2 crore teens vaccinated : ಮಕ್ಕಳ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು

2 crore teens vaccinated : ಹೊಸ ವರ್ಷದ ಆರಂಭದ ವೇಳೆಯಲ್ಲಿ ಕೇಂದ್ರ ಸರ್ಕಾರ ಶುಭಸುದ್ದಿಯೊಂದನ್ನು ನೀಡಿತ್ತು.ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ತಜ್ಞರ ವರದಿಗಳ ನಡುವೆಯೇ ಕೇಂದ್ರವು 15 ರಿಂದ 18 ವರ್ಷಗಳ ವಯಸ್ಸಿನವರಿಗೆ ಕೊರೊನಾ ಲಸಿಕೆಯನ್ನು ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಮಕ್ಕಳಿಗೆ ಕೊರೊನಾ ಲಸಿಕೆ ಶುರುವಾಗಿ ಕೇವಲ ಒಂದು ವಾರದ ಒಳಗಾಗಿ ಇದೀಗ ಭಾರತ ಹೊಸ ಮೈಲಿಗಲ್ಲೊಂದನ್ನು ಕ್ರಮಿಸಿದೆ.

ಹೌದು..! ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಶುರು ಮಾಡಿ ಕೇವಲ ಒಂದು ವಾರದ ಒಳಗಾಗಿ 15 ರಿಂದ 18 ವರ್ಷದೊಳಗಿನ 2 ಕೋಟಿ ಮಕ್ಕಳಿಗೆ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ನೀಡಲಾಗಿದೆ. ಈ ಬಗ್ಗೆ ಟ್ವೀಟ್​ ಮೂಲಕ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಈ ಖುಷಿ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಮಕ್ಕಳಿಗೆ ಶುಭಾಶಯ ತಿಳಿಸಿದರು.

ಮೊದಲ ಡೋಸ್​ ಕೊರೊನಾ ಲಸಿಕೆಯನ್ನು ಪಡೆದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ, ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿ ಕೇವಲ 1 ವಾರದ ಒಳಗಾಗಿಗೂ ಹದಿನೈದರಿಂದ ಹದಿನೆಂಟು ಪ್ರಾಯದ ಒಳಗಿನ ಎರಡು ಕೋಟಿಗೂ ಅಧಿಕ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್​ ಸ್ವೀಕರಿಸಿದ್ದಾರೆ ಎಂದು ಟ್ವೀಟಾಯಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 90,59,360 ಮಂದಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆ ಪಡೆದವರ ಸಂಖ್ಯೆ 1,50,61,92,903 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ 1.41 ಲಕ್ಷ ಹೊಸ ಕೋವಿಡ್​ ಪ್ರಕರಣ ಧೃಡ:3071ಕ್ಕೆ ತಲುಪಿದ ಓಮಿಕ್ರಾನ್​ ಪ್ರಕರಣ

ಭಾರತದಲ್ಲಿ ಕೋವಿಡ್​ 19 ಪ್ರಕರಣಗಳ ನಾಗಾಲೋಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,41,986 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ನಿನ್ನೆಗಿಂತ ದೈನಂದಿನ ಪ್ರಕರಣದಲ್ಲಿ 21.3 ಪ್ರತಿಶತ ಏರಿಕೆ ಕಂಡು ಬಂದಂತಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ದತ್ತಾಂಶಗಳು ಮಾಹಿತಿ ನೀಡಿವೆ. ದೇಶದಲ್ಲಿ ಪ್ರಸ್ತುತ ಒಟ್ಟೂ ಪ್ರಕರಣಗಳ ಸಂಖ್ಯೆ 3,53,68,372ಕ್ಕೆ ಏರಿಕೆ ಕಂಡಿದೆ.

ಇನ್ನು ದೇಶದಲ್ಲಿ ಅತೀ ಹೆಚ್ಚು ಕೋವಿಡ್​ ಪ್ರಕರಣಗಳನ್ನು ದಾಖಲಿಸಿರುವ ಟಾಪ್​ 5 ರಾಜ್ಯಗಳು ಯಾವುವು ಎನ್ನುವುದನ್ನು ನೋಡುವುದಾದರೆ 40,925 ಕೊರೊನಾ ಪ್ರಕರಣಗಳನ್ನು ದಾಖಲಿಸಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳ ರಾಜ್ಯ 18,213 ಪ್ರಕರಣಗಳನ್ನು ವರದಿ ಮಾಡಿದೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 17,315 ದೈನಂದಿನ ಕೋವಿಡ್ ಪ್ರಕರಣ ವರದಿಯಾಗಿದೆ. ತಮಿಳುನಾಡಿನಲ್ಲಿ 17,335 ಕೋವಿಡ್​ ಪ್ರಕರಣ ಹಾಗೂ ಕರ್ನಾಟಕದಲ್ಲಿ 8449 ಕೊರೊನಾ ಪ್ರಕರಣಗಳು ಧೃಡಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 285 ಮಂದಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಒಟ್ಟು ಕೊರೊನಾ ವೈರಸ್​ ಸಾವು ಪ್ರಕರಣ 4,83,463 ಆಗಿದೆ. ಕೇರಳದಲ್ಲಿ ಅತೀ ಹೆಚ್ಚು ಅಂದರೆ 189 ಮಂದಿ ಕೋವಿಡ್​ನಿಂದ ಒಂದೇ ದಿನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 20 ಮಂದಿ 24 ಗಂಟೆಗಳಲ್ಲಿ ಕೋವಿಡ್​ನಿಂದ ಸಾವಿಗೀಡಾಗಿದ್ದಾರೆ.
ಭಾರತದಲ್ಲಿ ರಿಕವರಿ ರೇಟ್​ 97.3 ಪ್ರತಿಶತವಾಗಿದೆ. ಕಳೆದ 24 ಗಂಟೆಗಳಲ್ಲಿ 40895 ಮಂದಿ ಕೋವಿಡ್​ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ದೇಶದಲ್ಲಿ ಒಟ್ಟು 3,44,12,740 ಮಂದಿ ಕೋವಿಡ್​ನಿಂದ ಗುಣಮುಖರಾದಂತಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 90,59,360 ಕೋವಿಡ್ ಡೋಸ್​ಗಳನ್ನು ವಿತರಿಸಿದಂತಾಗಿದೆ. ದೇಶದಲ್ಲಿ ಒಟ್ಟು 1,50,61,92,903 ಕೊರೊನಾ ಲಸಿಕೆಗಳನ್ನು ಈವರೆಗೆ ನೀಡಲಾಗಿದೆ . ಕಳೆದ 24 ಗಂಟೆಗಳಲ್ಲಿ 15,29,948 ಸ್ಯಾಂಪಲ್​ಗಳನ್ನು ಟೆಸ್ಟ್​ ಮಾಡಲಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 64 ಹೊಸ ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 3071 ಆಗಿದೆ. ಇದರಲ್ಲಿ 1203 ಮಂದಿ ಓಮಿಕ್ರಾನ್​ ರೂಪಾಂತರಿಯಿಂದ ಚೇತರಿಸಿಕೊಂಡಿದ್ದಾರೆ.

ಇದನ್ನು ಓದಿ : namma metro : ಕೊರೋನಾ ನಿಯಮಕ್ಕೆ ಡೋಂಟ್ ಕೇರ್ : ಒಂದು ವರ್ಷದಲ್ಲಿ 1 ಕೋಟಿ ದಂಡ ಸಂಗ್ರಹಿಸಿದ ನಮ್ಮ‌ಮೆಟ್ರೋ

ಇದನ್ನೂ ಓದಿ : Curfew Relaxation : ಕಾಂಗ್ರೆಸ್ ಗಾಗಿ ಕರ್ಪ್ಯೂ ಸಡಿಲಿಕೆ : ರೆಸಾರ್ಟ್, ರೆಸ್ಟೋರೆಂಟ್ ಗೆ ಅವಕಾಶ ಕೊಟ್ಟ ಸರ್ಕಾರ

‘Great going, my young friends’: Health Minister Mansukh Mandaviya after 2 crore teens vaccinated

Comments are closed.