village gets electricity : 75 ವರ್ಷಗಳ ಬಳಿಕ ವಿದ್ಯುತ್​ ಸಂಪರ್ಕ ಕಂಡಿದೆ ಈ ಗ್ರಾಮ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಷ್ಟೋ ವರ್ಷಗಳು ಕಳೆದರೂ ಸಹ ಇನ್ನೂ ಕರೆಂಟ್​ ಭಾಗ್ಯವನ್ನು ಕಂಡಿಲ್ಲ. ಇಂತಹದ್ದೇ ಒಂದು ಗ್ರಾಮವಾದ ಜಮ್ಮು – ಕಾಶ್ಮೀರದ ಉಧಮ್​ಪುರದ ಸದ್ದಲ್​​​ಗೆ ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ವಿದ್ಯುತ್​ ಸಂಪರ್ಕವನ್ನು (village gets electricity) ನೀಡಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಈ ಗ್ರಾಮವು ಬೆಳಕನ್ನು ಕಂಡಂತಾಗಿದೆ. ಕೇಂದ್ರ ಸರ್ಕಾರದ ಅನ್ವೈಡ್​ ಗ್ರ್ಯಾಂಟ್ಸ್​ ಯೋಜನೆಯ ಅಡಿಯಲ್ಲಿ ಈ ಗ್ರಾಮದ ನಿವಾಸಿಗಳು ಕತ್ತಲೆಯಿಂದ ಮುಕ್ತಿಯನ್ನು ಪಡೆದಿದ್ದಾರೆ. ವಿದ್ಯುತ್​ ಸಂಪರ್ಕವೇ ಇಲ್ಲದ ಹಿನ್ನೆಲೆಯಲ್ಲಿ ಮೇಣದ ಬತ್ತಿ ಹಾಗೂ ದೀಪಗಳನ್ನೇ ಇಲ್ಲಿಯ ಜನ ನಂಬಿಕೊಂಡಿದ್ದರು. ತಮ್ಮ ಗ್ರಾಮ ಕ್ಕೊಂದು ವಿದ್ಯುತ್​ ಸಂಪರ್ಕವನ್ನು ನೀಡಿ ಎಂದು ಇಲ್ಲಿನ ಜನರು ಅನೇಕ ಸಮಯಗಳಿಂದ ವಿದ್ಯುತ್​ಗಾಗಿ ಮೇಲಾಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಗ್ರಾಮದ ದಶಕಗಳ ಬೆಳಕಿನ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಈ ವಿಚಾರವಾಗಿ ಸಂತಸ ವ್ಯಕ್ತಪಡಿಸಿದ 72 ವರ್ಷದ ಬದರಿನಾಥ್​ ಎಂಬವರು, ನಮ್ಮ ಗ್ರಾಮದಲ್ಲಿ ಹಿಂದಿನ ಪೀಳಿಗೆಯವರು ಕರೆಂಟ್​ ಎಂದರೆ ಏನು ಎಂಬುವುದನ್ನೇ ನೋಡಿರಲಿಲ್ಲ. ದಶಕಗಳ ಕಾಯುವಿಕೆಯ ಬಳಿಕ ನಾವು ವಿದ್ಯುತ್​ ಕಂಡಿದ್ದೇವೆ. ನಮ್ಮ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ ನೀಡಿದ ಕೇಂದ್ರ ಸರ್ಕಾರಕ್ಕೆ ನಾವು ಋಣಿಯಾಗಿದ್ದೇವೆ ಎಂದು ಹೇಳಿದರು.

ಇದನ್ನು ಓದಿ : Photoshoot Dead : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

ಇದನ್ನೂ ಓದಿ : Minor Daughter Rape Case : ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ

75 years after Independence, this Jammu & Kashmir village gets electricity

Comments are closed.