ಕುಲಪತಿ ಹುದ್ದೆಗೆ ಲಂಚ ಪ್ರಕರಣ : ಮಂಗಳೂರು ವಿವಿ ಪ್ರಾಧ್ಯಾಪಕ ಜೈಶಂಕರ್ ಸಸ್ಪೆಂಡ್

ಮಂಗಳೂರು : ಕುಲಪತಿ‌ ಹುದ್ದೆ ಪಡೆಯಲು ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರ್ ಗೆ 17.50 ಲಕ್ಷ ರೂಪಾಯಿ ಲಂಚ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರು ವಿವಿಯ ಪ್ರಾಧ್ಯಾಪಕ ಜೈಶಂಕರ್ ಎಂಬವರನ್ನು ಅಮಾನತ್ತು ಮಾಡಲಾಗಿದೆ.

ಮಂಗಳೂರು ವಿವಿಯಲ್ಲಿ ಸೂಕ್ಷ್ಮಾಣು ಜೀವ ವಿಜ್ಣಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಜೈಶಂಕರ್ ಅವರು ಕುಲಪತಿ ಹುದ್ದೆಗಾಗಿ ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರ್ ಗೆ ಲಂಚದ ರೂಪದಲ್ಲಿ ಬರೋಬ್ಬರಿ 17.50 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಆದರೆ ತದನಂತರದಲ್ಲಿ ಪ್ರಸಾದ್ ಅತ್ತಾವರ್ ತನ್ನಿಂದ ಹಣ ಪಡೆದು ವಂಚಿಸಿರುವ ಕುರಿತು ಠಾಣೆಗೆ ದೂರು ನೀಡಿದ್ದರು.

ದೂರಿ‌ನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಮಂಗಳೂರು ವಿವಿ ಕುಲಪತಿ ಡಾ.ಪಿ‌.ಎಸ್‌‌. ಯಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಸಿಂಡಿಕೇಟ್ ವಿಶೇಷ ಸಭೆಯು ನಡೆದಿದ್ದು, ಸಭೆಯಲ್ಲಿ ಪ್ರಾಧ್ಯಾಪಕ ಜೈಶಂಕರ್ ಅವರನ್ನು ಅಮಾನತ್ತುಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ತಬಿಖೆಯನ್ನು ನಡೆಸುವ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Comments are closed.