China Lock down enforced : ಚೀನಾದಲ್ಲಿ ಸದ್ದಿಲ್ಲದೇ ಲಾಕ್ ಡೌನ್ ಜಾರಿ : ಮತ್ತೆ ಶುರುವಾಯ್ತು ಆತಂಕ

ವುಹಾನ್ : (China Lock down enforced ) ಕೋವಿಡ್ ವೈರಸ್ ಸೋಂಕಿನ ಹುಟ್ಟೂರು ಚೀನಾದಲ್ಲೀಗ ಮತ್ತೆ ಕೊರೊನಾ ಆತಂಕ ಶುರುವಾಗಿದೆ. 13 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ವುಹಾನ್ ನಗರದಲ್ಲೀಗ ಚೀನಾ ಸರಕಾರ ಸದ್ದಿಲ್ಲದೇ ನಿರ್ಬಂಧ(China Lock down enforced ) ಗಳನ್ನು ವಿಧಿಸುತ್ತಿದೆ. ಹನ್ಯಾಂಗ್, ಜಿಯಾಂಗಾನ್ ಪ್ರದೇಶಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿರುವ ಚೀನಾದಲ್ಲೀಗ ಒಂದೊಂದೆ ಪ್ರದೇಶಗಳಲ್ಲಿ ಸದ್ದಿಲ್ಲದೇ ಲಾಕ್ ಡೌನ್(China Lock down enforced ) ಜಾರಿಯಾಗುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಕೋವಿಡ್-19 (Covid 19) ವೈರಸ್ ಸೋಂಕು ಕಳೆದ ಮೂರು ವರ್ಷಗಳ ಹಿಂದೆ ಚೀನಾದ ವುಹಾನ್‌ ನಗರದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ನಂತರದಲ್ಲಿ ಕೋವಿಡ್ ಹೆಮ್ಮಾರಿ ವಿಶ್ವದಾದ್ಯಂತ ಹರಡಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಮಾತ್ರವಲ್ಲ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಆದ್ರೀಗ ಚೀನಾದಲ್ಲಿನ ಒಂದೊಂದೆ ನಗರಗಳಲ್ಲಿ ಇದೀಗ ಲಾಕ್ ಡೌನ್(China Lock down enforced ) ಹೇರಿಕೆ ಮಾಡಲಾಗುತ್ತಿದೆ.

ಸಾಮಾಜಿಕ ಹಾಗೂ ಆರ್ಥಿಕತೆ ಪರಿಸ್ಥಿಯ ಮೇಲೆ ಮೇಲೆ ಕಡಿಮೆ ಪರಿಣಾಮ ಬೀರುವ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಅದಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇತ್ತೀಚಿಗಷ್ಟೇ ಹನ್ಯಾಂಗ್‌ ಮತ್ತು ಜಿಯಾಕಾಂಗ್‌ ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ಘೋಷಿಸಲಾಗಿದ್ದು, ಸದ್ದಿಲ್ಲದೆ ನಿರ್ಬಂಧಗಳನ್ನು ಹೇರುತ್ತಿರುವ ಸ್ಥಳಗಳಲ್ಲಿ ವುಹಾನ್‌ ಕೂಡ ಒಂದಾಗಿದೆ. ಚೀನಾ ಸರಕಾರ ನಿರ್ಧಾರ ಹಲವು ಗೊಂದಲಗಳನ್ನು ಹುಟ್ಟು ಹಾಕಿದೆ. ಅಂಗಡಿ, ಮುಂಗಟ್ಟು, ರೆಸ್ಟೋರೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಅಗತ್ಯವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. 13 ಮಿಲಿಯನ್ ನಿವಾಸಿಗಳಿರುವ ನಗರವು ಇದೀಗ ಸಂಪೂರ್ಣ ಲಾಕ್‌ಡೌನ್ ನಿರ್ಬಂಧಗಳಿಗೆ ಒಳಗಾಗಿದೆ.

ಇದನ್ನೂ ಓದಿ : oral Covid-19 vaccine : ಸೂಜಿಯೆಂದರೆ ಭಯಪಡುವವರಿಗೆ ಗುಡ್​ನ್ಯೂಸ್​ :ಚೀನಾದಲ್ಲಿ ಬಂದಿದೆ ಬಾಯಿಯಿಂದ ಹೀರುವ ಕೊರೊನಾ ಬೂಸ್ಟರ್​ ಡೋಸ್​

ಕೋವಿಡ್ ವೈರಸ್ ಸೋಂಕಿನ ಕುರಿತು ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳನ್ನು ಮುಚ್ಚುವ ಕುರಿತು ಈಗಾಗಲೇ ಸರಕಾರ ನಿರ್ಧಾರ ಕೈಗೊಂಡಿದೆ. ಮಕ್ಕಳ ದೈಹಿಕ ತರಗತಿಗಳನ್ನು ಈಗಾಗಲೇ ನಿಲ್ಲಿಸಲಾಗಿದೆ. ಕೋವಿಡ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚೀನಾದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರಿಯಾಗಿ ಶೈಕ್ಷಣಿಕ ಚಟುವಟಿಕೆಗಳು ನಡೆದಿಲ್ಲ. ಈ ಬಾರಿಯೂ ಕೇವಲ ನೂರು ದಿನಗಳಿಗಿಂತ ಕಡಿಮೆ ಅವಧಿಗೆ ಶಾಲೆಗಳು ದೈಹಿಕ ಹಾಜರಾತಿ ತರಗತಿಗಳನ್ನು ನಡೆಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : Detection of covid sub-variant : ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ಹೊಸ ತಳಿ ಪತ್ತೆ : ಹೊಸ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ

ಚೀನಾದಲ್ಲಿ ಸದ್ದಿಲ್ಲದೆ ನಿರ್ಬಂಧಗಳನ್ನು ಅಧಿಕಾರಿಗಳು ಹೇರುತ್ತಿದ್ದು, ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಭವಿಷ್ಯದ ಮಾರ್ಗಸೂಚಿಗಳು ಸೇರಿದಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟವಾದ ಸೂಚನೆಗಳನ್ನು ಜನರು ನೀರಿಕ್ಷಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳು ಲಾಕ್‌ ಡೌನ್‌ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಬೀಜಿಂಗ್ ಮೂಲದ ಕನ್ಸಲ್ಟೆನ್ಸಿ ಟ್ರಿವಿಯಂ ಚೀನಾದ ಹಿರಿಯ ವಿಶ್ಲೇಷಕ ಆಂಡಿ ಚೆನ್ ತಿಳಿಸಿದ್ದಾರೆ.

(China Lock down enforced) Corona anxiety has started again in China, the birthplace of Covid virus infection. In the city of Wuhan, which has a population of 13 million, the Chinese government is quietly imposing restrictions (China Lock down enforced). In China, where the lockdown has been announced in Hanyang and Jiangnan regions, the lockdown is being implemented silently in one area after another, and the people are starting to worry again.

Comments are closed.