Special gift Sudeep : ಬಾಲಿವುಡ್ ನಿಂದ ಬಾದಶಾ ಸುದೀಪ್ ಗೆ ಬಂತು ಸ್ಪೆಶಲ್ ಗಿಫ್ಟ್

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ರದ್ದು ಅಜಾತ ಶತ್ರು ವ್ಯಕ್ತಿತ್ವ.‌ಮಾತ್ರವಲ್ಲ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲ ಎಲ್ಲ ಸಿನಿಮಾ ರಂಗದಲ್ಲೂ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಇಂತಿಪ್ಪ ಸುದೀಪ್ ಗೆ ಈಗ ಬಾಲಿವುಡ್ ನಿಂದ ಸ್ಪೆಶಲ್ ಗಿಫ್ಟ್ ವೊಂದು ಸಲ್ಲಿಕೆಯಾಗಿದ್ದು ಸುದೀಪ್ (Special gift Sudeep) ಇದನ್ನು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನ ತಾರಾ ದಂಪತಿ ರಿತೇಶ್ ದೇಶಮುಖ್ ಹಾಗೂ ಜೆನಿಲಿಯಾ ದಂಪತಿ ಹಾಗೂ ಸ್ಯಾಂಡಲ್ ವುಡ್ ನ ಸುದೀಪ್ ನಡುವೆ ಒಳ್ಳೆಯ ಸ್ನೇಹವಿದೆ. ಹಲವಾರು ಬಾರಿ ಸುದೀಪ್ ಕೂಡ ಈ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾರೆ.

ಇದೀಗ ರಿತೇಶ್ ಮತ್ತು ಜೆನಿಲಿಯಾ ದಂಪತಿ ತಮ್ಮ ಸ್ಯಾಂಡಲ್ ವುಡ್ ಸ್ನೇಹಿತ ಸುದೀಪ್ ಗಾಗಿ ಸ್ಪೆಶಲ್ ಗಿಫ್ಟ್ ವೊಂದನ್ನು ಕಳುಹಿಸಿಕೊಟ್ಟಿದ್ದಾರೆ. ಸ್ವತಃ ಸುದೀಪ್ ಈ ಸ್ಪೆಶಲ್ ಗಿಫ್ಟ್ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ಗೆ ರಿತೇಶ್ ಹಾಗೂ ಜೆನಿಲಿಯಾ ಬ್ಯಾಗ್ ಹಾಗೂ ಇನ್ನಷ್ಟು ಗಿಫ್ಟ್ ಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಈ ಗಿಫ್ಟ್ ನ ಪೋಟೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರೋ ಸುದೀಪ್ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದು ತುಂಬಾ ಮುದ್ದಾದ ಸಪ್ರೈಸ್. ತುಂಬಾ ಇಷ್ಟವಾಯಿತು. ನಿಮ್ಮಿಬ್ವರಿಗೂ ಶುಭಾಶಯಗಳು ಎಂಬ ಸಾಲನ್ನು ಸುದೀಪ್ ಶೇರ್ ಮಾಡಿದ್ದಾರೆ. ರಿತೇಶ್ ಮತ್ತು ಜೆನಿಲಿಯಾ ಇಮ್ಯಾಜಿನ್ ಮೀಟ್ ಎಂಬ ಹೆಸರಿನಲ್ಲಿ ಆಹಾರ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಮಾಂಸಹಾರದಂತಿರುವ ಸಸ್ಯಹಾರ ಎಂಬರ್ಥದ ಈ ಆಹಾರ ಉದ್ಯಮ ದ ಪರವಾಗಿ ಸುದೀಪ್ ಗೆ ಈ ಗಿಫ್ಟ್ ಕಳುಹಿಸಿದ್ದಾರಂತೆ.

ಈ ಗಿಫ್ಟ್ ನ ಪೋಟೋ ವನ್ನು ಸುದೀಪ್ ಶೇರ್ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ರಿತೇಶ್ ಹಾಗೂ ಜೆನಿಲಿಯಾ ಈ ಉದ್ಯಮ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದರಂತೆ. ಆದರೆ ಕೊರೋನಾದಿಂದ ಸಾಧ್ಯವಾಗಿರಲಿಲ್ಲ ಈಗ ಉದ್ಯಮ ಆರಂಭಗೊಂಡಿದ್ದು ಅಮೇರಿಕಾ, ಜರ್ಮನಿ ಹಾಗೂ ಭಾರತದಲ್ಲಿ ರಿತೇಶ್ ಮತ್ತು ಜೆನಿಲಿಯಾ ಈ ಉದ್ಯಮವನ್ನು ವಿಸ್ತರಿಸಿದ್ದಾರಂತೆ.

ಕಳೆದ ಡಿಸೆಂಬರ್ ನಲ್ಲಿ ಜೆನಿಲಿಯಾ ಹಾಗೂ ರಿತೇಶ್ ದಂಪತಿ ಸುದೀಪ್ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಸುದೀಪ್ ರಿತೇಶ್ ಜೆನಿಲಿಯಾಗೆ ಒಳ್ಳೆಯ ವೆಜ್ ಅಡುಗೆ ಮಾಡಿ ಬಡಿಸಿದ್ದರು. ಈ ಪೋಟೋ ಕೂಡ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ : Sudeep : ಸುದೀಪ್ ಗಾಗಿ ಅಭಿಮಾನಿಗಳ ಉರುಳುಸೇವೆ : ಕಿಚ್ಚನಿಗೆ ಅಂತಹದ್ದೇನಾಯ್ತು ಗೊತ್ತಾ?!

ಇದನ್ನೂ ಓದಿ : Sudeep: ಕಿಚ್ಚನ ಹೆಸರಲ್ಲಿ ಬಂತು ಅಂಚೆ ಸ್ಟ್ಯಾಂಪ್: ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಯ ಗಿಫ್ಟ್

( Special gift from Bollywood actor Riteish Deshmukh and Genelia to Badsha Sudeep)

Comments are closed.