ಶಾಲೆ, ಕಾಲೇಜು ಬಂದ್ ಮಾಡಿ, 2 ವಾರ ಲಾಕ್ ಡೌನ್ ಹೇರಿ : ಸರಕಾರಕ್ಕೆ ಕೊವೀಡ್ ಸಮಿತಿ ಶಿಫಾರಸ್ಸು..!!

ಬೆಂಗಳೂರು : ದಿನೇ ದಿನೇ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕೊರೊನಾ 2ನೇ ಅಲೆ ಸ್ಪೋಟಗೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ 2 ವಾರಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡುವಂತೆ ಕೋವಿಡ್ ತಾಂತ್ರಿಕ ಸಮಿತಿ ಸಲಹೆಯನ್ನು ನೀಡಿದೆ.

ಮೊದಲ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಶಾಲೆ, ಕಾಲೇಜುಗಳನ್ನು ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಹೆಚ್ಚಾಗಿ ಇರುತ್ತಿದ್ದ ಮಕ್ಕಳು ಸಾಮಾಜಿಕವಾಗಿ ತೆರೆದುಕೊಂಡಿರಲಿಲ್ಲ. ಈಗ ಶಾಲೆ, ಕಾಲೇಜುಗಳು ಆರಂಭಗೊಂಡಿರುವುದರಿಂದ ಎರಡನೇ ಅಲೆಯಲ್ಲಿ ವಿದ್ಯಾರ್ಥಿಗಳು, ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುವ ಸಾಧ್ಯತೆ ಇದೆ . ಅಲ್ಲದೇ ಒಮ್ಮೆ ಸೋಂಕು ಕಾಣಿಸಿಕೊಂಡವರಲ್ಲಿಯೇ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಕೊರೊನಾ ವೈರಸ್ ಸೋಂಕಿನ ವೇಗದ ಮಿತಿಯಲ್ಲಿ ಏರಿಕೆಯಾಗಿದೆ. ಶಾಲೆ, ಕಾಲೇಜು, ಜಿಮ್, ಈಜುಕೊಳಗಳೇ ಕೊರೊನಾ ಹಾಟ್ ಸ್ಪಾಟ್ ಗಳಾಗಿದ್ದು, ಕೊರೊನಾ ಸೋಂಕಿನ ವೇಗಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕನಿಷ್ಠ ಎರಡು ವಾರಗಳ ಕಾಲ ಬಂದ್ ಮಾಡುವಂತೆ ಸೂಚನೆಯನ್ನು ನೀಡಿದೆ. ಒಂದೊಮ್ಮೆ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇದ್ರೆ ಮುಂದಿನ ಒಂದೆರಡು ದಿನಗಳಲ್ಲಿ ಕೊರೊನಾ ಸ್ಪೋಟಗೊಂಡು ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಯಿದೆ ಎಂದು ಸಮಿತಿ ಎಚ್ಚರಿಕೆಯನ್ನು ನೀಡಿದೆ.

https://kannada.newsnext.live/schools-in-tamil-nadu-to-be-shut-from-march-22-due-to-rise-in-covid-19-cases/

ರಾಜ್ಯದಲ್ಲಿ ಈಗಾಗಲೇ ನಿತ್ಯವೂ ಕೊರೊನಾ ಸೋಂಕಿನ ಪ್ರಮಾಣ ಒಂದೂವರೆ ಸಾವಿರದ ಗಡಿ ದಾಟಿದ್ದು, ಮುಂದಿನ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 3,500ರ ಗಡಿ ದಾಟಲಿದೆ. ಹೀಗಾದಲ್ಲಿ ಕಳೆದ ವರ್ಷದ ಸ್ಥಿತಿಯೇ ನಿರ್ಮಾಣವಾಗಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಾಗದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಹೀಗಾಗಿ ಶಾಲೆ, ಕಾಲೇಜು, ಹಾಸ್ಟೆಲ್, ಜಿಮ್, ಈಜುಕೊಳಗಳನ್ನು ಎರಡು ವಾರಗಳ ಕಾಲ ಬಂದ್ ಮಾಡಿದೆ. ಮದುವೆ, ಸಮಾರಂಭ, ಜಾತ್ರೆಗಲಿಗೆ ನಿರ್ಬಂಧವನ್ನು ಹೇರಬೇಕು. ಒಳಾಂಗಣ ಸಮಾರಂಭಕ್ಕೂ ಜನರನ್ನು ನಿಗದಿ ಮಾಡಿ.

ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶವನ್ನು ನೀಡುವುದರ ಜೊತೆಗೆ ಕೊರೊನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ಸೂಚಿಸಿದೆ.

https://kannada.newsnext.live/amla-help-immunity-power-fight-corona-virus-daily-eat-ayurveda/

Comments are closed.