Mangalore Misfires : ಶೂಟೌಟ್‌ಗೆ ಮಗ ಸಾವು, ತಂದೆ ರಾಜೇಶ್‌ ಪ್ರಭು ಅರೆಸ್ಟ್‌

ಮಂಗಳೂರು : ವೇತನ ಕೇಳಲು ಬಂದಿದ್ದ ನೌಕರನ ಜಗಳದ ವೇಳೆಯಲ್ಲಿ ಆಕಸ್ಮಿಕವಾಗಿ ಗುಂಡು ಸಿಡಿದು ಮೆದುಳು ನಿಷ್ಕ್ರೀಯವಾಗಿದ್ದ ಸುಧೀಂದ್ರ ಪ್ರಭು ( 16 ವರ್ಷ) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನೊಂದೆಡೆ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಮಾರ್ಗನ್ಸ್‌ ಗೇಟ್‌ನಲ್ಲಿ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸಂಸ್ಥೆಯಲ್ಲಿ ಅಶ್ರಫ್, ಚಂದ್ರಹಾಸ ಎಂಬ ಇಬ್ಬರು ಕೆಲಸಕ್ಕೆ ಸೇರಿದ್ದರು. ಇಬ್ಬರೂ ಗೂಡ್ಸ್‌ ಕಂಟೈನರ್‌ ವಾಹನದಲ್ಲಿ ಮುಂಬೈಗೆ ತೆರಳಿ ಅ.3 ರಂದು ವಾಪಾಸಾಗಿದ್ದರು. 4,000 ರೂಪಾಯಿ ವೇತನ ನೀಡುವ ವಿಚಾರಕ್ಕೆ ಮಾಲಕ ರಾಜೇಶ್‌ ಪ್ರಭು ಸತಾಯಿಸಿದ್ದಾರೆ. ಚಾಲಕ ಹಾಗೂ ಕ್ಲೀನರ್‌ ಆಗಿದ್ದ ಅಶ್ರಫ್‌ ಹಾಗೂ ಚಂದ್ರಹಾಸ ರಾಜೇಶ ಪ್ರಭು ಪತ್ನಿ ಶಾಂತಲಾ ಪ್ರಭು ಅವರ ಬಳಿಯಲ್ಲಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.

ಹೀಗಾಗಿ ಶಾಂತಲಾ ಪ್ರಭು ಅವರು ಪತಿ ರಾಜೇಶ್‌ ಪ್ರಭು ಹಾಗೂ ಮಗ ಸುಧೀಂದ್ರನನ್ನು ಕಚೇರಿಗೆ ಕರೆಯಿಸಿಕೊಂಡಿದ್ದರು. ಈ ವೇಳೆಯಲ್ಲಿ ರಾಜೇಶ್‌ ಪ್ರಭು, ಸುಧೀಂದ್ರ ಪ್ರಭು ಹಾಗೂ ಚಂದ್ರಹಾಸ ಮತ್ತು ಆಶ್ರಫ್‌ ಜೊತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆಯಲ್ಲಿ ರಾಜೇಶ್‌ ಪ್ರಭು ತನ್ನ ಕೈಯಲ್ಲಿದ್ದ ಬಂದೂಕಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಈ ಗುಂಡು ಸುಧೀಂದ್ರ ಪ್ರಭುವಿನ ಕಣ್ಣಿನ ಬದಿಯಲ್ಲಿ ಹಾದು ಹೋಗಿತ್ತು. ಇದರಿಂದಾಗಿ ಸುಧೀಂದ್ರ ಪ್ರಭು ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಗುಂಡೇಟಿನಿಂದಾಗಿ ಮೆದುಳು ನಿಷ್ಕ್ರೀಯವಾಗಿತ್ತು. ಇದೀಗ ವೈದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಕುರಿತು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ. ಪ್ರಕರಣದಲ್ಲಿ ಉದ್ಯಮಿ, ತಂದೆ ರಾಜೇಶ್ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಅನಧಿಕೃತ ಮೂಕಾಂಬಿಕಾ ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯ ಇಲಾಖೆ

ಇದನ್ನೂ ಓದಿ : ಮಂಗಳೂರಲ್ಲಿ ಅಪ್ಪನಿಂದ ಮಗನ ಮೇಲೆ ಫೈರಿಂಗ್‌

( Mangalore Shootout son dies, father Rajesh Prabhu Arrest )

Comments are closed.