Nutana Nettaru demands : ನನ್ನ ಪತಿ ಕೊಲೆ ಪ್ರಕರಣ ಎನ್​ಐಎಗೆ ವಹಿಸಿ : ರಾಜ್ಯ ಸರ್ಕಾರಕ್ಕೆ ಪ್ರವೀಣ್​ ನೆಟ್ಟಾರು ಪತ್ನಿ ಆಗ್ರಹ

ದಕ್ಷಿಣ ಕನ್ನಡ : Nutana Nettaru demands :ಕರಾವಳಿ ಯುವಕ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಹಿಂದೂ ಕಾರ್ಯಕರ್ತ ರೋಷದ ಅಗ್ನಿಗೆ ಬಿಜೆಪಿ ಸರ್ಕಾರವೇ ನಲುಗಿ ಹೋಗಿದೆ. ಕೇಸರಿ ಕಾರ್ಯಕರ್ತರ ಘರ್ಜನೆ ಸಂಪೂರ್ಣ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವೀಣ್​ ನೆಟ್ಟಾರು ಹತ್ಯೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಪ್ರವೀಣ್​ ಪತ್ನಿ ನೂತನಾ ತಮ್ಮ ಪತಿಯ ಸಾವಿನ ವಿಚಾರವಾಗಿ ಮಾತನಾಡಿದ್ದು ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ನನ್ನ ಪತಿ ಯಾರಿಗೂ ಅನ್ಯಾಯ ಮಾಡಿದ ವ್ಯಕ್ತಿಯಲ್ಲ. ಯಾರಿಗೇ ಕಷ್ಟ ಎಂದರೂ ಮೊದಲು ಧಾವಿಸುತ್ತಿದ್ದ ವ್ಯಕ್ತಿತ್ವ ಅವರದ್ದು. ಅನಾಥ ನಾಯಿಗಳಿಗೂ ಅವರ ಮನ ಮಿಡಿಯುತ್ತಿತ್ತು. ನಿನ್ನೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಶ್ವಾನಗಳು ಕೂಡ ಪ್ರವೀಣ್​ಗಾಗಿ ಕಂಬನಿ ಮಿಡಿದಿದ್ದನ್ನು ನಾವೆಲ್ಲ ಕಂಡಿದ್ದೇವೆ. ಅಂತಹ ವ್ಯಕ್ತಿತ್ವ ಅವರದ್ದು ಎಂದು ಹೇಳಿದ್ದಾರೆ.


ನನ್ನ ಪತಿ ಈ ಸಮಾಜಕ್ಕಾಗಿ, ಹಿಂದೂ ಧರ್ಮಕ್ಕಾಗಿ ಬದುಕಿದ್ದಾರೆ. ಸಾಕಷ್ಟು ಬಿಜೆಪಿ ಕಾರ್ಯಕರ್ತರು ನನ್ನ ಪತಿಯ ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ಹೋರಾಟಕ್ಕೆ ಇಳಿದಿದ್ದಾರೆ. ಇವರೆಲ್ಲರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಪತಿಗೆ ಆದ ಗತಿ ಈ ನಾಡಿನಲ್ಲಿ ಇನ್ಯಾರಿಗೂ ಆಗಬಾರದು. ರಾಜ್ಯ ಸರ್ಕಾರ ಈ ಕೂಡಲೇ ನನ್ನ ಪತಿಯ ಸಾವಿನ ತನಿಖೆಯನ್ನು ಎನ್​ಐಎಗೆ ವಹಿಸಬೇಕು. ಆದಷ್ಟು ಬೇಗ ನನ್ನ ಪತಿಯ ಹಂತಕರು ಗಲ್ಲಿಗೇರುವುದನ್ನು ನಾನು ನೋಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಈಗಾಗಲೇ ಕೇರಳಕ್ಕೂ ರಾಜ್ಯ ಪೊಲೀಸರು ಎಂಟ್ರಿ ನೀಡಿದ್ದಾರೆ. ಪ್ರಕರಣದ ತನಿಖೆಗೆ ಐದು ಪೊಲೀಸ್​ ತಂಡಗಳನ್ನು ರಚಿಸಲಾಗಿದೆ.15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತಡರಾತ್ರಿ ಎಸ್​ಡಿಪಿಐ ಕಾರ್ಯಕರ್ತರ ಮನೆಗೆ ನುಗ್ಗಿದ ಪೊಲೀಸರು ಏಳು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇದನ್ನು ಓದಿ : praveen nettaru murder :ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ : 7 ಮಂದಿ ಎಸ್​ಡಿಪಿಐ ಕಾರ್ಯಕರ್ತರು ವಶಕ್ಕೆ

ಇದನ್ನೂ ಓದಿ : Praveen Nettaru murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ 15ಕ್ಕೂ ಹೆಚ್ಚು ಮಂದಿ ವಶಕ್ಕೆ : ಆರಗ ಜ್ಞಾನೇಂದ್ರ ಮಾಹಿತಿ

Nutana Nettaru demands that the case of Praveen Nettaru’s death be handed over to NIA

Comments are closed.