Zika : ಕೇರಳದಲ್ಲಿ ಹೆಚ್ಚಿದ ಝಿಕಾ ವೈರಸ್‌ : ಮಂಗಳೂರಲ್ಲಿ ಕಟ್ಟೆಚ್ಚರ

ಮಂಗಳೂರು : ಕೊರೊನಾ ವೈರಸ್‌ ಸೋಂಕಿನ ಜೊತೆಯಲ್ಲೇ ಕೇರಳದಲ್ಲಿ ಝಿಕಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೇರಳದಲ್ಲಿ ಪ್ರಕರಣದ ಸಂಖ್ಯೆ 18ಕ್ಕೆ ಏರಿಕೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ.

ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ಎರಡನೇ ಅಲೆ ತಗ್ಗಿದ್ದರೂ ಕೂಡ ಮೂರಲೇ ಅಲೆ ಕೇರಳದಲ್ಲಿ ದಿನೇ ದಿನೇ ಆತಂಕವನ್ನು ಸೃಷ್ಟಿಸುತ್ತಿದೆ. ಈ ನಡುವಲ್ಲೇ ಕೇರಳದಲ್ಲಿ ಝಿಕಾ ವೈರಸ್‌ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಗರ್ಭಿಣಿಗೆ ಕಾರಣಿಸಿಕೊಂಡಿದ್ದ ಝಿಕಾ ವೈರಸ್‌ ಇದೀಗ 18 ಮಂದಿಗೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೇರಳದಲ್ಲಿ ಕೊರೊನಾ ಜೊತೆ ಝಿಕಾ ವೈರಸ್‌ ಪ್ರಕರಣ ಹೆಚ್ಚಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೇರಳದಿಂದ ರಾಜ್ಯಕ್ಕೆ ಮರಳುವವರ ಮೇಲೆ ತೀವ್ರ ನಿಗಾ ಇಡಲು ಮುಂದಾಗಿದೆ. ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಕಡೆಗಳಲ್ಲಿ 10 ಚೆಕ್‌ ಪೋಸ್ಟ್‌ ಗಳನ್ನು ತೆರೆದಿದ್ದು, ಪ್ರಮುಖ 3 ಚೆಕ್‌ ಪೋಸ್ಟ್‌ ಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಕೇರಳ ಸಂಪರ್ಕಿಸುವ ಒಳ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಿದೆ.

ಅದ್ರಲ್ಲೂ ಕೇರಳ ಮಂಗಳೂರು ನಗರದ ಜೊತೆಗೆ ನೇರ ಸಂಪರ್ಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ 6 ಕಡೆಗಳಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ. ಕೇರಳದಿಂದ ಬರುವವರು ಕನಿಷ್ಠ 72 ಗಂಟೆಗಳ ಮೊದಲು ಮಾಡಿಸಿದ RTPCR ರಿಪೋರ್ಟ್‌ ತರಬೇಕು. ಇಲ್ಲವಾದ್ರೆ ಒಂದು ಡೋಸ್‌ ವ್ಯಾಕ್ಸಿನ್‌ ಪಡೆದಿರಬೇಕು. ಎಲ್ಲಾ ಚೆಕ್‌ ಪೋಸ್ಟ್‌ ಗಳಲ್ಲಿಯೂ RTPCR ಯೂನಿಟ್‌ ಅಳವಡಿಸಲಾಗಿದ್ದು, ರಿಪೋರ್ಟ್‌ ಹೊಂದಿಲ್ಲದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

Comments are closed.