Corona Vaccine : ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ರೇಷನ್‌ : ಸರಕಾರದ ಹೊಸ ಆದೇಶ

ಭೋಪಾಲ್‌ : ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆ (Corona Vaccine) ನೀಡುವ ಕಾರ್ಯವನ್ನು ದೇಶದಾದ್ಯಂತ ಮಾಡಲಾಗುತ್ತಿದೆ. ಆದರೆ ಬಹುತೇಕ ರಾಜ್ಯಗಳಲ್ಲಿನ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸರಕಾರಗಳು ನಾನಾ ಕಸರತ್ತು ನಡೆಸುತ್ತಿದ್ದು ಈ ರಾಜ್ಯ ಸರಕಾರ ಕೊರೊನಾ ಲಸಿಕೆ ಪಡೆಯದವರಿಗೆ ಪಡಿತರ ಸಾಮಗ್ರಿ ನೀಡದಿರಲು ತೀರ್ಮಾನಿಸಿದೆ.

ಮಧ್ಯಪ್ರದೇಶದಲ್ಲಿ ಕೊರೊನಾ ಎರಡನೇ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರು ಮೊದಲ ಡೋಸ್‌ ಲಸಿಕೆಯನ್ನೇ ಸರಿಯಾಗಿ ಪಡೆದಿಲ್ಲ. ಹೀಗಾಗಿಯೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಫಲಾನುಭವಿಗಳು ಕೊರೊನಾ ಲಸಿಕೆಯನ್ನು ಪಡೆಯದೇ ಸಬ್ಸಿಡಿ ಪಡಿತರ ಪಡೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ರಾಜ್ಯ ಸರಕಾರ ಆಹಾರ ಮಾತ್ತು ನಾಗರೀಕ ಸರಬರಾಜು ಇಲಾಖೆಯ ಮೂಲಕ ಈಗಾಗಲೇ ಕೊರೊನಾ ಲಸಿಕೆಯನ್ನು ಪಡೆಯುವಂತೆ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಈಗಾಗಲೇ ಪಡಿತರ ಅಂಗಡಿಗಳಲ್ಲಿ ರಾಜ್ಯ ಸರಕಾರದ ಆದೇಶದ ಪ್ರತಿಯನ್ನು ಪ್ರಕಟಿಸಲಾಗಿದೆ. ಸರಕಾರದ ಆದೇಶದ ಪ್ರಕಾರ ಡಿಸೆಂಬರ್‌ ೩೧ರ ಒಳಗಾಗಿ ಎಲ್ಲಾ ಕುಟುಂಬಗಳು ಕೊರೊನಾ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕಾಗಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಪಡೆಯುವ ಕುಟುಂಬಗಳು ಕೊರೊನಾ ಲಸಿಕೆಯನ್ನು ಪಡೆದುಕೊಂಡಿದೆಯೇ ಅನ್ನೋದನ್ನು ಖಚಿತ ಪಡಿಸಿಕೊಂಡೇ ಪಡಿತರ ನೀಡುವಂತೆ ಸೂಚನೆಯನ್ನು ನೀಡಲಾಗಿದೆ. ಅಷ್ಟೇ ಅಲ್ಲದೇ ಒಂದೊಮ್ಮೆ ಕೊರೊನಾ ಲಸಿಕೆ ಪಡೆಯದ ಕುಟುಂಬಗಳ ಮಾಹಿತಿಯನ್ನು ಸ್ಥಳೀಯ ಆಸ್ಪತ್ರೆಗಳಿಗೆ ವಾರಕ್ಕೊಮ್ಮೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆಯ ಕುರಿತು ಅಭಿಯಾನ ನಡೆಯುತ್ತಿದೆ. ಈಗಾಗಲೇ ನೂರು ಕೋಟಿಗೂ ಅಧಿಕ ಮಂದಿ ಕೊರೊನಾ ಮೊದಲ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದೀಗ ಶೇಕಡಾ ನೂರರಷ್ಟು ಲಸಿಕೆ ನೀಡುವ ಸಲುವಾಗಿ ಕೇಂದ್ರ, ರಾಜ್ಯ ಸರಕಾರಗಳು ಶತಪ್ರಯತ್ನವನ್ನು ನಡೆಸುತ್ತಿವೆ. ಒಟ್ಟಿನಲ್ಲಿ ಮಧ್ಯಪ್ರದೇಶ ಸರಕಾರ ಜಾರಿಗೆ ತಂದಿರುವ ಹೊಸ ಕಾನೂನು ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : ವಾಕ್ಸಿನ್ ಗುರಿ ತಲುಪಲು ಸರ್ಕಾರದ ಹೊಸ ಅಸ್ತ್ರ: ನೋವಾಕ್ಸಿನ್ ನೋ ಟ್ರೀಟ್ಮೆಂಟ್

ಇದನ್ನೂ ಓದಿ : ಲಸಿಕೆ ತಲುಪಿಸೋಕೆ ಡ್ರೋನ್‌ : ರಾಜಧಾನಿಯಲ್ಲಿ ಯಶಸ್ವಿಯಾಯ್ತು ಹೊಸ ಸಾಹಸ

( fully Corona Vaccine Family to get Ration from next year Madhya Pradesh )

Comments are closed.