ಕತ್ತಲ ರಾತ್ರಿಯಲ್ಲಿ ನಡೆಯುತ್ತೆ ದರೋಡೆ : ಬೆಣ್ಣೆಕುದ್ರು- ಸಾಸ್ತಾನ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ..ಎಚ್ಚರ..!!!

ಬ್ರಹ್ಮಾವರ : ಜನರ ಅನುಕೂಲಕ್ಕಾಗಿ ಸಾಸ್ತಾನ – ಬಾರಕೂರು ಸಂಪರ್ಕ ರಸ್ತೆ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿದೆ. ಆದರೆ ಈ ರಸ್ತೆಯಲ್ಲಿ ಕತ್ತಲಾದ್ರೆ ಸಾಕು ದರೋಡೆ ನಡೆಯುತ್ತೆ ಅನ್ನೋ ಭಯ ಜನರನ್ನು ಕಾಡುತ್ತಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಪಾಂಡೇಶ್ಚರ, ಬೆಣ್ಣೆಕುದ್ರು, ಸಾಸ್ತಾನ, ಐರೋಡಿ, ಹಂಗಾರಕಟ್ಟೆ, ಬಾರಕೂರು, ಹೇರಾಡಿ, ಗುಂಡ್ಮಿ ಭಾಗದ ಜನರು ಸಾಸ್ತಾನ ಹಾಗೂ ಬಾರಕೂರು ಮುಂತಾದ ಸ್ಥಳಗಳಿಗೆ ತೆರಳುವವರಿ ಬಣ್ಣೆಕುದ್ರು ಮಾರ್ಗವಾಗಿ  ಸಂಚರಿಸುತ್ತಿದ್ದಾರೆ. ಆದರೆ ಕಳೆದೊಂದು ತಿಂಗಳ ಅವಧಿಯಲ್ಲಿ ದರೋಡೆ ಯತ್ನ ಪ್ರಕರಣ‌ ದಾಖಲಾಗಿದೆ. ಹೀಗಾಗಿ ಕತ್ತಲಾದ್ರೆ ಸಾಕು ಈ ಭಾಗದ ಜನರಿಗೆ ಭಯ ಕಾಡುತ್ತಿದ್ದು, ದ್ವಿಚಕ್ರ ವಾಹನ ಹಿಡಿದು ರಸ್ತೆಗೆ ಬರಲು ಹಿಂದೇಟು ಹಾಕುತ್ತಿದಾರೆ.

ಸಾಸ್ತಾನ- ಬೆಣ್ಣೆಕುದ್ರು ಮಾರ್ಗವಾಗಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತಿವೆ. ದರೋಡೆ ಕೋರರು ಹೆಚ್ಚಾಗಿ ದ್ವಿಚಕ್ರವಾಹನಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಮಾರ್ಚ್ 27 ರಂದು ರಾತ್ರಿ ನಾಲ್ಕು ಮಂದಿ ದರೋಡೆಕೋರರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದರು. ಆದರೆ ಹಿಂದಿನಿಂದ ಇನ್ನೊಂದು ವಾಹನ ಬರುತ್ತಿದ್ದಂತೆಯೇ ದರೋಡೆಕೋರ ರು ಸ್ಥಳದಿಂದ ಪರಾರಿಯಾಗಿದ್ದರು.

ಈ ರಸ್ತೆಯಲ್ಲಿ ಬೀದಿ ದೀಪದ ಸಮಸ್ಯೆ ಇರುವುದು ದರೋಡೆಕೋರ ರಿಗೆ ವರದಾನವಾಗಿ ಪರಿಣಮಿಸು ತ್ತಿದೆ. ಒಂದೊಮ್ಮೆ ಬೀದಿ ದೀಪ ಅಳವಡಿಕೆಯಾದ್ರೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ‌. ಹೀಗಾಗಿ ಬೆಣ್ಣೆಕುದ್ರು ಸೇತುವೆ ಹಾಗೂ ರಸ್ತೆಯುದ್ದಕ್ಕೂ ಬೀದಿ ದೀಪ ಅಳವಡಿಸುವಂತೆ ಸಾರ್ವಜನಿಕರು ಈಗಾಗಲೇ ಹಂದಾಡಿ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಜನರು ಮಾತ್ರ ಕತ್ತಲಾದ ಮೇಲೆ ರಸ್ತೆಯಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯಾಡಳಿತಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಮೂಲಕ ಜನರ ಭಯ ನಿವಾರಣೆ ಮಾಡುವ ಮೂಲಕ ಭಯ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಜನರು ಮನವಿ ಮಾಡಿದ್ದಾರೆ.

Comments are closed.