Bipin Rawat CDS ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಿವಕೃಪಾ ಫ್ರೆಂಡ್ಸ್‌

ಸಾಸ್ತಾನ : ತಮಿಳುನಾಡಿನ ಕೂನೂರು ಬಳಿಯಲ್ಲಿ ಸೇನಾ ಹೆಲಿಕಾಫ್ಟರ್‌ ದುರಂತದಲ್ಲಿ ವಿಧಿವಶರಾದ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್‌ ( Bipin Rawat CDS ) ಸೇರಿದಂತೆ ಎಲ್ಲಾ ಯೋಧರಿಗೆ ಉಡುಪಿ ಜಿಲ್ಲೆಯ ಸಾಸ್ತಾನದ ಶಿವಕೃಪಾ ಫ್ರೆಂಡ್ಸ್‌ ವತಿಯಿಂದ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮ ನಡೆಯಿತು.

ಸಾಸ್ತಾನದ ಈಶ್ವರ ಮಠದ ಮುಂಭಾಗದಲ್ಲಿ ಶಿವಕೃಪಾ ಫ್ರೆಂಡ್ಸ್‌ ವತಿಯಿಂದ ಬಿಪಿನ್ ರಾವತ್, ಸಿಡಿಎಸ್, ಪತ್ನಿ ಮಧುಲಿಕಾ ರಾವತ್‌, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪಾರ್ಚನೆಯ ಮೂಲಕ ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ವಿಠಲ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಜಾಗೃತಿಯ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ ನಾಯರಿ, ಉದ್ಯಮಿ ಅಚ್ಚುತ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಕಾರ್ಯದರ್ಶಿ ಅಲ್ವಿನ್‌ ಅಂದ್ರಾದೆ, ಪಾಂಡೇಶ್ವರ ಗ್ರಾಮ ಪಂಚಾಯತ್‌ ಸದಸ್ಯರು ಹಾಗೂ ಉದ್ಯಮಿ ಪ್ರತಾಪ್‌ ಶೆಟ್ಟಿ, ಸಾಸ್ತಾನ ಈಶ್ವರ ಮಠದ ಧರ್ಮದರ್ಶಿ ಅನಂತಯ್ಯ ತುಂಗ, ಸಾಸ್ತಾನದ ಶಬರಿ ಕನ್‌ಸ್ಟ್ರಕ್ಷನ್‌ನ ಮಾಲೀಕ ರಾಜೇಶ್‌ ಕೆ.ವಿ., ಸಾಮಾಜಿಕ ಹೋರಾಟಗಾರರಾದ ಸಹದೇವ ಪೂಜಾರಿ ಸಾಸ್ತಾನ ಹಾಗೂ ಶಿವಕೃಪಾ ಫ್ರೆಂಡ್ಸ್‌ನ ಸದಸ್ಯರ ಉಪಸ್ಥಿತರಿದ್ದರು. ರಾಜೇಶ್‌ ಕೆ.ವಿ. ಹಾಗೂ ಸಹದೇವ ಪೂಜಾರಿ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

Shivakrupa Friends paid tribute to Bipin Rawat in Sasthan 03

ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿರುವ ಸಿಡಿಎಸ್‌ ಬಿಪಿನ್‌ ರಾವತ್‌ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 14 ಮಂದಿ ಸೇನಾ ಹೆಲಿಕಾಫ್ಟರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಸಿಡಿಎಸ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌, ಬ್ರಿಗೇಡಿಯರ್‌ ಎಲ್.ಎಸ್.ಲಿಡ್ಡರ್‌, ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌, ನಾಯಕ್‌ ಗುರು ಸೇವಕ್‌ ಸಿಂಗ್‌, ನಾಯಕ್‌ ಜಿತೇಂದರ್‌ ಕುಮಾರ್‌, ಲ್ಯಾನ್ಸ್‌ ನಾಯಕ್‌ ವಿವೇಕ್‌ ಕುಮಾರ್‌, ಲ್ಯಾನ್ಸ್‌ ನಾಯಕ ಬಿ ಸಾಯ್‌ ತೇಜ್‌, ಹವಾಲ್ದಾರ್‌ ಸತ್ಪಾಲ್‌ ಸಾವನ್ನಪ್ಪಿದ್ದಾರೆ.

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಇತರೆ 13 ಮಂದಿಯನ್ನು ಹೊತ್ತು ಸಾಗುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ತಮಿಳುನಾಡಿನ ಕುನೂರ್​ನಲ್ಲಿ ಪತನಗೊಳ್ಳುತ್ತಿರುವ 19 ಸೆಕೆಂಡ್​ಗಳ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ರೈಲ್ವೆ ಹಳಿ ಬಳಿ ಇರುವ ಜನರ ಗುಂಪು ಕೆಳಗೆ ಬರುತ್ತಿದ್ದ ಹೆಲಿಕಾಪ್ಟರ್​ನ್ನು ಕುತೂಹಲದಿಂದ ವೀಕ್ಷಿಸುತ್ತಿರೋದನ್ನು ಕಾಣಬಹುದಾಗಿದೆ. ಜನರು ನೋಡ ನೋಡುತ್ತಿದ್ದಂತೆಯೇ ಎಂಐ 17 ಚಾಪರ್​​​ ದಟ್ಟವಾದ ಮಂಜಿನ ಒಳಗೆ ಕಣ್ಮರೆಯಾಗಿದೆ. ಚಾಪರ್​ನ ಎಂಜಿನ್​ ಶಬ್ಧ ಕೂಡ ಮೌನವಾಗಿದೆ. ಬಹುಶಃ ಈ ಹೊತ್ತಿಗೆ ಚಾಪರ್​​​ನ ಪತನವಾಗಿರುವ ಸಾಧ್ಯತೆ ಇರಬಹುದು.

ವಿಡಿಯೋದಲ್ಲಿರುವ ಜನರು ಏನಾಯ್ತು..? ಹೆಲಿಕಾಪ್ಟರ್​ ಪತನಗೊಂಡಿತೇ..? ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರೋದನ್ನು ಗಮನಿಸಬಹುದಾಗಿದೆ.ಆದರೆ ಈ ವಿಡಿಯೋ ನಿಜವಾಗಿಯೂ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದ್ದೇ ಎಂಬುದರ ಬಗ್ಗೆ ಇನ್ನೂ ಭಾರತೀಯ ವಾಯುಪಡೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಇದನ್ನೂ ಓದಿ :‌ ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಇದನ್ನೂ ಓದಿ : Bipin Rawat Biography: ಭಾರತದ ಹೆಮ್ಮೆಯ ಬಿಪಿನ್ ರಾವತ್ ವ್ಯಕ್ತಿಚಿತ್ರ: ಬಿಪಿನ್ ರಾವತ್ ಕಾಂಗೋ ಗಣರಾಜ್ಯ ಸೈನ್ಯದ ನಾಯಕತ್ವವನ್ನೂ ವಹಿಸಿದ್ದರು!

( Shivakrupa Friends paid tribute to Bipin Rawat CDS in Sasthan)

Comments are closed.