mild cold or omicron : ಸಾಮಾನ್ಯ ಶೀತ ಹಾಗೂ ಓಮಿಕ್ರಾನ್​ ಲಕ್ಷಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ

mild cold or omicron : ಚಳಿಗಾಲದಲ್ಲಿ ನೆಗಡಿ ಬರುವುದು ಸಾಮಾನ್ಯ, ಆದರೆ ಕೊರೊನಾದಿಂದಾಗಿ ನೆಗಡಿ ಕೂಡ ಒಂದು ಗಂಭೀರ ಸಮಸ್ಯೆ ಎನಿಸಲು ಆರಂಭವಾಗಿದೆ. ಅದರಲ್ಲೂ ಓಮಿಕ್ರಾನ್​ ಅತ್ಯಂತ ವೇಗವಾಗಿ ಹರಡುತ್ತಿರೋದ್ರಿಂದ ಇನ್ನಷ್ಟು ಕಳವಳ ಹೆಚ್ಚಾಗಿದೆ. ಇದು ಡೆಲ್ಟಾ ರೂಪಾಂತರಿಗಿಂದ ಹೆಚ್ಚು ವೇಗವಾಗಿ ಹರಡುತ್ತಿದೆ. ಓಮಿಕ್ರಾನ್​ ರೂಪಾಂತರಿ ರೋಗ ಲಕ್ಷಣಗಳು ಸಾಮಾನ್ಯ ಶೀತದ ಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನಗಳು ಹೇಳಿವೆ. ಓಮಿಕ್ರಾನ್​ ಸೋಂಕಿಗೆ ಒಳಗಾದವರು ನೆಗಡಿ, ತಲೆನೋವು. ಆಯಾಸ, ಸೀನು ಹಾಗೂ ಗಂಟಲು ನೋವಿನಂತಹ ಲಕ್ಷಣಗಳನ್ನು ಹೊಂದಿರುತ್ತಾರೆ. ಆದರೆ ಸಾಮಾನ್ಯ ಶೀತಕ್ಕೂ ಓಮಿಕ್ರಾನ್​ ಸೋಂಕಿನ ಲಕ್ಷಣಗಳಿಗೂ ಏನು ವ್ಯತ್ಯಾಸವಿದೆ ಎಂಬುದನ್ನು ತಿಳಿದುಕೊಳ್ಳೋಣ.

ಕೊರೊನಾ ವೈರಸ್​ ಹಾಗೂ ಸಾಮಾನ್ಯ ನೆಗಡಿ ನಡುವಿನ ವ್ಯತ್ಯಾಸವೇನು..?

ನಿಮಗೆ ಶೀತ ಇದ್ದರೆ, ನಿಮಗೆ ನೋಯುತ್ತಿರುವ ಗಂಟಲು ಮತ್ತು ಸ್ರವಿಸುವ ಮೂಗು ಇರುತ್ತದೆ. ಕೆಲವು ದಿನಗಳ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಅನೇಕ ರೋಗಿಗಳಿಗೆ ತಲೆನೋವು ಮತ್ತು ಜ್ವರವೂ ಇರುತ್ತದೆ. ಆದರೆ ಕೊರೊನಾದಲ್ಲಿ ನಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಒಣ ಕೆಮ್ಮು ಬರಲು ಆರಂಭವಾಗುತ್ತೆ.

ಈ ರೋಗ ಲಕ್ಷಣಗಳಿದ್ದರೆ ಖಂಡಿತವಾಗಿ ಕೋವಿಡ್​ ಪರೀಕ್ಷೆಗೆ ಒಳಗಾಗಿ
ನಿಮಗೆ ಜ್ವರ ಹಾಗೂ ಒಣ ಕೆಮ್ಮು ಇದ್ದರೆ ನೀವು ಕೂಡಲೇ ಕೋವಿಡ್​ 19 ಪರೀಕ್ಷೆ ಮಾಡಿಸಿಕೊಳ್ಳಿ. ಅಲ್ಲದೇ ಉಸಿರಾಟದ ತೊಂದರೆ, ಸ್ನಾಯು ನೋವು ಮತ್ತು ಆಯಾಸವಿದ್ದೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ.

ಇದು ಕೋವಿಡ್​ ಲಕ್ಷಣವಲ್ಲ
ಕೇವಲ ನಿಮ್ಮ ಮೂಗು ಮಾತ್ರ ಸೋರುತ್ತಿದ್ದರೆ ಅದು ಭಾಗಶಃ ಕೊರೊನಾ ಲಕ್ಷಣವಲ್ಲ. ಹೆಚ್ಚುತ್ತಿರುವ ಶೀತದಿಂದಾಗಿ ನಿಮಗೆ ನೆಗಡಿ ಆಗಿರಬಹುದು. ಗಂಟಲು ನೋವಿದ್ದರೆ ಅದು ಹವಾಮಾನ ವೈಪರಿತ್ಯದಿಂದ ಉಂಟಾಗಿರಬಹುದು.

ಇದನ್ನು ಓದಿ : Bedroom Vaastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

ಇದನ್ನೂ ಓದಿ : success in business: ವ್ಯವಹಾರದಲ್ಲಿ ಪ್ರಗತಿಗಾಗಿ ಕಚೇರಿಯಲ್ಲಿ ತಂದಿಡಿ ಈ ವಿಶೇಷ ವಸ್ತು

ಇದನ್ನೂ ಓದಿ : ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಿರುತ್ತದೆ ಓಮಿಕ್ರಾನ್​ : ಅಧ್ಯಯನ

health tips have a mild cold or omicron do not ignore these symptoms health tips

Comments are closed.