ಕುವೈತ್ ನಲ್ಲಿ ಕೊರೊನಾಕ್ಕೆ ಕಾರವಾರದ ಯುವಕ ಬಲಿ

0

ಕುವೈತ್ : ಕೊರೊನಾ ಮಹಾಮಾರಿಗೆ ಕುವೈತ್ ನಲ್ಲಿ ಕಾರವಾರದ ಯುವಕ ಬಲಿಯಾಗಿದ್ದಾನೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಕಳೆದ 6 ತಿಂಗಳ ಹಿಂದೆಯಷ್ಟೇ ಕುವೈತ್ ಗೆ ತೆರಳಿದ್ದ 40 ವರ್ಷದ ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯುವಕನನ್ನ ತಪಾಸಣೆಗೆ ಒಳಪಡಿಸಿದಾಗ ಯುವಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಆದ್ರೆ ಯುವಕ ಶವವನ್ನು ಊರಿಗೆ ತರುವುದಕ್ಕೆ ಸಾಧ್ಯವಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸಿದ್ದಾರೆ.

Leave A Reply

Your email address will not be published.