Omicron Treatment : ಹಳೆ ತಪ್ಪಿನಿಂದ ಪಾಠ ಕಲಿತ ಬಿಬಿಎಂಪಿ : ನಗರದಲ್ಲಿ ಓಮೈಕ್ರಾನ್ ಚಿಕಿತ್ಸೆಗೆ ಆಸ್ಪತ್ರೆಗಳು ಸಿದ್ಧ

ಬೆಂಗಳೂರು : ರಾಜ್ಯದಲ್ಲಿ ಮೂರು ಓಮೈಕ್ರಾನ್ ಪ್ರಕರಣಗಳು ದಾಖಲಾಗಿದೆ. ಜೊತೆಗೆ ನಿಧಾನಕ್ಕೆ ಕರೋನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಾಗಿ ಹಳೆ ತಪ್ಪುಗಳಿಂದ ಪಾಠ ಕಲಿತಿರುವ ರಾಜ್ಯ ಸರ್ಕಾರ ಮೂರನೇ ಅಲೆಯ ಭೀತಿಗೆ ಈಗಾಗಲೇ ಸಿದ್ಧವಾಗಿದ್ದು, ಬೂಸ್ಟರ್ ಡೋಸ್ ಬೇಡಿಕೆಯನ್ನು ಕೇಂದ್ರಕ್ಕೆ ಸಲ್ಲಿಸಿರುವ ಜೊತೆಗೆ ಜನಗಳ ಆರೈಕೆಗೆ ಆಸ್ಪತ್ರೆಯನ್ನು (Omicron Treatment) ಸಿದ್ಧಗೊಳಿಸಿದೆ.

ಕರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಜನರು ಕೊರೋನಾ ಸೋಂಕಿಗಿಂತ ಹೆಚ್ಚು ಸೌಲಭ್ಯಗಳ ಕೊರತೆ, ಆಕ್ಸಿಜನ್ ಪೊರೈಕೆ ವ್ಯತ್ಯಯ, ಐಸಿಯು ಬೆಡ್ ಕೊರತೆಯಿಂದಲೇ ಸಾವನ್ನಪ್ಪಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಿದ್ದರೇ, ಪ್ರವೈಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿಯಾಗಿತ್ತು. ಹೀಗಾಗಿ ಹಲವರು ಬಡ,ಮಧ್ಯಮ ವರ್ಗದ ಜನರು ಪ್ರಾಣ ಕಳೆದಕೊಂಡಿದ್ದರು.

ಈ ತಪ್ಪುಗಳಿಂದ ಪಾಠ ಕಲಿತಿರುವ ರಾಜ್ಯ ಸರ್ಕಾರ ಹಾಗೂ ನಗರಾಢಳಿತ ಸದ್ಯ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಓಮೈಕ್ರಾನ್ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 120 ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಬೌರಿಂಗ್ ಬಳಿಕ ರಾಜೀವಗಾಂಧಿ ಆಸ್ಪತ್ರೆಯಲ್ಲಿ ಮೊಬೈಲ್ ಆಸ್ಪತ್ರೆ ನಿರ್ಮಿಸಲಾಗಿದೆ. ಇಲ್ಲಿ ಒಟ್ಟು 200 ಬೆಡ್ ಗಳಲ್ಲಿ 37 ಐಸಿಯು ಬೆಡ್ ಹಾಗೂ 163 ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆ ಮಾಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಗಳು ಭರ್ತಿಯಾದ ಬಳಿಕ ಇಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲು ಸರ್ಕಾರ ಸಿದ್ಧತೆ ನಡೆಸಿದೆ. ಓಮಿಕ್ರಾನ್ ಚಿಕಿತ್ಸೆಗಾಗಿ ಸರ್ಕಾರ ಒಟ್ಟು 320 ಬೆಡ್ ಗಳನ್ನು ಮೀಸಲಿರಿಸಿದೆ.

ಈ ಮಧ್ಯೆ ರಾಜ್ಯದಲ್ಲಿ ಬೂಸ್ಟರ್ ಡೋಸ್ ಕುರಿತು ಕೂಡ ಚರ್ಚೆ ನಡೆದಿದ್ದು, ವಿದೇಶಿ ಮಾದರಿಯಲ್ಲಿ ಕ್ರಾಸ್ ಓವರ್ ಬೂಸ್ಟರ್ ಡೋಸ್ ನೀಡಬೇಕೆಂಬ ಅಗ್ರಹ ತಜ್ಞರಿಂದ ವ್ಯಕ್ತವಾಗುತ್ತಿದೆ. ವಿದೇಶಗಳಲ್ಲಿ ಈಗಾಗಲೇ ಕ್ರಾಸ್ ಓವರ್ ಬೂಸ್ಟರ್ ಡೋಸ್ ಫೇಮಸ್ ಆಗಿದೆ. ಕ್ರಾಸ್ ಓವರ್ ಬೂಸ್ಟರ್ ಡೋಸ್ ಎಂದರೇ ಎರಡು ಡೋಸ್ ಕೋವಿಶಿಲ್ಡ್ ಪಡೆದ ರೋಗಿಗೆ ಕೋವಾಕ್ಸಿನ್ ನೀಡುವುದು ಹಾಗೂ ಎರಡು ಡೋಸ್ ಕೋವಾಕ್ಸಿನ್ ಪಡೆದವರಿಗೆ ಕೋವಿಶೀಲ್ಡ್ ನೀಡುವುದು. ಈ ರೀತಿ ಕ್ರಾಸ್ ಓವರ್ ಬೂಸ್ಟರ್ ಡೋಸ್ ನೀಡೋ ದರಿಂದ ಜನರ ದೇಹದಲ್ಲಿ ಕರೋನಾ ಎದುರಿಸುವಂತಹ ಪ್ರತಿಕಾಯಗಳ ಪ್ರಮಾಣ ಹೆಚ್ಚಲಿದೆ ಎಂದು ವೈದ್ಯರುಗಳು ಅಭಿಪ್ರಾಯಿಸಿದ್ದಾರೆ. ಹೀಗಾಗಿ ಇದಕ್ಕೂ ಒತ್ತಡ ಹೆಚ್ಚಿದೆ.

ಇನ್ನು ಕೇವಲ ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ ಓಮೈಕ್ರಾನ್ ಪೀಡಿತರಿಗೆ ಬೆಂಗಳೂರಿನ ಆರು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು, ಸುಗುಣ ಹಾಸ್ಪಿಟಲ್, ಸಕ್ರಾ,ರೆನ್ ಬೋ, ಪೋರ್ಟಿಸ್, ಅಪೋಲೋ ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಕಾರಿ ನಿಯಮಗಳನ್ನು ಅನುಸರಿಸುವ ಮೂಲಕ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ : Corona Mask Test : ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು

ಇದನ್ನೂ ಓದಿ : Omicron patient discharge : ಕೊರೋನಾಂತಕದ ನಡುವೆ ಸಮಾಧಾನದ ಸುದ್ದಿ: ಓಮೈಕ್ರಾನ್ ಸೋಂಕಿತ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್

( Hospitals geared for treatment in the wake of increasing Omicron)

Comments are closed.