ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಹತ್ಯೆಗೆ ಭೂಗತ ಲೋಕದ ನಂಟು ?

ಬಂಟ್ವಾಳ : ತುಳು ಚಿತ್ರನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ನನ್ನ ಆತನ ಪ್ಲ್ಯಾಟ್ ನಲ್ಲಿಯೇ ಹತ್ಯೆ ಮಾಡಲಾಗಿತ್ತು. ಹತ್ಯೆ ಪ್ರಕರಣಕ್ಕೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಭೂಗತ ಲೋಕದ ನಂಟಿ ಹೆಸರು ಕೇಳಿಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ತನ್ನದೇ ಪ್ಲ್ಯಾಟ್ ನಲ್ಲಿ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಶವ ಪತ್ತೆಯಾಗಿತ್ತು. ಪ್ಲ್ಯಾಟ್ ನಲ್ಲಿರುವ ಸೋಫಾ ಮೇಲೆ ಭೀಕರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಕೊಲೆ ಪ್ರಕರಣ ಬೆನ್ನು ಬಿದ್ದ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ.

ಮಂಗಳವಾರ ಸಂಜೆ ಪ್ಲ್ಯಾಟ್ ಗೆ ಇಬ್ಬರು ಹೆಲ್ಮೆಟ್ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನೊಂದೆಡೆ ಸುರೇಂದ್ರ ಬಂಟ್ವಾಳ್ ಪರಮಾಪ್ತನಾಗಿದ್ದ ಸತೀಶ್ ಕುಲಾಲ್ ಕೂಡ ನಾಪತ್ತೆಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಹೀಗಾಗಿ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿಂದೆ ಸುರೇಂದ್ರ ಬಂಟ್ವಾಳ್ ಬಿಜೆಪಿ ಕಾರ್ಯರ್ತರ ಮೇಲೆಯೂ ಲಾಂಗು ಜಳಪಿಸಿ ಜೈಲು ಸೇರಿದ್ದ. ಅಲ್ಲದೇ ಹಣಕಾಸಿನ ವ್ಯವಹಾರವನ್ನೂ ಈತ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಯುತ್ತಿದೆ.

ಸುರೇಂದ್ರ ಬಂಟ್ವಾಳ್ ಹತ್ಯೆಯ ಬೆನ್ನಲ್ಲೇ ಇದೊಂದು ಹಣಕಾಸಿನ ವಿಚಾರಕ್ಕೆ ನಡೆದಿರುವ ಕೊಲೆ ಎಂಬ ಮಾತುಗಳು ಕೇಳಿಬಂದಿತ್ತು. ಆದ್ರೀಗ ಸುರೇಂದ್ರ ಬಂಟ್ವಾಳ್ ಹತ್ಯೆಗೂ ಮನೀಶ್ ಶೆಟ್ಟಿ ಹಾಗೂ ಕಿಶನ್ ಹೆಗ್ಡೆ ಹತ್ಯೆಗೂ ಲಿಂಕ್ ಆಗುತ್ತಿದೆ. ಭೂತಕ ಪಾತಕಿ ವಿಕ್ಕಿ ಶೆಟ್ಟಿ ಈ ಹತ್ಯೆ ಮಾಡಿಸಿದ್ದಾನೆನ್ನಲಾಗುತ್ತಿದೆ.

ಉಡುಪಿಯ ಹಿರಿಯಡ್ಕದಲ್ಲಿ ನಡೆದಿದ್ದ ಕಿಶನ್ ಹೆಗ್ಡೆ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮನೋಜ್ ಕೋಡಿಕೆರೆ ವಿರುದ್ದ ವಿಕ್ಕಿ ಶೆಟ್ಟಿ ಸಿಡಿಮಿಡಿಗೊಂಡಿದ್ದಾನೆ. ಮನೋಜ್ ಕೋಡಿಕೆರೆಗೆ ಸಹಕಾರ ನೀಡುತ್ತಿದ್ದ ಮನೀಶ್ ಶೆಟ್ಟಿಯನ್ನು ಬೆಂಗಳೂರಲ್ಲಿ ಭೀಕರವಾಗಿ ರಸ್ತೆಯಲ್ಲಿಯೇ ಹತ್ಯೆ ಮಾಡಲಾಗಿತ್ತು. ಹತ್ಯೆಯ ಬೆನ್ನಲ್ಲೇ ಪಾತಕಿ ವಿಕ್ಕಿ ಶೆಟ್ಟಿ ತಾನೇ ಹತ್ಯೆ ಮಾಡಿರುವುದಾಗಿ ಹೇಳಿಕೆಯನ್ನು ನೀಡಿದ್ದ.

ಇದೀಗ ಸುರೇಂದ್ರ ಬಂಟ್ವಾಳ್ ಹತ್ಯೆಯಲ್ಲಿಯೂ ವಿಕ್ಕಿ ಶೆಟ್ಟಿಯ ಹೆಸರು ಕೇಳಿಬರುತ್ತಿದೆ. ಕಿಶನ್ ಹೆಗ್ಡೆ ಹತ್ಯೆ ಆರೋಪಿಗಳಿಗೆ ಸುರೇಂದ್ರ ಬಂಟ್ವಾಳ್ ಒಂದೂವರೆ ಲಕ್ಷ ರೂಪಾಯಿ ಹಣ, ಬಟ್ಟೆಯನ್ನು ನೀಡಿ ಸಹಕಾರ ಮಾಡಿದ್ದ. ಮಾತ್ರವಲ್ಲ ಕಿಶನ್ ಹೆಗ್ಡೆ ಹತ್ಯೆಗೂ ಫೈನಾನ್ಸ್ ಮಾಡಿದ್ದ ಎನ್ನಲಾಗುತ್ತಿದೆ.

ಸುರೇಂದ್ರ ಬಂಟ್ವಾಳ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments are closed.