NEWS NEXT BIG IMPACT : ದ್ವಿಚಕ್ರವಾಹನ ಓಡಾಟವಿಲ್ಲ, ಐಟಿ -ಬಿಟಿ ಕಂಪೆನಿ ಓಪನ್ ಆಗಲ್ಲ !

0

ಬೆಂಗಳೂರು : ರಾಜ್ಯದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ರಾಜ್ಯ ಸರಕಾರ ಐಟಿ ಬಿಟಿ ಕಂಪೆನಿಗಳನ್ನು ತೆರೆಯೋದಕ್ಕೆ ಮುಂದಾಗಿತ್ತು. ಆದ್ರೆ ನ್ಯೂಸ್ ನೆಕ್ಸ್ಟ್ ಈ ಕುರಿತು ವಿಸ್ತ್ರತ ವರದಿಯನ್ನು ಪ್ರಕಟಿಸಿತ್ತು. ಜೊತೆಗೆ ರಾಜ್ಯದಾದ್ಯಂತ ಸರಕಾರದ ಕ್ರಮಕ್ಕೆ ಬಾರೀ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ರಾಜ್ಯ ಸರಕಾರ ಇದೀಗ ತನ್ನ ಆದೇಶವನ್ನು ವಾಪಾಸ್ ಪಡೆದಿದೆ.

ರಾಜ್ಯ ಸರಕಾರ ಐಟಿ ಬಿಟಿ ಕಂಪೆನಿಗಳಿಗೆ ಸೋಮವಾರದಿಂದ ಅವಕಾಶ ಕಲ್ಪಿಸುತ್ತೆ ಅನ್ನೋ ಮಾಹಿತಿ ಲಭ್ಯವಾಗುತ್ತಲೇ “news next ಐಟಿ – ಬಿಟಿ ಕಂಪೆನಿ ಓಪನ್ ರಾಜ್ಯಕ್ಕೆ ಕಾದಿದೆ ಬಾರೀ ಗಂಡಾಂತರ” ಅನ್ನೋ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಸಾರ ಮಾಡಿತ್ತು.

ತದನಂತರದಲ್ಲಿ ರಾಜ್ಯ ಸರಕಾರ ಐಟಿ ಬಿಟಿ ಕಂಪೆನಿಗಳಲ್ಲಿ ಶೇ.30 ರಷ್ಟು ಸಿಬ್ಬಂಧಿಗಳು ಕಾರ್ಯನಿರ್ವಹಿಸಬಹುದು ಅಂತಾ ಅನುಮತಿಯನ್ನು ನೀಡಿತ್ತು. ಅಲ್ಲದೇ ದ್ವಿಚಕ್ರ ವಾಹನ ಓಡಾಟಕ್ಕೂ ಅವಕಾಶವನ್ನು ಕಲ್ಪಿಸಿತ್ತು.

ರಾಜ್ಯ ಸರಕಾರದ ವಿರುದ್ದ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದರ ಬೆನ್ನಲ್ಲೇ ರಾಜ್ಯ ಸರಕಾರ ಇದೀಗ ಮಧ್ಯಾಹ್ನ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಹೀಗಾಗಿ ಎಪ್ರಿಲ್ 20ರ ನಂತರ ಲಾಕ್ ಡೌನ್ ಸಡಿಲ ಮಾಡದೇ ಇರಲು ನಿರ್ಧರಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಬೈಕ್ ಸಂಚಾರವನ್ನು ನಿಷೇಧಿಸಿದೆ, ಅಲ್ಲದೇ ಐಟಿ ಕಂಪೆನಿಗಳಿಗೆ ಅಗತ್ಯಸೇವೆಗಳಿಗೆ ಅವಕಾಶ ಕೊಟ್ಟು, ಸಿಬ್ಬಂಧಿಗಳು ಮನೆಯಿಂದಲೇ (ವರ್ಕ್ ಫ್ರಮ್ ಹೋಮ್ ) ಕಾರ್ಯನಿರ್ವಹಿಸ ಬೇಕೆಂದು ಸರಕಾರ ಹೇಳಿದೆ.

Leave A Reply

Your email address will not be published.