Praveen Nettaru murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ 15ಕ್ಕೂ ಹೆಚ್ಚು ಮಂದಿ ವಶಕ್ಕೆ : ಆರಗ ಜ್ಞಾನೇಂದ್ರ ಮಾಹಿತಿ

ಬೆಂಗಳೂರು : Praveen Nettaru murder case : ಹಿಂದೂ ಕಾರ್ಯಕರ್ತ, ಬಿಜೆಪಿ ಜಿಲ್ಲಾ ಯುವ ಮೋರ್ಛಾ ಸದಸ್ಯ ಪ್ರವೀಣ್​ ನೆಟ್ಟಾರು ಸಾವು ಪ್ರಕರಣ ಹಿಂದೂ ಕಾರ್ಯಕರ್ತರ ಆಕ್ರೋಶವನ್ನು ಹೆಚ್ಚಿಸಿದೆ. ಬಿಜೆಪಿ ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ. ನಮ್ಮದೇ ನಾಡಿನಲ್ಲಿ ನಮಗೇ ರಕ್ಷಣೆ ಇಲ್ಲ ಎಂದಮೇಲೆ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಏನು ಪ್ರಯೋಜನ ಎಂಬುದು ಹಿಂದೂ ಕಾರ್ಯಕರ್ತರ ಪ್ರಶ್ನೆಯಾಗಿದೆ. ಯಾವ ಪ್ರಶ್ನೆಗೂ ಉತ್ತರ ನೀಡಲಾಗದೇ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ .

ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯನ್ನು ನನಗೆ 24 ಗಂಟೆಗಳ ಒಳಗಾಗಿ ಹುಡುಕಿಕೊಡಿ ಎಂದು ಪತ್ನಿ ನೂತನಾ ನೆಟ್ಟಾರು ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇಂದು ಜನೋತ್ಸವವನ್ನು ಆಚರಿಸಬೇಕಿದ್ದ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ತನಿಖೆಯತ್ತ ಗಮನ ನೆಟ್ಟಿದೆ. ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ನಡೆಯುತ್ತಿರುವ ತನಿಖೆ ವಿಚಾರವಾಗಿ ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ 15ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಪ್ರವೀಣ್​ ನೆಟ್ಟಾರು ನಿವಾಸ ಕೇರಳದ ಗಡಿ ಭಾಗದಲ್ಲಿ ಬರುತ್ತದೆ. ಹೀಗಾಗಿ ಕೇರಳದ ಯಾವುದೋ ಆರೋಪಿಗಳು ಈ ಕೃತ್ಯವನ್ನು ಎಸಗಿ ಪುನಃ ಕೇರಳಕ್ಕೆ ಮರಳಿ ತಲೆ ಮರೆಸಿಕೊಂಡಿರುವ ಶಂಕೆ ಇದೆ. ಆದ್ದರಿಂದ ನಮಗೆ ಈ ಪ್ರಕರಣವನ್ನು ಭೇದಿಸಲು ಕೇರಳ ಪೊಲೀಸರ ಸಹಕಾರ ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಪೊಲೀಸ್​ ಇಲಾಖೆ ಸಕ್ಷಮದಿಂದ ಕೆಲಸ ಮಾಡುತ್ತಿದ್ದು ಈಗಾಗಲೇ 15ಕ್ಕೂ ಅಧಿಕ ಮಂದಿ ಶಂಕಿತರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಆಕ್ರೋಶ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಹಿಂದೂ ಸಂಘಟನೆಗಳ ಪಾಲಿಗೆ ಪ್ರವೀಣ್​ ಅಮೂಲ್ಯ ಆಸ್ತಿಯಾಗಿದ್ದರು. ಹೀಗಾಗಿ ಕಾರ್ಯಕರ್ತರಿಗೆ ಕೋಪ ಬಂದಿರುವುದು ಸಹಜವಾಗಿದೆ. ಮಂಗಳೂರಿನ ಜನರು ಶಾಂತಿ ಪ್ರಿಯರು .ಜೊತೆಗೆ ಬುದ್ಧಿವಂತರೂ ಕೂಡ. ಆದರೆ ನಮ್ಮವರಲ್ಲೇ ಒಬ್ಬನನ್ನು ಕಳೆದುಕೊಂಡಾಗ ಎಂತವರಿಗೂ ದುಃಖ ಆಕ್ರೋಶವಾಗಿ ಬದಲಾಗುವುದು ಸಹಜ ಎಂದು ಹೇಳಿದರು.

ಇದನ್ನು ಓದಿ : Praveen Nettaru murder : ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 10 ಮಂದಿ ಶಂಕಿತರು ವಶಕ್ಕೆ

ಇದನ್ನೂ ಓದಿ : praveen nettaru murder :ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ : 7 ಮಂದಿ ಎಸ್​ಡಿಪಿಐ ಕಾರ್ಯಕರ್ತರು ವಶಕ್ಕೆ

Praveen Nettaru murder case: More than 15 people arrested

Comments are closed.