Asia Cup 2022 India : ಏಷ್ಯಾ ಕಪ್‌ನಲ್ಲಿ ಭಾರತದ ಹಣೆಬರಹ ಇವತ್ತೇ ಡಿಸೈಡ್, ಪಾಕಿಸ್ತಾನದ ಕೈಯಲ್ಲಿದೆ ಟೀಮ್ ಇಂಡಿಯಾ ಭವಿಷ್ಯ

ದುಬೈ: (Asia Cup 2022 India) ಏಷ್ಯಾ ಕಪ್ ಟೂರ್ನಿಯ ಲೀಗ್ ಹಂತದಲ್ಲಿ ಸತತ ಎರಡು ಗೆಲುವುಗಳೊಂದಿಗೆ ಅಬ್ಬರಿಸಿದ್ದ ಟೀಮ್ ಇಂಡಿಯಾ, ಸೂಪರ್-4 ಹಂತದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಮೊದಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತಿದ್ದ ರೋಹಿತ್ ಶರ್ಮಾ ಬಳಗ, ಮಂಗಳವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧವೂ 6 ವಿಕೆಟ್’ಗಳಿಂದ ಸೋಲು ಕಂಡಿದೆ. ಟಾಸ್ಈ ಎರಡು ಸತತ ಸೋಲುಗಳು ಭಾರತದ ಫೈನಲ್ (Asia Cup 2022 final) ಕನಸನ್ನು ಬಹುತೇಕ ನುಚ್ಚುನೂರು ಮಾಡಿವೆ. ಹಾಗಂತ ಭಾರತಕ್ಕೆ ಫೈನಲ್ ತಲುಪುವ ಅವಕಾಶವೇ ಇಲ್ಲ ಎಂದಲ್ಲ. ಭಾರತಕ್ಕೆ ಈಗಲೂ ಫೈನಲ್ ತಲುಪುವ ಅವಕಾಶವಿದೆ.

ಏಷ್ಯಾ ಕಪ್ 2022: (Asia Cup 2022 India) ಮುಂದಿನ ಪಂದ್ಯಗಳು

ಪಾಕಿಸ್ತಾನ Vs ಅಫ್ಘಾನಿಸ್ತಾನ (ದುಬೈ), ಸೆಪ್ಟೆಂಬರ್ 7, ಬುಧವಾರ
ಭಾರತ Vs ಅಫ್ಘಾನಿಸ್ತಾನ (ದುಬೈ), ಸೆಪ್ಟೆಂಬರ್ 8, ಗುರುವಾರ
ಶ್ರೀಲಂಕಾ Vs ಪಾಕಿಸ್ತಾನ (ದುಬೈ), ಸೆಪ್ಟೆಂಬರ್ 9, ಶುಕ್ರವಾರ

ಶ್ರೀಲಂಕಾ ವಿರುದ್ಧದ ಸೋಲಿನ ಬಳಿಕ ಭಾರತದ ಫೈನಲ್ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದ್ದು, ಭಾರತ ಫೈನಲ್ ಕನಸನ್ನು ಉಳಿದ ಪಂದ್ಯಗಳ ಫಲಿತಾಂಶ ನಿರ್ಧರಿಸಲಿದೆ.

ಭಾರತ ಫೈನಲ್ ತಲುಪುವಸಾಧ್ಯತೆ ಹೇಗೆ

  • ಬುಧವಾರ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ಗೆಲ್ಲಬೇಕು.
  • ಗುರುವಾರ ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ದೊಡ್ಡ ಅಂತರದಲ್ಲಿ ಗೆಲ್ಲೇಬೇಕು.
  • ಶುಕ್ರವಾರ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಗೆಲ್ಲಬೇಕು.
  • ಆಗ ಸೂಪರ್-4 ಹಂತದಲ್ಲಿ ಶ್ರೀಲಂಕಾ ಮೂರೂ ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ ಫೈನಲ್ ತಲುಪಲಿದೆ.
  • ಭಾರತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಲಾ ಒಂದು ಪಂದ್ಯವನ್ನು ಗೆದ್ದಂತಾಗುತ್ತದೆ.
  • ಭಾರತದ ನೆಟ್ ರನ್ ರೇಟ್ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಹೆಚ್ಚಿದ್ದರೆ ಭಾರತ ಫೈನಲ್ ತಲುಪಲಿದೆ.

ಏಷ್ಯಾ ಕಪ್: ಸೂಪರ್-4 ಅಂಕಪಟ್ಟಿ
ತಂಡ ಪಂದ್ಯ ಗೆಲುವು ಸೋಲು ಅಂಕ ರನ್ ರೇಟ್
ಶ್ರೀಲಂಕಾ 02 02 00 04 .351
ಪಾಕಿಸ್ತಾನ 01 01 00 02 0.126
ಭಾರತ 02 00 02 00 -0.125
ಅಫ್ಘಾನಿಸ್ತಾನ 01 00 01 00 -0.589

ಒಂದು ವೇಳೆ ಬುಧವಾರ ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಗೆದ್ದರೆ ಭಾರತ ಇಂದೇ ಏಷ್ಯಾ ಕಪ್’ನಿಂದ ಹೊರ ಬೀಳಲಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ ತಲುಪಲಿವೆ.

ಇದನ್ನೂ ಓದಿ : Ravindra Jadeja Surgery Success : ರವೀಂದ್ರ ಜಡೇಜ ಆಪರೇಷನ್ ಸಕ್ಸಸ್, ಟಿ20 ವಿಶ್ವಕಪ್ ಆಡುವುದು ಡೌಟ್

ಇದನ್ನೂ ಓದಿ : Rohit Sharma: ಯುವ ಆಟಗಾರರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರಾ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ?

Explained: India fate in the Asia Cup 2022 final will be decided today, Team India’s future is in the hands of Pakistan

Comments are closed.