿದ್ದರು. ಇದೇ ಕಾರಣದಿಂದಲೂ ಭಾರತ ಸಾಧಾರಣ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬಹುಬೇಗನೆ ಔಟ್‌ ಆಗಿದ್ರೂ ಕೂಡ ರಾಹುಲ್‌ಗೆ ಅರ್ಹವಾಗಿಯೇ ಪಂದ್ಯಶ್ರೇಷ್ಟ ಪ್ರಶಸ್ತಿ ದೊರಕಿದೆ.

ಇದುವರೆಗೆ 38 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೆ.ಎಲ್.ರಾಹುಲ್‌ 64 ಇನ್ನಿಂಗ್ಸ್‌ಗಳ ಮೂಲಕ 2250 ರನ್‌ ಗಳಿಸಿದ್ದಾರೆ. ಇದರಲ್ಲಿ 12 ಅರ್ಧ ಶತಕಹಾಗೂ 6 ಶತಕ ಬಾರಿಸಿದ್ದಾರೆ. ಇದುವರೆಗೆ ಇಂಗ್ಲೆಂಡ್‌ ವಿರುದ್ದ ಗಳಿಸಿದ್ದ 199 ರನ್‌ ರಾಹುಲ್‌ ವೃತ್ತಿ ಜೀವನದ ಅತ್ಯಧಿಕ ಸ್ಕೋರ್‌ ಆಗಿದೆ. ಇಂಗ್ಲೆಂಡ್‌ ಸರಣಿಗೆ ರಾಹುಲ್‌ ಆಯ್ಕೆಯಾಗುತ್ತಿದ್ದಂತೆಯೇ ಟೀಕೆಗಳ ಸುರಿಮಳೆಯನ್ನು ಗೈದಿದ್ದವರು ಇದೀಗ ರಾಹುಲ್‌ ಆಟವನ್ನು ಕೊಂಡಾಡುತ್ತಿದ್ದಾರೆ. ಉಳಿದ ಪಂದ್ಯಗಳಲ್ಲಿಯೂ ರಾಹುಲ್‌ ಭರ್ಜರಿ ಆಟವನ್ನು ಪ್ರದರ್ಶಿಸಲು ಅಂತಾ ಕನ್ನಡಿಗರು ಹಾರೈಸುತ್ತಿದ್ದಾರೆ.

ಇದನ್ನೂ ಓದಿ : IND vs ENG 2nd Test : ಇಂಗ್ಲೆಂಡ್‌ ವಿರುದ್ದ ರೋಚಕ ಗೆಲುವು ಪಡೆದ ಭಾರತ

ಇದನ್ನೂ ಓದಿ : Unmukt Chand Retires : 28 ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಉನ್ಮುಕ್ತ್‌ ಚಾಂದ್‌

Comments are closed.