Mangalore- Nipah virus : ಯುವಕನಲ್ಲಿ ಪತ್ತೆಯಾಯ್ತು ನಿಫಾ ವೈರಸ್‌ ಲಕ್ಷಣ ! ಬೆಂಗಳೂರಿಗೆ ಸ್ವ್ಯಾಬ್‌ ರವಾನೆ

ಮಂಗಳೂರು : ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಯುವಕನೋರ್ವನಿಗೆ ನಿಫಾ ವೈರಸ್‌ ಸೋಂಕಿನ ಲಕ್ಷಣ ಪತ್ತೆಯಾಗಿದೆ. ಹೀಗಾಗಿ ಯುವಕನ ಸ್ವ್ಯಾಬ್‌ನ್ನು ಬೆಂಗಳೂರಿಗೆ ರವಾನಿಸಲಾಗಿದ್ದು, ಕರಾವಳಿ ಭಾಗದಲ್ಲೀಗ ಆತಂಕ ಶುರುವಾಗಿದೆ.

ಗೋವಾದ ಲ್ಯಾಬ್‌ನಲ್ಲಿ ಮೈಕ್ರೋ ಬಯಲಾಜಿಸ್ಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ ಕಾರವಾರ ಮೂಲದ ಯುವಕನೋರ್ವನಿಗೆ ಜ್ವರ ಲಕ್ಷಣ ಕಂಡು ಬಂದಿತ್ತು. ಈತ ಪಾಸಿಟಿವ್ ಸ್ಯಾಂಪಲ್‌ಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದ. ಯುವಕನಿಗೆ ಜ್ವರ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯುವಕ ಕಾರವಾರದ ಆಸ್ಪತ್ರೆಗೆ ದಾಖಲಾಗಿದ್ದ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದ್ರೆ ಇದೀಗ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಯುವಕನಲ್ಲಿ ನಿಫಾ ವೈರಸ್‌ ಸೋಂಕಿನ ಲಕ್ಷಣ ಪತ್ತೆಯಾಗಿದೆ. ಯುವಕ ತನಗೆ ನಿಫಾ ಲಕ್ಷಣ ಇರುವ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದು, ನಿಫಾ ಟೆಸ್ಟ್‌ ಮಾಡಿಸುವಂತೆ ಮನವಿ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಇದೀಗ ಹಿನ್ನೆಲೆಯಲ್ಲಿ ಯುವಕನ ಸ್ಯಾಂಪಲ್‌ ಪಡೆದು ಬೆಂಗಳೂರಿಗೆ ರವಾನಿಸಲಾಗಿದೆ.

ಬೆಂಗಳೂರಿನಿಂದ ರಿಪೋರ್ಟ್‌ ಇನ್ನಷ್ಟೇ ಬರಬೇಕಾಗಿದೆ. ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲೀಗ ಯುವಕನನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಯುವಕನ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನೂ ಪಡೆಯಲಾಗುತ್ತಿದೆ. ಒಂದೊಮ್ಮೆ ನಿಫಾ ವೈರಸ್‌ ಪತ್ತೆಯಾದ್ರೆ ಸಂಪರ್ಕಿತರನ್ನೂ ಕೂಡ ತಪಾಸಣೆಗೆ ಒಳಪಡಿಸುವ ಸಾಧ್ಯತೆಯಿದೆ. ನೆರೆಯ ಕೇರಳದಲ್ಲಿ ನಿಫಾ ವೈರಸ್‌ ಹೆಚ್ಚುತ್ತಿದ್ದರೂ ಕೂಡ ಮಂಗಳೂರಲ್ಲಿ ಯಾವುದೇ ಪ್ರಕರಣ ಇದುವರೆಗೂ ದಾಖಲಾಗಿರಲಿಲ್ಲ.

ಯುವಕ ಲ್ಯಾಬ್‌ ಟೆಸ್ಟ್‌ ಹೊರತು ಪಡಿಸಿ ಹೆಚ್ಚು ಜನರ ಜೊತೆಗೆ ಸಂಪರ್ಕವನ್ನು ಹೊಂದಿಲ್ಲ. ಅದ್ರಲ್ಲೂ ಮಂಗಳೂರಿನಲ್ಲಿ ಯಾರೊಂದಿಗೂ ಸಂಪರ್ಕಕ್ಕೆ ಬಾರದ ಹಿನ್ನೆಲೆಯಲ್ಲಿ ಟೆನ್ಶನ್‌ ಕಡಿಮೆಯಾಗಿದೆ. ಇಂದು ಸಂಜೆ ಯುವಕನ ರಿಪೋರ್ಟ್‌ ಲಭ್ಯವಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಕೊರೊನಾ ವೈರಸ್‌ ಸೋಂಕಿನ ನಡುವಲ್ಲೇ ಕೇರಳದಲ್ಲಿ ನಿಫಾ ಭೀತಿ ಹೆಚ್ಚುತ್ತಿದೆ. ದಿನೇ ದಿನೇ ನಿಫಾ ವೈರಸ್‌ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಕೋವಿಡ್‌ ಸೋಂಕಿಗಿಂತಲೂ ಮಾರಕ ಎನ್ನಲಾಗುತ್ತಿರುವ ನಿಫಾ ಭೀತಿ ಇದೀಗ ಮಂಗಳೂರಲ್ಲಿಯೂ ಎದುರಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದ್ರೀಗ ಜಿಲ್ಲೆಯಲ್ಲಿ ನಿಫಾ ವೈರಸ್‌ ಲಕ್ಷಣ ಕಂಡು ಬಂದ ಬೆನ್ನಲ್ಲೇ ಜಿಲ್ಲಾಡಳಿತ ಅಲರ್ಟ್‌ ಆಗಿದೆ.

ಇದನ್ನೂ ಓದಿ : ಕೊರೊನಾದಿಂದ ಮೃತರಾದವರಿಗೆ ಸಿಗುತ್ತೆ ಮರಣ ಪ್ರಮಾಣ ಪತ್ರ ; ಕೇಂದ್ರದಿಂದ ಜಾರಿಯಾಯ್ತು ಹೊಸ ನಿಯಮ !

ಇದನ್ನೂ ಓದಿ : ನಿಫಾ ವೈರಸ್ ಅಟ್ಟಹಾಸ : ಅಕೋಬರ್ 31ರವರೆಗೆ ಸಭೆ-ಸಮಾರಂಭ ನಿರ್ಬಂಧ

( Nipah virus feature detected in young man admited Mangalore Wenlock Hospital, Swab remittance to Bangalore )

Comments are closed.